ವೇದಗಳು
ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು.
ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು - ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು, ಋಗ್ವೇದದ ಕಾಲ ಕ್ರಿ.ಪೂ ೧೫೦೦ಕ್ಕಿಂ
ತ ಹಿಂದೆ ಇದ್ದಿರಬಹುದು. ವೇದ ವಾಙ್ಮಯ ಪ್ರಭಾವವು ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಬೆಳವಣಿಗೆಯಲ್ಲಿ ಪ್ರಮುಖವಾದುದು.
ಉಪನಿಷತ್ತುಗಳನ್ನು ವೇದಾಂತ ಎನ್ನುತ್ತಾರೆ.
ಉಗಮ
ಹಿ೦ದೂ ಸ೦ಪ್ರದಾಯದ೦ತೆ ವೇದಗಳು ಅಪೌರುಷೇಯವಾದವು, ಎ೦ದೆ೦ದಿಗೂ ಅಸ್ತಿತ್ವದಲ್ಲಿ ಇದ್ದಿರುವ೦ಥವು. ಹೀಗೆ ಅವು ಹಿ೦ದೂ ಶ್ರುತಿ ಪಠ್ಯಗಳ ಗು೦ಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿ೦ದ ಬಹಳಷ್ಟು ಸಿದ್ಧಾ೦ತಗಳನ್ನು ಕ೦ಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿ೦ದಲೂ ಅಸ್ತಿತ್ವದಲ್ಲಿದ್ದಿವೆ ಎ೦ದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದ೦ತೆ ವೇದಗಳ ಸ೦ಕಲನ ಸುಮಾರು ಕ್ರಿ.ಪೂ ೧೮೦೦ ಕ್ಕೆ ಪ್ರಾರ೦ಭವಾಗಿ ಕ್ರಿ.ಪೂ ೮೦೦ ರ ವರೆಗೆ ಎ೦ದು.
ಸಾ೦ಪ್ರದಾಯಿಕವಾಗಿ, ಋಗ್ವೇದ ಸ೦ಹಿತೆಯ ಸ೦ಕಲನ ವೇದವ್ಯಾಸರ ಸೂಚನೆಯ೦ತೆ ಪೈಲ ಮಹರ್ಷಿಗಳಿ೦ದ ನಡೆಯಿತ೦ತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮ೦ತ್ರಗಳ ಸ೦ಕಲನ ಯಜುರ್ವೇದ ಸ೦ಹಿತೆಯಾಗಿ ಬೆಳೆಯಿತು. ಸ೦ಗೀತಕ್ಕೆ ಹೊ೦ದುವ೦ತೆ ಬರೆಯಲಾದ ಅನೇಕ ಮ೦ತ್ರಗಳ ಸ೦ಕಲನ ಸಾಮವೇದ - ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.
ಭಾಗಗಳು
ಪ್ರತಿ ವೇದವನ್ನೂ ನಾಲ್ಕು ಭಾಗಗಳಾಗಿ ವಿ೦ಗಡಿಸಬಹುದು:
ಸ೦ಹಿತೆ - ಮ೦ತ್ರಗಳನ್ನು ಒಳಗೊ೦ಡ ಭಾಗ
ಬ್ರಾಹ್ಮಣ - ಧಾರ್ಮಿಕ ಆಚರಣೆಗಳನ್ನು ಕುರಿತ ಭಾಗ
ಆರಣ್ಯಕ - ಧ್ಯಾನಕ್ಕೆ ಸ೦ಬ೦ಧಪಟ್ಟದ್ದು
ಉಪನಿಷತ್ - ತಾತ್ವಿಕ ಮತ್ತು ಅಧ್ಯಾತ್ಮಿಕ ಭಾಗ. ಉಪನಿಷತ್ತುಗಳು ವೈದಿಕ ತತ್ವಶಾಸ್ತ್ರದ ಮುಖ್ಯ ಪಠ್ಯಗಳು.
ಋಗ್ವೇದ
ನಾಲ್ಕು ವೇದಗಳಲ್ಲಿ ಮೊದಲನೆಯದು.ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ. ಈ ವೇದದ ಮಂತ್ರಗಳನ್ನು ಯಜ್ಞ,ಯಾಗಾದಿಗಳನ್ನು ಮಾಡುವಾಗ, ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ. ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ. ಆಯುರ್ವೇದ ಇದರ ಉಪವೇದ.
ಯಜುರ್ವೇದ
ಯಜುರ್ವೇದನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ. ಇದರಲ್ಲಿ ೪೦ ಅಧ್ಯಾಯಗಳಿವೆ. ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು. ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ. ಧನುರ್ವೇದ ಇದರ ಉಪವೇದ.
ಸಾಮವೇದ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ. ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ ೭೮ ಮಂತ್ರಗಳು ಮಾತ್ರ ಹೊಸತಾಗಿವೆ. ಇದರಲ್ಲಿ ೧೫ ಭಾಗಗಳಿದ್ದು ೩೨ ಅಧ್ಯಾಯಗಳಿವೆ. ಗಾಂಧರ್ವವೇದ ಇದರ ಉಪವೇದ.
ಅಥರ್ವವೇದ
ಅಥರ್ವವೇದಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು. ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸೆರು. ಇದರಲ್ಲಿ ೨೦ ಕಾಂಡಗಳೂ, ೭೬೦ ಸೂಕ್ತಗಳೂ, ೬೦೦೦ ಮಂತ್ರಗಳೂ ಇವೆ. ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ. ಈ ವೇದದಲ್ಲಿ ವಿವಾಹ ಪದ್ಧತಿ, ಶವಸಂಸ್ಕಾರ, ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ.ಮಾಟ ಮಂತ್ರ,ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಧನುರ್ವಿದ್ಯೆ, ರೋಗನಿವಾರಣೋಪಾಯ, ಔಷಧಿಗಳ ವಿವರ ಕೂಡಾ ಇದರಲ್ಲಿದೆ.ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ.
(ಆಧಾರ :-ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್)

ಅಥರ್ವ ವೇದದ ಪ್ರತಿ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ
ReplyDeleteಅಥರ್ವ ವೇದದ ಪ್ರತಿ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ
Deleteವೇದ ಮಂತ್ರಗಳ ಪುಸ್ತಕ ಎಲ್ಲಿ ದೊರೆಯುತ್ತವೆ ತಿಳಿಸಿ
ReplyDeleteಪುಸ್ತಕ ಎಲ್ಲಿ ಸಿಗುತ್ತೆ sir
DeleteHenth paristhi Veda pustak silditaella
DeleteAthrvaveda samhitheya kannada lipiya pusthaka/pdf yelli Dorakuvudu dsyavitu Ii. Phone no ge sms madi7022874886/9945754692 Shankar Shatma
ReplyDeleteಇಷ್ಟೆಲ್ಲ ಬರೆಯುವ ಬದಲು ನೀವೇ ತಿಳಿಸಿದ ದಿನಕ್ಕೆ ಒಂದು ಮಂತ್ರ ಇಲ್ಲಿ ಬರೆಯುತ್ತಾ ಹೋಗಿದ್ದರೆ ಕಲಿಯುವ ನಮ್ಮಂತ ಶ್ರದ್ದಾಳುಗಳಿಗೆ ತುಂಬಾ ಉಪಯೋಗವಾಗುತ್ತಿತ್ತು ಅನ್ಯತಾ ಭಾವಿಸಬೇಡಿ ತಪ್ಪಿದ್ದರೆ ಕ್ಷಮಿಸಿ 🙏
ReplyDeleteAtrvana veda book yallie ciguti
ReplyDeleteಅಥರ್ವ ಸಂಚಾರಿ ವರ್ತಕ , ಅಗ್ನಿ ವಾಹಕ , ಆತ್ಮ ನೆ ಅಗ್ನಿ ಕೇವಲ ಆತ್ಮಜ್ಞಾನ ಓಂ ಕಾರ ವಾಯು ಅಗ್ನಿ ಸ್ಮರಣೆ ಪ್ರತಿ ನಿತ್ಯ ಬ್ರಹ್ಮ ಮುಹೂರ್ತ ೩ ರಿಂದ ೬ ರಾ ವರೆಗೆ ನಡೆಸಿದರೆ ಬಹುಶಃ ನಿಮ್ಮ ಪ್ರಶ್ನೆ ಗಳಿಗೆ ಉತ್ತರ ಸಿಗಬಹುದು... ಸಿಕ್ಕರೆ ತಿಳಿಸಿ ಜೈ ಶ್ರೀ ರಾಮ್
ReplyDeleteವೇದ ಮಂತ್ರಗಳ ಪುಸ್ತಕ ಎಲ್ಲಿ ಸಿಗುವುದು
ReplyDeletecongrts
ReplyDeleteವೇದಗಳನ್ನು ಹೇಗೆ ರಚಿಸಲಾಯಿತು ಮತ್ತು ಯಾರು ರಚಿಸಿದರು
ReplyDelete