ಪ್ರಶ್ನೋಪನಿಶದ್ : ಪ್ರಶ್ನೆ 3 (1 -3)
ಅಥ ಹೈನಂ ಕೌಸಲ್ಯ ಆಶ್ವಲಾಯನಃ ಪಪ್ರಚ್ಛ । ಭಗವನ್ ಕುತ ಏಷ ಪ್ರಾಣೋ ಜಾಯತೇ । ಕಥಮಾಯಾತಿ ಅಸ್ಮಿನ್ ಶರೀರೇ । ಆತ್ಮಾನಂ ವಾ ಪ್ರವಿಭಜ್ಯ ಕಥಂ ಪ್ರತಿಷ್ಠತೇ । ಕೇನೋತ್ಕ್ರಮತೇ ಕಥಂ ಬಾಹ್ಯಮಭಿ ಧತೇ ಕಥಮಧ್ಯಾತ್ಮಮಿತಿ ॥ ೧॥
ಎರಡು ಪ್ರಶ್ನೆಗಳ ವಿವರಣೆಯನ್ನು

ಪಿಪ್ಪಲಾದರಿಂದ ಕೇಳಿ ತಿಳಿದ ಮೇಲೆ, ಮೂರನೇ ಋಷಿ ಕೌಸಲ್ಯ ಆಶ್ವಲಾಯನರು ತನ್ನ
ಪ್ರಶ್ನೆಯನ್ನು ಗುರುಗಳ ಮುಂದಿಡುತ್ತಾರೆ. ಅವರು ಕೇಳುತ್ತಾರೆ: “ ಯಾವ ಕಾರಣಕ್ಕೋಸ್ಕರ
ಪ್ರಾಣತತ್ತ್ವದ ಆವಿರ್ಭಾವವಾಯಿತು ಮತ್ತು ಅದು ಯಾರಿಂದಾಯಿತು” ಎಂದು. ಹಿಂದೆ ಎಲ್ಲವೂ
ಪ್ರಜಾಪತಿ ನಾಮಕ ಭಗವಂತನಿಂದ ಸೃಷ್ಟಿಯಾಯಿತು ಎನ್ನುವ ವಿವರಣೆಯನ್ನು ಪಿಪ್ಪಲಾದರು
ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಆಶ್ವಲಾಯನರು ವಿಶೇಷವಾಗಿ ಪ್ರಾಣತತ್ವದ
ಬಗೆ ಮತ್ತು ಅದರ ಆವಿರ್ಭಾವದ ಹಿನ್ನೆಲೆಯನ್ನು ಪಿಪ್ಪಲಾದರಲ್ಲಿ
ಪ್ರಶ್ನಿಸುತ್ತಿದ್ದಾರೆ. “ಪ್ರಾಣದೇವರು ಹೇಗೆ ನಮ್ಮ ದೇಹವನ್ನು ಪ್ರವೇಶ ಮಾಡುತ್ತಾರೆ
ಮತ್ತು ದೇಹದಲ್ಲಿ ಅನೇಕ ರೂಪಗಳಿಂದ ಏನನ್ನು ನಿಯಂತ್ರಣ ಮಾಡುತ್ತಾರೆ ಎನ್ನುವುದನ್ನು
ಆಶ್ವಲಾಯನರು ಪಿಪ್ಪಲಾದರಿಂದ ತಿಳಿಯಬಯಸುತ್ತಾರೆ. ನಮಗೆ ತಿಳಿದಂತೆ ಪ್ರಾಣದೇವರು
ನಮ್ಮೊಳಗೆ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎನ್ನುವ ಐದು ರೂಪಗಳಿಂದ ಕಾರ್ಯ
ನಿರ್ವಹಿಸುತ್ತಿದ್ದಾರೆ. ಹೀಗೆ ದೇಹ ಪ್ರವೇಶಿಸಿ ತನ್ನನ್ನೇ ತಾನು ಐದು ವಿಭಾಗ
ಮಾಡಿಕೊಂಡು ಅವರು ನಿರ್ವಹಿಸುವ ಚಟುವಟಿಕೆಗಳೇನು ಎನ್ನುವುದು ಇಲ್ಲಿರುವ ಪ್ರಶ್ನೆ.
ಪ್ರಾಣದೇವರು ಕೇವಲ ಪಿಂಡಾಂಡದಲ್ಲಷ್ಟೇ ಅಲ್ಲ, ಬ್ರಹ್ಮಾಂಡದಲ್ಲೂ ತುಂಬಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ದೇಹ ಪ್ರವೇಶಿಸಿ ಜೀವ ತುಂಬುವ ಅವರು, ದೇಹವನ್ನು ಬಿಟ್ಟು ಯಾರ ಜೊತೆಗೆ ಹೊರಟು ಹೋಗುತ್ತಾರೆ ಮತ್ತು ಏಕೆ ಹೊರಟು ಹೋಗುತ್ತಾರೆ? ಹೊರಗೆ ಪಂಚಭೂತಗಳಲ್ಲಿ ತುಂಬಿರುವ ಪ್ರಾಣದೇವರ ಚಟುವಟಿಕೆಗಳೇನು-ಎನ್ನುವ ಬಹಳ ಮಹತ್ವವಾದ ಪ್ರಶ್ನೆಯನ್ನು ಆಶ್ವಲಾಯನರು ಪಿಪ್ಪಲಾದರ ಮುಂದಿಡುತ್ತಾರೆ.
ಪ್ರಶ್ನೆಯಿಂದಲೇ ತಿಳಿಯುವಂತೆ ಈ ಅಧ್ಯಾಯ ಪೂರ್ಣವಾಗಿ ಪ್ರಾಣದೇವರ ಮಹಿಮೆಯನ್ನು ಹೇಳುವ ಅಧ್ಯಾಯ. ಬನ್ನಿ, ಆಶ್ವಲಾಯನರ ಪ್ರಶ್ನೆಗೆ ಪಿಪ್ಪಲಾದರ ಉತ್ತರವನ್ನು ಭಗವಂತನ ಕೃಪೆ ಬೇಡಿ ಆಲಿಸೋಣ.
ತಸ್ಮೈ ಸ ಹೋವಾಚ । ಅತಿಪ್ರಶ್ನಾನ್ ಪೃಚ್ಛಸಿ ಬ್ರಹ್ಮಿಷ್ಠೋಽಸೀತಿ ತಸ್ಮಾತ್ ತೇಽಹಂ ಬ್ರವೀಮಿ ॥ ೨॥
ಪಿಪ್ಪಲಾದರಿಗೆ ಆಶ್ವಲಾಯನರ ಪ್ರಶ್ನೆಯನ್ನು ಕೇಳಿ ಬಹಳ ಸಂತೋಷವಾಯಿತು. ಏಕೆಂದರೆ ಇದು ಪಂಚಭೂತಗಳಲ್ಲಿ ಮತ್ತು ದೇಹದಲ್ಲಿ ವಾಯುದೇವರ ಚಟುವಟಿಕೆ ಏನು ಎಂದು ತಿಳಿಯಬಯಸಿ ಕೇಳಿದ ಪ್ರಶ್ನೆ. ಸಾಮಾನ್ಯರಿಗೆ ಇಂತಹ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಇಂತಹ ಪ್ರಶ್ನೆಯನ್ನು ಕೇವಲ ವೇದಾಧ್ಯಯನ ಮಾಡಿದ ಜ್ಞಾನಿಯಷ್ಟೇ ಕೇಳಬಲ್ಲರು. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ದೇಹಶಾಸ್ತ್ರ, ಮನಃಶಾಸ್ತ್ರ ಮತ್ತು ಭೌತಶಾಸ್ತ್ರ ಪೂರ್ಣ ತಿಳಿದಿರಬೇಕು. ಪಿಪ್ಪಲಾದರು ಹೇಳುತ್ತಾರೆ: “ನೀನು ವೇದಾಧ್ಯನ ಮಾಡಿ ಅನೇಕ ಸತ್ಯವನ್ನು ತಿಳಿದಿರುವುದರಿಂದ, ಒಬ್ಬ ಸಾಮಾನ್ಯನಿಗೆ ಹೊಳೆಯದ ಅಪೂರ್ವವಾದ ಈ ಪ್ರಶ್ನೆಯನ್ನು ಕೇಳಿದ್ದೀಯ. ನನಗೆ ಬಹಳ ಸಂತೋಷವಾಯಿತು” ಎಂದು. ಪ್ರಪಂಚದ ಎಲ್ಲಾ ಜಿಜ್ಞಾಸುಗಳು ತಿಳಿಯಬೇಕಾದ, ಇಡೀ ಮಾನವ ಜನಾಂಗಕ್ಕೆ ಉಪಕಾರವಾಗುವ, ಅತ್ಯಮೂಲ್ಯವಾದ ವಿಷಯದ ಮೇಲೆ ಕೇಳಿರುವ ಈ ಪ್ರಶ್ನೆ ‘ಅತಿಪ್ರಶ್ನೆ’ ಎಂದು ಪಿಪ್ಪಲಾದರು ಶಿಷ್ಯನ ಪ್ರಶ್ನೆಯನ್ನು ಪ್ರಶಂಸಿಸುತ್ತಾರೆ.
ಆತ್ಮತ ಏಷ ಪ್ರಾಣೋ ಜಾಯತೇ । ಯಥೈಷಾ ಪುರುಷೇ ಛಾಯ ಏತಸ್ಮಿನ್ನೇತದಾತತಮ್ । ಮನೋಕೃತೇನಾಯಾತ್ಯಸ್ಮಿನ್ ಶರೀರೇ ॥ ೩॥
ಪಿಪ್ಪಲಾದರು ಹೇಳುತ್ತಾರೆ: “ಮುಖ್ಯಪ್ರಾಣ ಆತ್ಮನಿಂದ ಹುಟ್ಟಿದ” ಎಂದು. ಇಲ್ಲಿ ‘ಆತ್ಮ’ ಎಂದರೆ ಪರಮಾತ್ಮ. ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದೇ ಆತ್ಮತತ್ತ್ವ. ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮಾ ವಾ ಅರೇ ದೃಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತ್ವ್ಯಃ ॥ ಬೃಹದಾರಣ್ಯಕ-೪-೫-೬॥ ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಂಚಥಾ ॥ಮುಂಡಕ ಉಪನಿಷತ್-೨-೨-೫॥ ಮನುಷ್ಯ ತಿಳಿಯಬೇಕಾದ ಸತ್ಯಗಳಲ್ಲಿ ಮೂಲಭೂತವಾದ ಸತ್ಯ ಎಂದರೆ ಆತ್ಮನನ್ನು ತಿಳಿಯುವುದು. ಆತ್ಮಾ ಎನ್ನುವುದಕ್ಕೆ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ಅಂತರ್ಯಾಮಿ, ಸ್ವಾಮಿ ಎನ್ನುವ ಅರ್ಥವಿದೆ. ಎಲ್ಲರೊಳಗೂ ತುಂಬಿ ಎಲ್ಲವನ್ನೂ ನಿಯಂತ್ರಿಸುವ ಪರಶಕ್ತಿ ಆತ್ಮ. ಭಾಗವತದಲ್ಲಿ ಹೇಳುವಂತೆ: ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥ಭಾಗವತ-೧-೨-೧೧॥ ದೇವರನ್ನು ಬ್ರಹ್ಮ, ಆತ್ಮಾ, ಪರಮಾತ್ಮ, ಭಗವಂತ, ಇತ್ಯಾದಿಯಾಗಿ ಕರೆಯುತ್ತಾರೆ. ಹೀಗಾಗಿ ಪಿಪ್ಪಲಾದರು ಇಲ್ಲಿ ಭಗವದ್ ವಾಚಕವಾದ ‘ಆತ್ಮ’ ಶಬ್ದವನ್ನು ಬಳಸಿದ್ದಾರೆ. ಎಲ್ಲರ ಅಂತರ್ಯಾಮಿ, ಎಲ್ಲರ ನಿಯಾಮಕ ಭಗವಂತ ಆತ್ಮಃ.
ನಮಗೆ ತಿಳಿದಂತೆ ಎಲ್ಲವೂ ಆ ಭಗವಂತನಿಂದ ಹುಟ್ಟಿದೆ. ಹೀಗಿರುವಾಗ ಇಲ್ಲಿ ‘ಪ್ರಾಣ ಭಗವಂತನಿಂದ ಹುಟ್ಟಿದ’ ಎನ್ನುವಲ್ಲಿನ ವಿಶೇಷತೆ ಏನು-ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿ ಒಂದು ವಿಶೇಷವಿದೆ. ಇತರ ದೇವತೆಗಳಿಗೆ ಒಂದು ಕಲ್ಪದಲ್ಲಿ ಅನೇಕ ಹುಟ್ಟಿದೆ. ಆದರೆ ಬ್ರಹ್ಮ-ವಾಯು ಎಲ್ಲಾ ದೇವತೆಗಳಿಗಿಂತ ಮೊದಲು ಭಗವತನಿಂದ ಸೃಷ್ಟಿಯಾಗುವ ತತ್ತ್ವ. ಇವರಿಗೆ ಪುನಃ ಯಾರಿಂದಲೂ ಮರು ಸೃಷ್ಟಿ ಇಲ್ಲ. ಭಗವಂತನಿಂದ ಸಾಕ್ಷಾತ್ ಹುಟ್ಟುವುದರಿಂದ ಮತ್ತು ಕಲ್ಪಾಂತದ ತನಕ ಮರು ಹುಟ್ಟು ಇಲ್ಲವಾದ್ದರಿಂದ ಪ್ರಾಣದೇವರನ್ನು ಭಗವಂತನ ಸಾಕ್ಷಾತ್ ಪುತ್ರ ಎನ್ನುತ್ತಾರೆ. ಹೇಗೆ ನಮ್ಮ ನೆರಳು ನಮ್ಮನ್ನು ಸದಾ ಬಿಡದೆ ಅನುಸರಿಸುತ್ತದೋ ಹಾಗೆ ಇಡೀ ವಿಶ್ವ ಭಗವಂತನನ್ನು ಆಶ್ರಯಿಸಿದೆ. ಇದೇ ರೀತಿ ಲಕ್ಷ್ಮೀ-ನಾರಾಯಣ ಮತ್ತು ಬ್ರಹ್ಮದೇವರನ್ನು ಬಿಟ್ಟರೆ, ಇತರ ಸಮಸ್ತ ವಿಶ್ವವೂ ನೆರಳಿನಂತೆ ಪ್ರಾಣದೇವರನ್ನು ಆಶ್ರಯಿಸಿಕೊಂಡಿದೆ. ಹೀಗೆ ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣದೇವರು ಭಗವಂತನ ಆದೇಶದಂತೆ ಪ್ರತಿಯೊಂದು ಜೀವದ ಜೀವಕಲಾಭಿಮಾನಿಯಾಗಿ ಸಮಸ್ತ ಜೀವರ ಒಳಗೆ ಪ್ರವೇಶಿಸಿ ನೆಲೆಸಿದ್ದಾರೆ ಮತ್ತು ನಮ್ಮ ಒಳಗೂ ಹೊರಗೂ ನಿಂತು ನಮ್ಮನ್ನು ರಕ್ಷಿಸಿ ನಡೆಸುತ್ತಿದ್ದಾರೆ.

ರಶ್ನೋಪನಿಶದ್ : ಪ್ರಶ್ನೆ 3 (4 )
ದೇಹವನ್ನು ಪ್ರವೇಶಿಸುವ ಪ್ರಾಣದೇವರು ತಮ್ಮನ್ನು ತಾವು ಎಷ್ಟು ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ವಿಭಾಗದ ಉದ್ದೇಶವೇನು, ಯಾವಯಾವ ವಿಭಾಗದಲ್ಲಿ ಏನೇನು ಕ್ರಿಯೆ ನಡೆಯುತ್ತದೆ ಎನ್ನುವುದನ್ನು ಪಿಪ್ಪಲಾದರು ‘ಒಂದು ದೇಶದ ಆಡಳಿತದ’ ಉದಾಹರಣೆಯೊಂದಿಗೆ

ವಿವರಿಸುತ್ತಾರೆ.
ಯಥಾ ಸಮ್ರಾಡೇವಾಧಿಕೃತಾನ್ ವಿನಿಯುಙಕ್ತೇ ಏತಾನ್ ಗ್ರಾಮಾನಧಿತಿಷ್ಠಸ್ವೇತಾನ್ ಗ್ರಾಮಾನಧಿತಿಷ್ಠಸ್ವೇತಿ ಏವಮೇವೈಷ ಪ್ರಾಣ ಇತರಾನ್ ಪ್ರಾಣಾನ್ ಪೃಥಕ್ ಪೃಥಗೇವ ಸನ್ನಿಧತ್ತೇ ॥ ೪॥
ಇಲ್ಲಿ ಪಿಪ್ಪಲಾದರು “ಒಬ್ಬ ಚಕ್ರವರ್ತಿ ತನ್ನ ದೇಶದಲ್ಲಿ ವಿವಿಧ ಆಡಳಿತಾಧಿಕಾರಿಗಳನ್ನು ನೇಮಿಸಿ ಹೇಗೆ ಸಮಸ್ತವಾಗಿ ಆಡಳಿತ ನಿರ್ವಹಣೆ ಮಾಡುತ್ತಾನೋ, ಹಾಗೆ ಪ್ರಾಣದೇವರು ದೇಹದಲ್ಲಿ ಕಾರ್ಯನಿರ್ವಹಿಸುತ್ತಾರೆ” ಎಂದಿದ್ದಾರೆ. ಈ ಮಾತು ನಮಗೆ ಅರ್ಥವಾಗಬೇಕಾದರೆ ನಾವು ನಮ್ಮ ಹಿಂದಿನ ದೇಶಾಡಳಿತ ಕ್ರಮವನ್ನು ತಿಳಿದಿರಬೇಕು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಂದು ದೇಶದ ಆಡಳಿತವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದನ್ನು ಬಹಳ ಸುಂದರವಾಗಿ ವಿವರಿಸಲಾಗಿದೆ. ಹಿಂದೆ ಒಂದು ಗ್ರಾಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಈ ನಾಲ್ಕು ವಿಭಾಗದಲ್ಲಿ ಒಂದು ಅಂಶ ಜನವಸತಿಗೆ, ಒಂದು ಅಂಶ ಬೇಸಾಯಕ್ಕೆ, ಒಂದು ಅಂಶ ಹುಲ್ಲುಗಾವಲು ಮತ್ತು ಉಳಿದ ಒಂದು ಅಂಶ ಕಾಡು-ಹೀಗೆ ಅಭಿವೃದ್ಧಿಪಡಿಸುತ್ತಿದ್ದರು. ಇಲ್ಲಿ ಪ್ರತಿಯೊಂದು ಗ್ರಾಮವೂ ತಮಗೆ ಬೇಕಾದ ಆಹಾರ ಬೆಳೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗುತ್ತಿತ್ತು. ಇಂತಹ ಹತ್ತು ಗ್ರಾಮಗಳ(ತಾಲೋಕು) ಆಡಳಿತವನ್ನು ನಿರ್ವಹಿಸಲು ದೇಶದ ಚಕ್ರವರ್ತಿ ಒಬ್ಬ ಸಮರ್ಥ ವ್ಯಕ್ತಿಯನ್ನು ನಿಯಮಿಸುತ್ತಿದ್ದ. ಈ ಆಡಳಿತಾಧಿಕಾರಿಯನ್ನು ‘ದಶಪ’ ಎಂದು ಕರೆಯುತ್ತಿದ್ದರು. ಆತನಿಗೆ ಈ ಹತ್ತು ಗ್ರಾಮದ ಒಟ್ಟು ಕಂದಾಯದ ಹತ್ತನೇ ಒಂದು ಭಾಗವನ್ನು ಸಂಬಳವಾಗಿ ಕೊಡುತ್ತಿದ್ದರು. ದಶಪನ ನಂತರ ‘ವಿಂಶತಪ’. ಈತ ಇಬ್ಬರು ದಶಪರ ಮೇಲಾಧಿಕಾರಿ(ಜಿಲ್ಲಾಧಿಕಾರಿ). ಈತನ ನಂತರ ‘ಶತಪ’. ಈತನ ಆಡಳಿತ ವ್ಯಾಪ್ತಿ ನೂರು ಗ್ರಾಮಗಳು. ಇದನ್ನು ಒಂದು ರಾಜ್ಯ ಎನ್ನಬಹುದು(ರಾಜ್ಯಪಾಲ). ಚಕ್ರವರ್ತಿಯಾದವನು ಈ ಎಲ್ಲಾ ಅಧಿಕಾರಿಗಳ ನೆರವು ಪಡೆದು ದೇಶದ ಪೂರ್ಣಾಡಳಿತವನ್ನು ನಡೆಸುತ್ತಿದ್ದ. ಇದೇ ರೀತಿ ಇಲ್ಲಿ ನಾವು ನಮ್ಮ ದೇಹವನ್ನು ಒಂದು ದೇಶ ಎಂದುಕೊಂಡರೆ ದೇಹದ ಬೇರೆಬೇರೆ ಭಾಗಗಳೇ ತಾಲೋಕು, ಜಿಲ್ಲೆ ಮತ್ತು ರಾಜ್ಯಗಳು. ಅದಕ್ಕೆ ಬೇರೆ ಬೇರೆ ಅಧಿಕಾರಿಗಳು. ಆ ಎಲ್ಲಾ ಅಧಿಕಾರಿಗಳ ಮೂಲಕ ದೇಹದ ನಿಯಂತ್ರಣ ಮಾಡುವ ಚಕ್ರವರ್ತಿ ಪ್ರಾಣದೇವರು. ಪ್ರಾಣದೇವರ ರಾಜ್ಯಪಾಲರು- ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ. ಇವರನ್ನು 'ಅವಾಂತರ ಪ್ರಾಣರು' ಎನ್ನುತ್ತಾರೆ. ಭಗವಂತನ ಸಾಕ್ಷಾತ್ ಪುತ್ರನಾದ ‘ಪ್ರಾಣ’ ಅವಾಂತರ ಪ್ರಾಣರನ್ನು ದೇಹದ ಬೇರೆಬೇರೆ ವಿಭಾಗದ ಆಡಳಿತ ನಡೆಸಲು ಕಳುಹಿಸುತ್ತಾನೆ. ಇಲ್ಲಿ ಒಂದು ವಿಶೇಷವೇನೆಂದರೆ ಒಬ್ಬ ಚಕ್ರವರ್ತಿಯಂತೆ ಪ್ರಾಣ ಮತ್ತು ಭಗವಂತ ಒಂದು ಕಡೆ ನೆಲಸಿ ಆಡಳಿತ ನಿರ್ವಹಿಸುವುದಿಲ್ಲ. ಬದಲಾಗಿ ಅವರು ಅವಾಂತರ ಅಧಿಕಾರಿಗಳ ಅಂತರ್ಯಾಮಿಯಾಗಿ ಸೇರಿ ಶಕ್ತಿಪಾತ ಮಾಡಿ ಕಾರ್ಯನಿರ್ವಹಣೆ ಮಾಡಿಸುತ್ತಾರೆ.

ರಶ್ನೋಪನಿಶದ್ : ಪ್ರಶ್ನೆ 3 ( 5 )
ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರತಿಷ್ಠತೇ । ಮಧ್ಯೇ ತು ಸಮಾನಃ। ಏಷ ಹ್ಯೇತದ್ಧ್ರುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವಂತಿ ಹೃದಿ ಹ್ಯೇಷ ಆತ್ಮಾ ॥ ೫॥
ಇಲ್ಲಿ ಪಿಪ್ಪಲಾದರು ಪ್ರತಿಯೊಬ್ಬ ಅವಾಂತರ

ಪ್ರಾಣರ
ಆಡಳಿತ ವ್ಯಾಪ್ತಿಯನ್ನು ವಿವರಿಸಿದ್ದಾರೆ. ನಮ್ಮ ದೇಹದ ಒಳಗೆ ಪ್ರತಿಯೊಂದು
ಕ್ರಿಯೆಯನ್ನು ನಿರಂತರವಾಗಿ ಒಂದು ವ್ಯವಸ್ಥಿತ ರೀತಿಯಲ್ಲಿ ಪ್ರಾಣದೇವರು ತನ್ನ ಐದು
ರೂಪಗಳಿಂದ ನಡೆಸುತ್ತಿದ್ದಾರೆ. ಮೊದಲನೆಯದಾಗಿ ದೇಹದ ಕೆಳಭಾಗ. ಈ ಭಾಗದ ಅಧಿಕಾರ
ವ್ಯಾಪ್ತಿ ಅಪಾನನಿಗೆ ಸೇರಿದೆ. ಈತ ನಮ್ಮ ಪಾಯು(ಮಲ ವಿಸರ್ಜನೆ) ಮತ್ತು ಉಪಸ್ಥ(ಮೂತ್ರ
ಮತ್ತು ಸಂತಾನ ಕ್ರಿಯೆ)ದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾನೆ. ಎರಡನೆಯದಾಗಿ ದೇಹದ
ಮೇಲ್ಭಾಗ. ನಮ್ಮ ಕಣ್ಣು, ಕಿವಿ, ಬಾಯಿ, ಉಸಿರು. ಈ ಕ್ರಿಯೆಯನ್ನು ಸ್ವಯಂ ಪ್ರಾಣ ದೇವರು
ನಿರ್ವಹಿಸುತ್ತಾರೆ. ಅವರು ನಮಗೆ ಕಣ್ಣಿನಿಂದ ನೋಡಿಸುತ್ತಾರೆ, ಕಿವಿಯಿಂದ
ಕೇಳಿಸುತ್ತಾರೆ, ಬಾಯಿಯಿಂದ ಮಾತನಾಡಿಸುತ್ತಾರೆ, ಮೂಗಿನಿಂದ ಉಸಿರಾಡಿಸಿ
ಬದುಕಿಸುತ್ತಾರೆ. ಮೂರನೆಯದು ದೇಹದ ಮಧ್ಯಭಾಗ. ನಾವು ಸೇವಿಸುವ ಆಹಾರವನ್ನು
ಜೀರ್ಣಗೊಳಿಸಿ, ಅದರಿಂದ ಬೇಡವಾದ ಸ್ಥೂಲಭಾಗವನ್ನು ವಿಭಾಗಿಸಿ, ದೇಹಕ್ಕೆ ಬೇಕಾದ ಆಹಾರದ
ಅಂಶವನ್ನು ದೇಹದ ವಿವಿಧ ಭಾಗಕ್ಕೆ ತಲುಪಿಸಿ, ಶಕ್ತಿಯನ್ನು ನೀಡುವ ಕ್ರಿಯೆಯನ್ನು- ದೇಹದ
ಮಧ್ಯಭಾಗದಲ್ಲಿ ಕುಳಿತ ‘ಸಮಾನ’ ನಾಮಕ ಪ್ರಾಣ ನಿರ್ವಹಿಸುತ್ತಾನೆ. [ಇದಕ್ಕಾಗಿ ಊಟ ಮಾಡುವ
ಮೊದಲು ಪ್ರಾಣನಿಗೆ ಮತ್ತು ಪ್ರಾಣನ ಅಂತರ್ಯಾಮಿ ಭಗವಂತನಿಗೆ ಆಹುತಿ ಕೊಟ್ಟು ಊಟ
ಮಾಡುವುದು ಪದ್ಧತಿ]. ಇಲ್ಲಿ ದೇಹದ ಮಧ್ಯಭಾಗ ಎಂದರೆ ನಾಭಿಯಿಂದ ಹೃದಯದ ತನಕದ ಭಾಗ.
ಶಾಸ್ತ್ರದಲ್ಲಿ ಹೊಟ್ಟೆಯನ್ನೂ ಕೂಡಾ ಮಧ್ಯಭಾಗ ಎನ್ನುತ್ತಾರೆ. ದೇಹದ ಮಧ್ಯಭಾಗದ
ಕೇಂದ್ರಬಿಂದು ಹೃದಯ. ಇದು ದೇಹದಲ್ಲಿ ಭಗವಂತನ ಪ್ರತಿಬಿಂಬವಾಗಿರುವ ಜೀವನಿರುವ ಸ್ಥಾನ.
ಬಿಂಬವಿರುವಲ್ಲೇ ಪ್ರತಿಬಿಂಬವಿರುವುದು ಸಾಧ್ಯ. ಆದ್ದರಿಂದ ಇದು ದೇಹದಲ್ಲಿ ಬಿಂಬರೂಪಿ
ಭಗವಂತನಿರುವ ಸ್ಥಾನ ಕೂಡಾ ಹೌದು. ನಮಗೆ ತಿಳಿದಂತೆ ಪ್ರಾಣದೇವರು ಭಗವಂತನ ನಿತ್ಯಸಂಗಾತಿ.
ಅವರು ಎಂದೂ ಭಗವಂತನನ್ನು ಬಿಟ್ಟಿರಲಾರರು. ಹಾಗಾಗಿ ಹೃತ್ಕಮಲದಲ್ಲಿ ಜೀವ-ಪ್ರಾಣ ಮತ್ತು
ಬಿಂಬರೂಪಿ ಭಗವಂತ ಜೊತೆಯಾಗಿ ನೆಲೆಸಿರುತ್ತಾರೆ.
ಜೀವ ಅನ್ನುವುದು ಅತಿಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ ಜೀವ ಅತಿಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಲ್ಲೇ ಭಗವಂತ ಮತ್ತು ಪ್ರಾಣ ಜೀವನನ್ನು ಧರಿಸಿ ನೆಲೆಸಿರುತ್ತಾರೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ: “ಪದ್ಮಕೋಶ-ಪ್ರ’ತೀಕಾಶಗ್ಂ ಹೃದಯಂ’ ಚಾಪ್ಯಧೋಮು’ಖಮ್” ಕೆಳಮುಖವಾಗಿರುವ ಕೆಂದಾವರೆಯ ಮೊಗ್ಗಿನಂತಿರುವ ಶಕ್ತಿ ಕೇಂದ್ರದಲ್ಲಿರುವ ಅತ್ಯಂತ ಸೂಕ್ಷ್ಮ ನೆಲೆಮನೆಯಲ್ಲಿ ಜೀವನನ್ನು ಪ್ರಾಣಾಂತರ್ಗತ ಭಗವಂತ ಧರಿಸಿ ನಿಂತಿದ್ದಾನೆ. ದೇಹದ ಸಮಸ್ತ ಚಟುವಟಿಕೆಗಳೂ ನಡೆಯುವುದು ಈ ಶಕ್ತಿ ಕೇಂದ್ರದಿಂದ.
ದೇಹದ ಮಧ್ಯಭಾಗದಲ್ಲಿ ನೆಲೆಸಿರುವ ‘ಸಮಾನ’ ನಾಮಕ ಅವಾಂತರ ಪ್ರಾಣನ ಅಂತರ್ಯಾಮಿಯಾಗಿ ಪ್ರಾಣದೇವರು ನಾವು ಆಹುತಿ ರೂಪದಲ್ಲಿ ಸೇವಿಸುವ ಆಹಾರವನ್ನು ಸಮನಾಗಿ(ಸಮಮ್-ನಯತಿ) ದೇಹದ ಆಯಾ ಭಾಗಗಳಿಗೆ ತಲುಪಿಸುತ್ತಾರೆ. ದೇಹದಲ್ಲಿ ಆಹಾರ ವಿತರಣೆ ಮಾಡುವ ‘ಸಮಾನ’ ನಾಮಕ ಪ್ರಾಣನಿಂದಾಗಿ ನಮಗೆ ಏಳು ಬಗೆಯ ಅರಿವು(ಜ್ಞಾನ) ಮೂಡುತ್ತದೆ. ಕಣ್ಣಿನಿಂದ ರೂಪದ ಅರಿವು, ಕಿವಿಯಿಂದ ಶಬ್ದದ ಅರಿವು, ಮೂಗಿನಿಂದ ಗಂಧದ ಅರಿವು, ನಾಲಿಗೆಯಿಂದ ರಸದ ಅರಿವು, ಚರ್ಮದಿಂದ ಸ್ಪರ್ಶದ ಅರಿವು, ಮನಸ್ಸಿನಲ್ಲಿ ಬಯಕೆ, ಬುದ್ಧಿಯಿಂದ ಬೇಕು ಬೇಡಗಳ ತೀರ್ಮಾನ-ಇವೇ ಆ ಏಳು ಬಗೆಯ ಬೆಳಕುಗಳು. ಹೀಗೆ ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಆಧಾನ ಮಾಡಿ, ಜ್ಞಾನಪೂರ್ಣವಾದ ಸಮಸ್ತ ಚಟುವಟಿಕೆಗಳನ್ನು ಹೃದಯದಲ್ಲಿ ನೆಲಸಿರುವ ‘ಸಮಾನ’ ನಿರ್ವಹಿಸುತ್ತಾನೆ.

ಪ್ರಶ್ನೋಪನಿಶದ್ : ಪ್ರಶ್ನೆ 3 ( 6-7)
ಅತ್ರೈತದೇಕಶತಂ ನಾಡೀನಾಂ ತಾಸಾಂ ಶತಂಶತಮೇಕೈಕಸ್ಯಾಂ ದ್ವಾಸಪ್ತತಿಂದ್ವಾಸಪ್ತತಿಮ್ ಪ್ರತಿಶಾಖಾನಾಡೀಸಹಸ್ರಾಣಿ ಭವಂತ್ಯಾಸು ವ್ಯಾನಶ್ಚರತಿ ॥ ೬॥
ಪ್ರಾಣ, ಅಪಾನ ಮತ್ತು ಸಮಾನರ ಕಾರ್ಯವ್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು ಇಲ್ಲಿ ‘ವ್ಯಾನ’ ನ ಕಾರ್ಯವ್ಯಾ

ಪ್ತಿಯನ್ನು
ವಿವರಿಸುತ್ತಾರೆ. ಇದೊಂದು ಅಪೂರ್ವವಾದ ವಿಷಯ. ಈ ವಿಷಯ ಅಧ್ಯಾತ್ಮ ಶಾಸ್ತ್ರದಲ್ಲಿ
ಇನ್ನೆಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಹೃದಯದ ಕೇಂದ್ರ ಭಾಗದಿಂದ ೧೦೧ ನಾಡಿಗಳು
ಕವಲೊಡೆದಿವೆ. [ಐವತ್ತು ಎಡ ಭಾಗದಲ್ಲಿ, ಐವತ್ತು ಬಲಭಾಗದಲ್ಲಿ ಮತ್ತು ನಡುವೆ ಸುಷುಮ್ನಾ
ನಾಡಿ]. ಇಲ್ಲಿರುವ ಪ್ರತಿಯೊಂದು ನಾಡಿಗಳಿಗೂ ೧೦೦ ಉಪನಾಡಿಗಳಿವೆ. ಹಾಗಾಗಿ ಒಟ್ಟು
೧೦,೧೦೦ ಉಪನಾಡಿಗಳು. ಪ್ರತಿಯೊಂದು ಉಪನಾಡಿಗಳಿಗೂ ಕೂಡಾ ೭೨,೦೦೦ ಪ್ರತಿನಾಡಿಗಳಿವೆ.
ಆದ್ದರಿಂದ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ: ೭೨ ಕೋಟಿ ೭೨ ಲಕ್ಷ! ಇದು
ಇಂದಿನ ವೈದ್ಯಶಾಸ್ತ್ರಕ್ಕೆ ತಿಳಿಯದ ವಿಚಾರ. ಏಕೆಂದರೆ ಇದರಲ್ಲಿ ಕಣ್ಣಿಗೆ ಕಾಣುವ ಮತ್ತು
ಕಾಣದ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಸಂಪರ್ಕಗಳು ಸೇರಿವೆ. ಈ ಎಲ್ಲಾ ನಾಡಿಗಳಲ್ಲಿ,
ಕಾಲಿನ ಬೆರಳಿನಿಂದ ಹಿಡಿದು, ತಲೆಕೂದಲಿನ ತನಕ ‘ವ್ಯಾನ’ ಬೇರೆ ಬೇರೆ ಶಕ್ತಿಯನ್ನು
ಹರಿಸುತ್ತಾನೆ. ನಮ್ಮ ದೇಹದಲ್ಲಿ ವ್ಯಾನ ಶಕ್ತಿ ದೇಹದ ಎಲ್ಲಾ ಭಾಗದಲ್ಲಿ
ಹರಿಯುತ್ತಿದ್ದರೆ ಆಗ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಲ್ಲಿ ವ್ಯಾನ ಶಕ್ತಿ
ಕಡಿಮೆಯಾಯಿತೋ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ
ದೇಹದಲ್ಲಿನ ಪ್ರತಿನಾಡಿಯಲ್ಲೂ ವಿಶೇಷ ಶಕ್ತಿಯನ್ನು ತುಂಬುವ ವಿಶಿಷ್ಟವಾದ ಕಾರ್ಯವನ್ನು
ವ್ಯಾನ ನಾಮಕ ವಾಯುವಿನ ಅಂತರ್ಯಾಮಿಯಾಗಿ ಕುಳಿತು ಪ್ರಾಣದೇವರು ಮಾಡಿಸುತ್ತಿರುತ್ತಾರೆ.
ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್ ॥ ೭॥
ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ ವಿಶುದ್ಧಿಚಕ್ರದ ಮೂಲಕ ನಮಗೆ ಕನಸಿನ ಅನುಭವವನ್ನು ಕೊಡುವವನು ಉದಾನ. ಜೀವನನ್ನು ದೇಹದ ಯಾವುದಾದರೊಂದು ನಾಡಿಯ ಮೂಲಕ ಹೊರ ಕರೆದುಕೊಂಡು ಹೋಗಿ, ಜೀವ ಸೇರಬೇಕಾದ ಲೋಕಕ್ಕೆ ಸೇರಿಸುವವನೂ ಅವನೇ. ಜೀವ ದೇಹದಿಂದ ಯಾವುದೇ ಭಾಗದಿಂದ ಕೂಡಾ ಹೊರ ಹೋಗಬಹುದು. ಕೇವಲ ನವದ್ವಾರದಲ್ಲಷ್ಟೇ ಅಲ್ಲ ರೋಮಕೂಪದಲ್ಲಿ ಕೂಡಾ ಜೀವ ಹೊರ ಹೋಗಬಹುದು. ಸಾಮಾನ್ಯವಾಗಿ ಪುಣ್ಯ ಮಾಡಿದ ಜೀವ ದೇಹದ ಊರ್ಧ್ವಭಾಗದಿಂದ ಹೊರ ಹೋಗುತ್ತದೆ. ಇಂತಹ ಜೀವರನ್ನು ಉದಾನ ಸುಖವನ್ನು ಅನುಭವಿಸುವ ಸ್ವರ್ಗದಂತಹ ಪುಣ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾಪ ಮಾಡಿದ ಜೀವ ದೇಹದ ಸೊಂಟದ ಕೆಳಗಿನ ಭಾಗದಿಂದ ಹೊರ ಹೋಗುತ್ತದೆ. ಅಂತಹ ಜೀವರನ್ನು ಪ್ರಾಣದೇವರು ದುಃಖವನ್ನು ಅನುಭವಿಸುವ ನರಕಾದಿ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪುಣ್ಯ-ಪಾಪಗಳೆರಡೂ ಸಮನಾಗಿದ್ದಾಗ ಅಂತಹ ಜೀವ ನೇರವಾಗಿ ಮನುಷ್ಯ ಲೋಕದಲ್ಲಿ ಹುಟ್ಟುತ್ತದೆ. ಕೆಲವೊಮ್ಮೆ ಪ್ರಸವಕಾಲದಲ್ಲಿ ಜೀವ ದೇಹವನ್ನು ಬಿಟ್ಟು ಹೋಗುವುದುಂಟು. ಅಂತಹ ಸಮಯದಲ್ಲಿ ನೇರ ಮನುಷ್ಯಲೋಕದಲ್ಲಿ ಹುಟ್ಟಬೇಕಾದ ಜೀವ ಆ ದೇಹವನ್ನು ಪ್ರವೇಶಿಸಿ ಹುಟ್ಟಬಹುದು. ಇದು ಅತ್ಯಂತ ವಿರಳ. ಆದರೆ ಈ ರೀತಿ ಜೀವ ಇನ್ನೊಂದು ಶರೀರವನ್ನು ತಕ್ಷಣ ಪ್ರವೇಶಿಸಿದರೆ ಆಗ ಆ ಜೀವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗರ್ಭದಲ್ಲಿರುವ ಒಂಬತ್ತು ತಿಂಗಳಿನಿಂದ ಹಿಡಿದು, ಹುಟ್ಟಿ ಸಾಯುವ ತನಕ, ಸತ್ತ ನಂತರ ಲೋಕಾಂತರ ಹೋಗಿ ಮತ್ತೆ ಹುಟ್ಟುವ ತನಕ, ಪ್ರತಿಯೊಂದು ಜೀವರ ಕ್ರಿಯೆ ಪಂಚಪ್ರಾಣರ ಅಧೀನವಾಗಿ ನಡೆಯುತ್ತಿರುತ್ತದೆ. ಈ ಪ್ರಾಣತತ್ತ್ವವನ್ನು ತಿಳಿದರೆ ಪ್ರಪಂಚದ ರಹಸ್ಯವನ್ನು ತಿಳಿದಂತೆ.

ಪ್ರಶ್ನೋಪನಿಶದ್ : ಪ್ರಶ್ನೆ 3 ( 8 )
ಆದಿತ್ಯೋ ಹ ವೈ ಬಾಹ್ಯಃ ಪ್ರಾಣಃ ಉದಯತ್ಯೇಷ ಹ್ಯೇನಂ ಚಾಕ್ಷುಷಂ ಪ್ರಾಣಮನುಗೃಹ್ಣಾನಃ । ಪೃಥಿವ್ಯಾಂ ಯಾ ದೇವತಾ ಸೌಷಾ ಪುರುಷಸ್ಯಾಪಾನಮವಷ್ಟಭ್ಯಾಂತರಾ ಯದಾಕಾಶಃ ಸ ಸಮಾನೋ ವಾಯುರ್ವ್ಯಾನಃ ॥ ೮॥
ನಮ್ಮ ಅಂತರಂಗ ಪ್ರಪಂಚ(ಪಿಂಡಾಂಡ)ದಲ್ಲಿ ಪ್ರಾಣದೇವರ ಕಾರ್ಯವ

್ಯಾಪ್ತಿಯನ್ನು
ವಿವರಿಸಿದ ಪಿಪ್ಪಲಾದರು, ಮುಂದೆ ಬ್ರಹ್ಮಾಂಡದಲ್ಲಿ ಪ್ರಾಣದೇವರ ಐದು ರೂಪಗಳ
ಕಾರ್ಯಕ್ಷೇತ್ರವನ್ನು ವಿವರಿಸುತ್ತಾರೆ. ಇಲ್ಲಿ ದೇಹದ ಒಳಗೆ ಮತ್ತು ದೇಹದ ಹೊರಗೆ
ಪ್ರಾಣದೇವರ ಕ್ರಿಯೆಯನ್ನು ಸಮನ್ವಯ ಮಾಡಿ ವಿವರಿಸಲಾಗಿದೆ. ಪಂಚಪ್ರಾಣರಿಗೂ ಮತ್ತು
ಪಂಚಭೂತಗಳಿಗೂ ಇರುವ ಸಂಬಂಧವನ್ನು ಇಲ್ಲಿ ಪಿಪ್ಪಲಾದರು ವಿವರಿಸಿದ್ದಾರೆ.
ಹೇಗೆ ನಮ್ಮ ದೇಹದ ಊರ್ಧ್ವಭಾಗದಲ್ಲಿದ್ದು ಪ್ರಾಣದೇವರು ಜ್ಞಾನದಬೆಳಕು ನೀಡುತ್ತಾರೋ, ಹಾಗೇ ದೇಹದ ಹೊರಗೆ ಸೂರ್ಯನಲ್ಲಿದ್ದು, ಇಡೀ ವಿಶ್ವವನ್ನು ಬೆಳಗುವ ಶಕ್ತಿ ಪ್ರಾಣದೇವರು. ಸೂರ್ಯನಿಗೂ ನಮ್ಮ ಕಣ್ಣಿಗೂ ನೇರ ಸಂಬಂಧ. ಬ್ರಹ್ಮಾಂಡದಲ್ಲಿರುವ ಸೂರ್ಯನೇ ಪಿಂಡಾಂಡದಲ್ಲಿ ಕಣ್ಣಾಗಿದ್ದಾನೆ. ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ: ಆದಿತ್ಯಶ್ಚಕ್ಷುರ್ಭೂತ್ವಾSಕ್ಷಿಣೀ ಪ್ರಾವಿಶದ್ ॥ಐ-ಉ-೨-೪ ॥ ಸೂರ್ಯಶಕ್ತಿಯಿಂದಲೇ ನಮಗೆ ಕಣ್ಣು ಕಾಣುವುದು. ಇಲ್ಲಿ ವಿಶೇಷವೇನೆಂದರೆ ಪ್ರಾಣದೇವರೇ ಸೂರ್ಯನಲ್ಲಿ ನಿಂತು ಬೆಳಕು ನೀಡುವವರು ಹಾಗೂ ನಮ್ಮ ಕಣ್ಣಿನಲ್ಲಿ ನಿಂತು ನಮಗೆ ನೋಡುವ ಶಕ್ತಿ ಕೊಡುವವರು. ಎಲ್ಲಾ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಪ್ರಾಣ ಶಕ್ತಿಯಾದರೂ ಸಹ, ಇದೊಂದು ಪ್ರಾಣದೇವರ ವಿಶೇಷ ಸನ್ನಿಧಾನ.
ಪ್ರಾಣದೇವರು ಪಂಚಭೂತಗಳಲ್ಲಿ ಒಂದಾದ ನೀರಿನಲ್ಲಿ ಸನ್ನಿಹಿತರಾಗಿದ್ದಾರೆ. ನಾವು ಒಂದು ವೇಳೆ ಊಟ ಮಾಡದೇ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ನೀರಿನಲ್ಲಿ ಮತ್ತು ಕಣ್ಣಿನಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿದೆ. ಹಾಗಾಗಿ ನಮಗೆ ಬಹಳ ಆನಂದವಾದಾಗ ಅಥವಾ ಬಹಳ ದುಃಖವಾದಾಗ ಕಣ್ಣಿನಿಂದ ನೀರು ಬರುತ್ತದೆ. ಅದೇ ರೀತಿ ಹೊರಗೆ ನೀರನ್ನು ಆವಿಯಾಗಿಸಿ ಮಳೆ ಸುರಿಸುವವರೂ ಸೂರ್ಯನ ಅಂತರ್ಯಾಮಿಯಾಗಿರುವ ಪ್ರಾಣದೇವರು. ‘ಮೇಘೇ ಭೂತ್ವಾ ಪ್ರಾವಸ್ಯತಿ’ ಎನ್ನುವ ಒಂದು ಮಾತಿದೆ. ಇದು ಪ್ರಾಣದೇವರ ಒಂದು ವಿಶೇಷ ಕ್ರಿಯೆಯನ್ನು ಹೇಳುತ್ತದೆ. ಪ್ರಾಣದೇವರು ಸಮುದ್ರಕ್ಕೆ ಸೇರುವ ಎಲ್ಲಾ ನದಿನೀರನ್ನು ಸಮುದ್ರದ ಲವಣನೀರಿನಿಂದ ಬೇರ್ಪಡಿಸಿ ಮಳೆ ಬರಿಸುತ್ತಾರೆ. ಹೀಗೆ ಆಕಾಶದಿಂದ ಮಳೆ ಸುರಿಯುವುದೂ ಪ್ರಾಣದೇವರಿಂದ ಮತ್ತು ಕಣ್ಣಿನಿಂದ ನೀರು ಸುರಿಯುವುದೂ ಪ್ರಾಣದೇವರಿಂದ. ಒಟ್ಟಿನಲ್ಲಿ ಹೇಳಬೇಕೆಂದರೆ: ಪ್ರಾಣದೇವರು ಕಣ್ಣಿನಲ್ಲಿ ಸನ್ನಿಹಿತರಾಗಿ ಅರಿವಿನ ಬೆಳಕು ನೀಡುತ್ತಾರೆ; ನೀರಿನಲ್ಲಿ ಸನ್ನಿಹಿತರಾಗಿ ಜೀವನವನ್ನು ಕೊಡುತ್ತಾರೆ; ಸೂರ್ಯನ ಅಂತರ್ಯಾಮಿಯಾಗಿ ನಿಂತು, ಆದಿತ್ಯನಾಮಕರಾಗಿ, ಉದಯಿಸುವ ಸೂರ್ಯನಲ್ಲಿದ್ದು, ಸೌರಶಕ್ತಿ ಹರಿಸುತ್ತಾ, ನಮಗೆ ಕಾಣಿಸಿಕೊಳ್ಳುತ್ತಾರೆ. ಇದು ನಮ್ಮ ಪ್ರಾಚೀನ ಋಷಿಗಳು ಕಂಡುಕೊಂಡ ದೈವವಿಜ್ಞಾನ.
ದೇಹದಲ್ಲಿ ಅಪಾನನಾಮಕನಾಗಿ ನಮ್ಮ ಮಲ-ಮೂತ್ರ ವಿಸರ್ಜನೆಗೆ ಕಾರಣವಾಗಿರುವ ಶಕ್ತಿಯೇ, ಭೂಮಿಯಲ್ಲಿ ಮೇಲಿನಿಂದ ಕೆಳಕ್ಕೆಳೆಯುವ ಶಕ್ತಿಯಾಗಿದೆ. ಇದೇ ಭೂಮಿಯ ಗುರುತ್ವಾಕರ್ಷಣ ಶಕ್ತಿ. [ಪಿಪ್ಪಲಾದರ ಈ ಮಾತಿನಿಂದ ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು; ಅದು ಇಂದಿನ ಪಾಶ್ಚಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ ಎನ್ನುವುದು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ್ಟ “ಆಕೃಷ್ಟಿ ಶಕ್ತಿಶ್ಚ ಮಹೀ” ಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ‘ಭೂಗೋಲ’ ಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ‘ಗೋಲ’ ಎನ್ನುವ ಪದದಿಂದಲೇ ತಿಳಿಯುತ್ತದೆ. ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲಾ ]. ಭೂಮಿಯಲ್ಲಿ ಅಪಾನಶಕ್ತಿ ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ ನಿರಾಲಂಭವಾಗಿ ನಿಂತಿದೆ. ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ನ್ಯೂಟನ್ ಕೂಡಾ ಈ ಸತ್ಯವನ್ನು ಕಂಡುಕೊಂಡಿದ್ದು ಯಾವುದೇ ಸಂಶೋಧನೆಯಿಂದಲ್ಲ, ಬದಲಾಗಿ ಸೇಬುಹಣ್ಣಿನ ಮರದಿಂದ ಸೇಬು ಕೆಳಕ್ಕೆ ಬಿದ್ದಾಗ ಅದು ಅವನಿಗೆ ಸ್ಫುರಣವಾಯಿತು.
ಪ್ರಾಣ ಮತ್ತು ಅಪಾನರು ಮಣ್ಣು-ನೀರಿನಲ್ಲಿ ತುಂಬಿ ಈ ವಿಶ್ವದ ಭೌತಿಕ ರೂಪಕ್ಕೆ ಕಾರಣರಾದರು. ಅವರೇ ನಮ್ಮ ಪಿಂಡಾಂದಲ್ಲಿದ್ದು, ನಮ್ಮ ಅನ್ನಮಯಕೋಶಕ್ಕೆ ಆಕಾರ ಕೊಟ್ಟವರು. ಪಂಚಭೂತಗಳಲ್ಲಿ ಮಣ್ಣು ಮತ್ತು ನೀರಿನಲ್ಲಿ ತುಂಬಿರುವ ಪ್ರಾಣಶಕ್ತಿಯನ್ನು ವಿವರಿಸಿದ ಪಿಪ್ಪಲಾದರು, ಮುಂದೆ ಆಕಾಶದಲ್ಲಿರುವ ಪ್ರಾಣಶಕ್ತಿಯನ್ನು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ಅಂತರಾ ಯದಾಕಾಶಃ ಸ ಸಮಾನಃ” ಎಂದು. ಹಿಂದೆ ಹೇಳಿದಂತೆ ನಮ್ಮ ಹೃದಯಾಕಾಶದಲ್ಲಿ ಹೇಗೆ ‘ಸಮಾನ’ ನಾಮಕ ಪ್ರಾಣ ತುಂಬಿ ನಿಂತು ನಡೆಸುತ್ತಿದ್ದಾನೋ, ಹಾಗೇ ಹೊರಗೆ ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಆಕಾಶದಲ್ಲಿ, ‘ಅವಕಾಶವಾಗಿ’, ಪ್ರಾಣದೇವರು ಆಕಾಶದ ದೇವತೆಯಾದ ಗಣಪತಿಯ ಅಂತರ್ಯಾಮಿಯಾಗಿ ನೆಲಸಿ, ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಪಂಚದ ಸಮಸ್ತ ಚಟುವಟಿಕೆಗಳು ನಡೆಯುವುದು ಆಕಾಶದಲ್ಲಿ. ಆಕಾಶವೇ ಇಲ್ಲದಿದ್ದರೆ ಯಾವ ಚಟುವಟಿಕೆಗೂ ಅವಕಾಶವಿಲ್ಲ. ವಿಶ್ವದಲ್ಲಿ ಪ್ರತಿಯೊಂದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವವರು ‘ಸಮಾನ’ ಅಂತರ್ಯಾಮಿ ಮುಖ್ಯಪ್ರಾಣ ದೇವರು. ದೇಹದಲ್ಲಿರುವ ೭೨ಕೋಟಿ ೭೨ಲಕ್ಷ ನಾಡಿಗಳಲ್ಲಿ ಜೀವವಾಗಿ ತುಂಬಿರುವ ‘ವ್ಯಾನ’ ನಾಮಕ ಪ್ರಾಣ, ಹೊರಗೆ ಆಕಾಶದಲ್ಲಿ ವಾಯುವಾಗಿ ನಮಗೆ ಜೀವವಾಯುವಾದ ಆಮ್ಲಜನಕವನ್ನು ನೀಡುತ್ತಾರೆ. ಆಕಾಶದಲ್ಲಿ ಗಾಳಿ ಇರುವುದರಿಂದ ನಮಗೆ ಶಬ್ದದ ಅನುಭವವಾಗುತ್ತದೆ. ಗಾಳಿಯಲ್ಲಿ, ಹತ್ತು ದಿಕ್ಕುಗಳಲ್ಲಿ, ನಮ್ಮ ಗ್ರಹಣೇಂದ್ರಿಯದಲ್ಲಿ ತುಂಬಿ ನಮಗೆ ಶಬ್ದ ಕೇಳುವಂತೆ ಮಾಡುವವರು ‘ವ್ಯಾನ’ ಅಂತರ್ಗತ ಮುಖ್ಯಪ್ರಾಣ ದೇವರು. ಈ ಎಲ್ಲಾ ವಿಚಾರಗಳೂ ಬಹಳ ಅದ್ಭುತವಾದ ವಿಜ್ಞಾನ. ಇದು ಯಾವುದೇ ಸಂಶೋಧನೆಗೆ ನಿಲುಕದ ವಿಷಯ. ಇದು ನಮ್ಮ ಪ್ರಾಚೀನ ಋಷಿಗಳು ಭಗವದನುಗ್ರಹದಿಂದ ಅಂತರ್ದರ್ಶನದಲ್ಲಿ ಕಂಡುಕೊಂಡ ಸತ್ಯ.

ಪ್ರಶ್ನೋಪನಿಶದ್ : ಪ್ರಶ್ನೆ 3 ( 9 - 10 )
ತೇಜೋ ಹವಾ ಉದಾನಃ । ತಸ್ಮಾದುಪಶಾಂತತೇಜಾಃ । ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈರ್ಯಚ್ಚಿತ್ತಸ್ತೇನೈಷ ಪ್ರಾಣ ಆಯತಿ ॥ ೯॥
ಪ್ರಾಣಸ್ತೇಜಸಾ ಯುಕ್ತಃ ಸ ಹಾSತ್ಮನಾ ಯಥಾಸಂಕಲ್ಪಿತಂ ಲೋಕಂ ನಯತಿ ॥ ೧೦॥
ಈ ಹಿಂದೆ ವಿವರಿಸಿದಂತೆ: ‘ಉದಾನ’ ಜೀವನನ

್ನು
ದೇಹದಲ್ಲಿನ ಯಾವುದೋ ಒಂದು ನಾಡಿಯ ಮುಖೇನ ದೇಹದಿಂದ ಹೊರ ಕರೆದುಕೊಂಡು ಹೋಗುತ್ತಾನೆ.
ಪ್ರಾಣದೇವರು ಜೀವನೊಂದಿಗೆ ದೇಹವನ್ನು ಬಿಟ್ಟ ತಕ್ಷಣ, ದೇಹ ಶವವಾಗುತ್ತದೆ ಮತ್ತು
ತಣ್ಣಗಾಗುತ್ತದೆ. ಹೇಗೆ ನಮ್ಮ ದೇಹದ ಒಳಗೆ ಪ್ರಾಣಾಗ್ನಿಯಾಗಿ ತೇಜಸ್ಸಿನ ದೇವತೆ ‘ಉದಾನ’
ಸನ್ನಿಹಿತನಾಗಿದ್ದಾನೋ, ಹಾಗೇ ದೇಹದ ಹೊರಗೆ ಪಂಚಭೂತಗಳಲ್ಲಿ ‘ಉದಾನ’ ನಾಮಕ ಪ್ರಾಣ
ಅಗ್ನಿಯಲ್ಲಿ ಸನ್ನಿಹಿತನಾಗಿದ್ದಾನೆ.
ಹೀಗೆ ಸಮಸ್ತ ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿರುವ ಒಂದೊಂದು ಶಕ್ತಿಯ ಹಿಂದಿರುವ ಮೂಲಶಕ್ತಿ ಪ್ರಾಣದೇವರು. ಪ್ರಪಂಚದಲ್ಲಿ ಪ್ರಾಣದೇವರ ಪ್ರವೇಶವಿಲ್ಲದೇ ಒಂದು ಹುಲ್ಲುಕಡ್ಡಿಗೂ ಅಸ್ತಿತ್ವವಿಲ್ಲ. ಇಡೀ ಬ್ರಹ್ಮಾಂಡದಲ್ಲಿ ಪಂಚಭೂತಗಳ ಒಳಗೆ, ಪಂಚೇಂದ್ರಿಯದ ಒಳಗೆ, ಪಂಚಪ್ರಾಣನಾಗಿ ತುಂಬಿ, ಇಡೀ ಪ್ರಪಂಚವನ್ನು ನಿಯಂತ್ರಿಸುವ ಈ ಪಂಚಪ್ರಾಣರ ಮಹಿಮೆಯೇ ಇಷ್ಟಿರುವಾಗ, ಇನ್ನು ಈ ಪ್ರಾಣದೇವರನ್ನೂ ನಿಯಂತ್ರಿಸುವ ಭಗವಂತನ ಮಹಿಮೆ ಅದೆಷ್ಟಿರಬಹುದು? ಅದು ನಮ್ಮ ಮನಸ್ಸು ಗ್ರಹಿಸಲು ಅಸಾಧ್ಯವಾದ ಅಗಣಿತ ಶಕ್ತಿ!
ದೇಹದಿಂದ ಜೀವನನ್ನು ಆಚೆ ಕರೆದುಕೊಂಡು ಹೋಗುವ ಪ್ರಾಣದೇವರು, ಆ ಜೀವದ ಮುಂದಿನ ಗತಿಯನ್ನು ಜೀವದ ಕರ್ಮಕ್ಕನುಸಾರವಾಗಿ ನಿರ್ಧರಿಸುತ್ತಾರೆ. ಜೀವಕ್ಕೆ ಮರುಹುಟ್ಟು ತಕ್ಷಣ ಆಗಬಹುದು ಅಥವಾ ಸೂಕ್ಷ್ಮಲೋಕದಲ್ಲಿ ಸುಖವನ್ನೋ ಅಥವಾ ದುಃಖವನ್ನೋ ಅನುಭವಿಸಿದ ನಂತರ ಆಗಬಹುದು. ಜೀವ ದೇಹವನ್ನು ಬಿಟ್ಟು ಹೊರ ಹೋದಾಗ, ಆ ಜೀವಕ್ಕೆ ಸಂಬಂಧಿಸಿದ ಚಕ್ಷುರಾದಿ ಇಂದ್ರಿಯಗಳು ಮನಸ್ಸಿನ ಜೊತೆಗೆ ಜೀವದ ಸೂಕ್ಷ್ಮ ಶರೀರದೊಂದಿಗಿರುತ್ತವೆ.
ಮೂಲತಃ ಎಲ್ಲಾ ಇಂದ್ರಿಯಗಳು ಇರುವುದು ಸೂಕ್ಷ್ಮ ಶರೀರದಲ್ಲೇ. ಸ್ಥೂಲ ಶರೀರದ ಭೌತಿಕ ಇಂದ್ರಿಯ ಕೆಲಸ ಮಾಡದೇ ಇರಬಹುದು, ಆದರೆ ಸೂಕ್ಷ್ಮ ಶರೀರದಲ್ಲಿನ ಎಲ್ಲಾ ಇಂದ್ರಿಯಗಳು ಸುಸೂತ್ರವಾಗಿರುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿ ಕುರುಡನಾಗಿದ್ದರೆ, ಆತನ ಸೂಕ್ಷ್ಮ ಶರೀರದ ಇಂದ್ರಿಯ ಕುರುಡಾಗಿರುವುದಿಲ್ಲ. [ಈ ಕುರಿತು ಕೆಲವು ನೈಜ ಘಟನೆಗಳನ್ನೊಳಗೊಂಡ ವಿಷಯವನ್ನು ನಾವು Raymond moody ಬರೆದಿರುವ Life after life ಎನ್ನುವ ಪುಸ್ತಕದಲ್ಲಿ ಕಾಣಬಹುದು]. ಜೀವ ಮರುಹುಟ್ಟು ಪಡೆದಾಗ ಇದೇ ಇಂದ್ರಿಯಗಳೊಂದಿಗೆ ಮರಳಿ ಹುಟ್ಟುತ್ತಾನೆ.
ಜೀವದ ಮರುಜನ್ಮಕ್ಕೆ ನಿರ್ಣಾಯಕ ‘ದೇಹತ್ಯಾಗ ಮಾಡುವ ಕೊನೇ ಕ್ಷಣದಲ್ಲಿ ಜೀವ ಮಾಡುವ ಚಿಂತನೆ’. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ ॥ಭಗವದ್ಗೀತಾ-೮-೬॥ ಕೃಷ್ಣ ಹೇಳುತ್ತಾನೆ: “ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ, ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ” ಎಂದು. [ಇದಕ್ಕೆ ಉತ್ತಮ ದೃಷ್ಟಾಂತ ಭರತ ಚಕ್ರವರ್ತಿ ಜಿಂಕೆಯಾಗಿ ಹುಟ್ಟುವ ಕಥೆ (ಭಾಗವತ-೫-೮)]. ಇಲ್ಲಿ ಪಿಪ್ಪಲಾದರು ಇದನ್ನೇ ‘ಯಚ್ಚಿತ್ತಃ’ ಎಂದು ವಿವರಿಸಿದ್ದಾರೆ. ಪ್ರಾಣದೇವರು ಜೀವದ ಕೊನೇ ಕ್ಷಣದ ಇಚ್ಛೆಗನುಗುಣವಾಗಿ ಮತ್ತು ಜೀವದ ಕರ್ಮಕ್ಕನುಗುಣವಾಗಿ, ಆ ಜೀವ ಎಲ್ಲಿ ಮರಳಿ ಹುಟ್ಟಬೇಕೋ ಅಲ್ಲಿಗೆ ಕರೆದುಕೊಂಡು ಹೋಗಿ ಹುಟ್ಟಿಸುತ್ತಾರೆ.[ಇಲ್ಲಿ ಎಲ್ಲವೂ ಪರಾಬ್ಧ ಕರ್ಮಕ್ಕನುಗುಣವಾಗಿ ಭಗವಂತನ ಇಚ್ಛೆಯಂತೆಯೇ ನಡೆಯುತ್ತದೆ. ಚಿತ್ತದ ದೇವತೆ ಕೂಡಾ ಪ್ರಾಣನಾಗಿರುವುದರಿಂದ ಜೀವದ ಕೊನೇ ಇಚ್ಛೆ ಕೂಡಾ ಪ್ರಾಣದೇವರ ಅಧೀನ!]
ಇಲ್ಲಿಯ ತನಕ ಪಿಪ್ಪಲಾದರು ಒಂದು ಅದ್ಭುತವಾದ ಪ್ರಾಣತತ್ತ್ವದ ಮಹಿಮೆಯನ್ನು ವಿವರಿಸಿದರು. ಈ ಪ್ರಾಣತತ್ತ್ವದ ಮಹತ್ವವನ್ನು ನಾವೆಲ್ಲರೂ ಎಲ್ಲಾ ಸಮಯದಲ್ಲೂ ತಿಳಿದಿರಬೇಕು. ಉದಾಹರಣೆಗೆ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಅಥವಾ ಮನೆಯಲ್ಲಿ ಪ್ರಾಣದೇವರ ಉಪಾಸನೆ ಮಾಡುತ್ತೇವೆ. ಈ ರೀತಿ ಪೂಜೆ ಮಾಡುವಾಗ ನಮಗೆ ಪ್ರಾಣದೇವರ ಈ ಮಹಿಮೆಯ ಎಚ್ಚರ ಇರಬೇಕು. ತಿಳಿದು ಉಪಾಸನೆ ಮಾಡಿದಾಗ ಅಲ್ಲಿ ಸಿಗುವ ಆನಂದ ಅಪರಂಪಾರವಾದುದು. ಆ ಆನಂದವನ್ನು ವಿವರಿಸಲು ಸಾಧ್ಯವಿಲ್ಲ, ಕೇವಲ ಅನುಭವಿಸಬೇಕು! ಇಲ್ಲಿ ಮುಂದುವರಿದು ಪಿಪ್ಪಲಾದರು ಪ್ರಾಣದೇವರ ಬಗಿಗಿನ ಈ ಜ್ಞಾನವನ್ನು ಅರಿತು ಉಪಾಸನೆ ಮಾಡುವುದರ ಫಲಶ್ರುತಿಯನ್ನು ವಿವರಿಸುತ್ತಾರೆ.

ಪ್ರಶ್ನೋಪನಿಶದ್ : ಪ್ರಶ್ನೆ 3 ( 11 -12 )
ಯ ಏವಂ ವಿದ್ವಾನ್ ಪ್ರಾಣಂ ವೇದ ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ ॥ ೧೧॥
ಪ್ರಾಣದೇವರು ಒಳಗಿನಿಂದ ಪಂಚಪ್ರಾಣರಾಗಿದ್ದಾರೆ; ಹೊರಗೆ ಪಂಚಭೂತಗಳಲ್ಲಿದ್ದಾರೆ; ಸೂರ್ಯನಲ್ಲಿದ್ದಾರೆ; ಇಂದ್ರಿಯಗಳಲ್ಲಿದ್ದಾರೆ; ಹುಟ್ಟು-ಸಾವುಗಳಲ್ಲಿದ್ದಾರೆ; ಪಂಚಕೋಶಗಳ

ಲ್ಲಿ
ತುಂಬಿ ನಮ್ಮನ್ನು ನಡೆಸುತ್ತಿದ್ದಾರೆ; ನಮ್ಮ ಬದುಕಿನ ಒಂದೊಂದು ಕ್ಷಣವೂ ಪ್ರಾಣದೇವರಿಂದ
ನಿಯಂತ್ರಿಸಲ್ಪಡುತ್ತದೆ- ಎಂದು ತಿಳಿದು ಯಾರು ಉಪಾಸನೆ ಮಾಡುತ್ತಾರೋ: ಅವರು
ಜೀವನದಲ್ಲಿ ಎಂದೂ ದುರಂತವನ್ನು[ಚಿಕ್ಕವರು ತಮ್ಮ ಕಣ್ಣ ಮುಂದೆ ಸಾಯುವ ದುರಂತ]
ಕಾಣುವುದಿಲ್ಲ; ಅವರ ಬುದ್ಧಿಶಕ್ತಿ ಎಂದೂ ಕುಂದುವುದಿಲ್ಲ; ಅವರು ಬುದ್ಧಿವಂತ
ಜ್ಞಾನಿಯಾಗಿ ಬೆಳೆಯುತ್ತಾರೆ; ಬಂದ ಜ್ಞಾನ ಅವರಲ್ಲಿ ಕೊನೇ ತನಕ ಸ್ಮರಣಶಕ್ತಿಯಾಗಿ
ಉಳಿಯುತ್ತದೆ. ಮುಖ್ಯವಾಗಿ ಪ್ರಾಣದೇವರ ಉಪಾಸನೆ ಮಾಡುವುದರಿಂದ ಅವರು ಸಂಸಾರದಿಂದ
ಪಾರಾಗಿ, ಶಾಶ್ವತವಾಗಿ ಮೋಕ್ಷದಲ್ಲಿ ಭಗವಂತನನ್ನು ಸೇರುತ್ತಾರೆ.
ಮೋಕ್ಷ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠ ಸಾಧನೆ –ಭಗವಂತನನ್ನು ಪ್ರಾಣದೇವರ ಮೂಲಕ ಉಪಾಸನೆ ಮಾಡುವುದು. ಇದನ್ನೇ ವೇದದಲ್ಲಿ ಈ ರೀತಿ ಹೇಳಲಾಗಿದೆ ಎಂದು ಪಿಪ್ಪಲಾದರು ವೇದದ ಒಂದು ಮಂತ್ರವನ್ನು ಉಲ್ಲೇಖಿಸುತ್ತಾರೆ:
ತದೇಷ ಶ್ಲೋಕಃ -
ಉತ್ಪತ್ತಿಮಾಗತಿಂ ಸ್ಥಾನಂ ವಿಭುತ್ವಂ ಚೈವ ಪಂಚಧಾ ।
ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ ವಿಜ್ಞಾಯಾಮೃತಮಶ್ನುತ ಇತಿ ॥ ೧೨॥
ನಾವು ತಿಳಿಯಬೇಕಾದುದು: ಪ್ರಾಣದೇವರ ಹುಟ್ಟಿನ ಮಹಿಮೆಯನ್ನು; ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣಶಕ್ತಿಯ ಮಹಿಮೆಯನ್ನು; ಪಂಚಭೂತಗಳಲ್ಲಿ ಮತ್ತು ಪಂಚಪ್ರಾಣರಾಗಿ ನಮ್ಮ ದೇಹದಲ್ಲಿ ತುಂಬಿರುವ ಅವರ ಮಹಿಮೆಯನ್ನು. ನಾವು ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಪ್ರಾಣದೇವರ ವೈಭವವನ್ನು ಅರಿತಿರಬೇಕು. ಇದನ್ನೆಲ್ಲವನ್ನು ತಿಳಿದರೆ ಮಾತ್ರ ಭಗವಂತನನ್ನು ಕಾಣಲು ಸಾಧ್ಯ. ಪ್ರಾಣದೇವರನ್ನು ತಿಳಿಯದೇ ಭಗವಂತನನ್ನು ತಿಳಿಯಲು ಸಾಧ್ಯವಿಲ್ಲ.
ಇಲ್ಲಿ ಬಳಕೆಯಾದ ‘ಚ’-ಕಾರ ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆ ಅತ್ಯಂತ ಮುಖ್ಯವಾದುದು ಎನ್ನುವುದನ್ನು ಸೂಚಿಸುತ್ತದೆ. ಅದೇ ರೀತಿ ನಾವು ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆಯನ್ನು ತಿಳಿದಿರಲೇಬೇಕು ಎನ್ನುವುದನ್ನು ‘ಏವ’-ಕಾರ ಸೂಚಿಸುತ್ತದೆ. ಪ್ರಾಣದೇವರ ಈ ಮಹಿಮೆಯನ್ನು ಅರಿತವನು ಸಾವಿಲ್ಲದ, ಆನಂದಮಯವಾದ ಮೋಕ್ಷವನ್ನು ಸೇರುತ್ತಾನೆ ಎನ್ನುತ್ತದೆ ವೇದ.
ಇಲ್ಲಿ ಕೊನೆಯಲ್ಲಿ ‘ವಿಜ್ಞಾಯಾಮೃತಮಶ್ನುತ’ ಎನ್ನುವ ಪದವನ್ನು ಎರಡು ಬಾರಿ ಬಳಸಲಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅಧ್ಯಾಯ ಮುಗಿಯಿತು ಎನ್ನುವುದನ್ನು ಸೂಚಿಸಲು ಈ ರೀತಿ ಕೊನೆಯಲ್ಲಿ ಒಂದು ಪದವನ್ನು ಎರಡು ಬಾರಿ ಬಳಸುತ್ತಾರೆ. ಅದೇ ರೀತಿ ಇಲ್ಲಿ ಬಳಸಲಾದ ‘ಇತಿ’ ಎನ್ನುವ ಪದ ಇಲ್ಲಿಗೆ ಮೂರನೇ ಪ್ರಶ್ನೆಗೆ ಉತ್ತರರೂಪವಾದ ಗ್ರಂಥ ಸಮಾಪ್ತಿಯಾಯಿತು ಎನ್ನುವುದನ್ನು ಸೂಚಿಸುತ್ತದೆ.
ಇತಿ ಪ್ರಶ್ನೋಪನಿಷದಿ ತೃತೀಯಃ ಪ್ರಶ್ನಃ ॥
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಮೂರನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

No comments:
Post a Comment