ನಮಗೆ ಭಗವದ್ಗೀತೆಯಲ್ಲಿ ಸಿಗುವುದು ಏನು ಎಂದು ಸ್ಥೂಲವಾಗಿ ನೋಡಿದರೆ, ಈ ಕೆಳಗಿನ ಕೆಲವು ಮುಖ್ಯ ಅಂಶಗಳು ಕಾಣುತ್ತವೆ:
- ಆತ್ಮ ಎಂದರೇನು, ಅದರ ಗುಣಗಳೇನು
- ಸ್ಥಿತಪ್ರಜ್ಞ ಎಂದರೆ ಯಾರು, ಅಂತಹವರ ಗುಣಗಳೇನು
- ಆಧ್ಯಾತ್ಮದ ಮೂರು ಮಾರ್ಗಗಳಾದ – ಕರ್ಮ ಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ
- ತ್ರಿಗುಣಗಳಾದ ಸಾತ್ವಿಕ ಗುಣ, ತಮೋಗುಣ ಮತ್ತು ರಜೋ ಗುಣಗಳು
- ಚಾತುರ್ವರ್ಣಗಳೆಂದರೇನು, ಏಕೆ ಆ ರೀತಿಯ ವಿಭಾಗ ಮಾಡಲಾಗಿದೆ
- ಆಸೆಗಳನ್ನು ತೊರೆಯುವುದು ಎಂದರೇನು, ನಮ್ಮ ಪಂಚೇದ್ರಿಯಗಳನ್ನು ಅಂಕೆಯಲ್ಲಿಡುವುದು ಎಂದರೇನು
- ಧ್ಯಾನ ಎಂದರೇನು, ಅದನ್ನು ಏಕೆ ಮಾಡಬೇಕು ಮತ್ತು ಹೇಗೆ ಮಾಡಬೇಕು
- ನಿರಾಕಾರ, ನಿರ್ಗುಣ ಪರಬ್ರಹ್ಮನ ಪರಿಕಲ್ಪನೆ ಏನು
- ಜ್ಞಾನಿ ಎಂದರೆ ಯಾರು, ಅಂಥವನ ಗುಣಗಳೇನು
- ಭಕ್ತ ಎಂದರೆ ಯಾರು, ಅಂಥವನ ಗುಣಗಳೇನು
- ಮೋಕ್ಷ ಎಂದರೇನು, ಅದನ್ನು ಪಡೆಯುವ ಬಗೆ ಹೇಗೆ
- ಇನ್ನೂ ಅನೇಕ ವಿಷಯಗಳಿವೆ, ಮುಂದೆ ಮಿಕ್ಕವುಗಳನ್ನು ನೋಡೋಣ
ಭಗವದ್ಗೀತೆಯ ಮೊದಲನೇ ಅಧ್ಯಾಯ “ಅರ್ಜುನ ವಿಷಾದ ಯೋಗ”. ಇದರಲ್ಲಿ 46 ಶ್ಲೋಕಗಳಿವೆ. ಈ ಅಧ್ಯಾಯದಲ್ಲಿ ಮುಖ್ಯವಾಗಿ ಕುರುಕ್ಷೇತ್ರದಲ್ಲಿ ಕಾದಾಡಲು ಸೇರಿರುವ ಎರಡೂ ಕಡೆಯ ಸೇನೆಯ ಬಗ್ಗೆ, ಮುಖ್ಯವಾದ ವೀರರು, ಸೇನಾನಿಗಳ ಬಗ್ಗೆ, ಅರ್ಜುನನು ತನ್ನ ಬಂಧು ಬಾಂಧವರ, ಗುರು ಹಿರಿಯರ ಜತೆ ಕಾದಾಡಲು ಹಿಂಜರಿದು ತನಗೆ ಯಾವ ರಾಜ್ಯವನ್ನೂ ಪಡೆಯುವ ಆಸೆ ಇಲ್ಲವೆಂದೂ, ಅಲ್ಲಿದ್ದವರವನ್ನು ಕೊಲ್ಲುವುದು ತನ್ನ ಕೈಲಾಗದ ವಿಷಯವೆಂದು ತಿಳಿಸಿ ಶಸ್ತ್ರತ್ಯಾಗ ಮಾಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ. ಇದೆಲ್ಲ ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶ ಮಾಡಲು ಕಾರಣವಾದ ಪೀಠಿಕೆ ಎನ್ನಬಹುದು.

No comments:
Post a Comment