Monday, 19 November 2012

ವೇದೋಕ್ತ ಮಂತ್ರಂ ಪುಷ್ಪಮ್

ಓಂ. ಗಣಾನಾಂತ್ವಾ ಗಣಪತಿಗ್೦ ಹವಾಮಹೇ ಕವಿಂಕವೀನಾ ಮುಪಮಶ್ರವಸ್ತಮಮ್ ||
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತಆನಃ ಶ್ರುಣ್ವನ್ನೂತಿ ಭಿಃ ಸೀದ ಸಾದನಮ್ ||1||
ಗಣ ಸಮೂಹದ ಗಣ್ಯ ಗಣಪಗೆ ಬ್ರಹ್ಮ ಜ್ಞಾನದ ಬ್ರಹ್ಮ ಪತಿಗೆ
ಹವನಗೈಯುವೆ ಜ್ಯೇಷ್ಠರಾಜಗೆ ಸ್ತುತ್ಯದುಪಮೆಯ ಶ್ರೇಷ್ಠ ಕವಿಗೆ
ಸ್ತುತಿಯನಾಲಿಸಿ ನಮ್ಮ ಕರ್ಮಕೆ ಸಿದ್ದಿ ಕೊಡಲಾಸೀನನಾಗು ||೧||

ಸೋಮೋವಾ ಏತಸ ರಾಜ್ಯ ಮಾದತ್ತೇ|
ಯೋ ರಾಜಾ ಸನ್ರಾಜ್ಯೋವಾ ಸೋಮೇನ ಯಜತೇ|
ದೇವಸುವಾ ಮೇತಾನಿ ಹವೀಗ್೦ಷಿ ಭವಂತಿ|
ಏತಾವಂತೋ ವೈ ದೇವಾನಾಗ್೦ ಸವಾಃ|
ತ ಏವಾಸ್ಮೈ ಸವಾನ್ ಪ್ರಯಚ್ಛಂತಿ|
ತ ಏನಂ ಪುನಃ ಸುವಂತೇ ರಾಜ್ಯಾಯ|
ದೇವಸೂ ರಾಜ ಭವತಿ|| ||2||
ಸೋಮದೇವನು ಕಸಿದು ಕೊಂಬನು ಸೋಮಯಾಗವ ಗೈಯದವನ
ರಾಜ್ಯ ರಾಜನ ಸೋಮವರ್ಪಿಸೆ ಮರಳಿ ಕೊಡುವನು ತೃಪ್ತಿ ಪಡೆದು
ಹೋಮಿಸುತ್ತಿರೆ ಸೋಮರಸವನು ಈವರೈಸಿರಿ ದೇವತೆಗಳು
ಗ್ರಹಗಳಧಿಪತಿ ದೈವಪ್ರೇರಿತ ರಾಜನಾಗುವರಿದುವೆ ತೆರದಿ ||೨||
ಬಹುಗ್ವೈ ಬಹ್ವಶ್ವಾಯೈ ಬಹ್ವ ಜಾವಿಕಾಯೈ|
ಬಹು ವ್ರೀಹಿಯವಾಹಯೈ ಬಹುಮಾಷ ತಿಲಾಯೈ|
ಬಹು ಹಿರಣ್ಯಾಯೈ ಬಹು ಹಸ್ತಿಕಾಯೈ |
ಬಹುದಾಸ ಪೂರುಷಾಯೈ ರಯಿಮತ್ಯೈ ಪುಷ್ಟಿಮತ್ಯೈ|
ಬಹುರಾಯ ಸ್ಪೋಷಾಯೈ ರಾಜಾಸ್ತು||3||
ಬಹಳ ದನಗಳ ಬಹಳ ಹಯಗಳ ಬಹಳ ಕುರಿಗಳ ಆಡುಗಳನು
ತುಂಬು ಧಾನ್ಯವ ತುಂಬು ಕಾಳನು ತುಂಬು ಹೊನ್ನನು ಸೇವಕರನು
ಪಡೆದುಕೊಳ್ಳುತ ವೃದ್ಧಿಗೊಳ್ಳಲಿ ಸರ್ವ ವಿಧದಲಿ ರಾಜನಾಗಿ ||೩||

ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ|
ನಮೋ ವಯಂ ವೈ ಶ್ರವಣಾಯ ಕುರ್ಮಹೇ|
ಸ ಮೇ ಕಾಮಾನ್ ಕಾಮ ಕಾಮಾಯ ಮಹ್ಯಮ್||
ಕಾಮೇಶ್ವರೋ ವೈ ಶ್ರವಣೋದದಾತು|
ಕುಬೇರಾಯ ವೈ ಶ್ರವಣಾಯ|
ಮಹಾರಾಜಾಯ ನಮಃ ||4||
ಸಕಲ ಲಾಭವ ತನ್ನೊಳಿರಿಸಿಹ ರಾಜ ಶ್ರೇಷ್ಥಗೆ ನಮಿಸುತಿರುವೆ
ಭೋಗವಿಚ್ಛಿಪ ನನಗಭೀಷ್ಟವ ವರ ಕುಬೇರನು ನೀಡುತಿರಲಿ
ಕಾಮಕೀಶ್ವರ ಧನದ ಅಧಿಪಗೆ ರಾಜ ರಾಜಗೆ ನಮಿಪೆ ನಮಿಪೆ ||೪||
ಪರ್ಯಾಪ್ತ್ಯಾ ಅನಂತ ರಾಯಾಯ ಸರ್ವಸ್ತೋಮೋತಿ ರಾತ್ರ ಉತ್ತಮ ಮಹರ್ಭವತಿ
ಸರ್ವಸ್ಯಾಪ್ತ್ಯೈ ಸರ್ವಸ್ಯಜಿತ್ಯೈ ಸರ್ವಮೇವ ತೇನಾಪ್ನೋತಿ ಸರ್ವಂ ಜಯತಿ ||5||
ಪರಿಧಿಯಿರದಾನಂತ ರಾಜಗೆ ಸ್ತೋತ್ರವಾತಿರಾತ್ರ ಪಠಿಸಲು
ದಿನವು ಶ್ರೇಷ್ಠವು ಸರ್ವ ಪ್ರಾಪ್ತಿಯು ಸರ್ವ ಇಷ್ಟವು ಸರ್ವ ಜಯವು
ಪಡೆಯುತಿರುವರು ಅವನ ದಯೆಯಿಂ ಸಕಲ ಸಂಪದ ಸಕಲ ಗೆಲುವು ||೫||

ಓಂ ಯೋ ವೇದಾದೌ ಸ್ವರಃ ಪ್ರೊಕ್ತೋ ವೇದಾಂತೇ ಚ ಪ್ರತಿಷ್ಠಿತಃ|
ತಸ್ಯ ಪ್ರಕೃತಿ ಲೀನಸ್ಯ ಯಃ ಪರಸ್ಯ ಮಹೇಶ್ವರಃ ||6||
ಓಂ ಶಾಂತಿಃ ಶಾಂತಿಃ ಶಾಂತಿಃ
ವೇದದಾದಿಯ ಪ್ರಣವ ಶಬ್ಧವು ವೇದದಂತ್ಯದಿ ಅದುವೆ ಸ್ವರವು
ಪ್ರಕೃತಿ ಲೀನತೆಗೊಂಡ ತಾರಕನಾತನೇ ಪರಮೇಶರೂಪ ||೬||
ಓಂ ಶಾಂತಿಃ ಶಾಂತಿಃ ಶಾಂತಿಃ




ಯೋಪಾಂ ಪುಷ್ಪಂ ವೇದ
ಯೋಪಾಂ ಪುಷ್ಪಂ ವೇದ| ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ|
ಚಂದ್ರಮಾ ವಾ ಅಪಾಂ ಪುಷ್ಪಮ್|  ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ|
ಯ ಏವಂ ವೇದ ||೧||
ಜಲದ ಪುಷ್ಪವೆ ಚಂದ್ರನೆಂಬುದ ತಿಳಿಯೆ ಜಲವನು ಪುಷ್ಪವೆಂದು
ಪುಷ್ಪವಂತನು ಪ್ರಜಾವಂತನು ಪಶುಸಮೃಧ್ದವಂತನವನು
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು|1|

ಯೋಪಾಮಾಯತನಂ ವೇದ| ಅಯತನವಾನ್ ಭವತಿ|
ಅಗ್ನಿರ್ವಾ ಅಪಾಮಾಯತನಮ್| ಆಯತನವಾನ್ಭವತಿ|
ಯೋSಗ್ನೇರಾಯತನಂ ವೇದ| ಆಯತನವಾನ್ಭವತಿ|
ಆಪೋವಾ ಅಗ್ನೇರಾಯತನಂ| ಆಯತನವಾನ್ಭವತಿ|
ಯ ಏವಂ ವೇದ ||೨||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಅಗ್ನಿ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಅಗ್ನಿಯುಗಮವ ಸುಖದ ಆಶ್ರಯ ಪಡೆವನವನು
ನೀರು ಅಗ್ನಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು||2||


ಯೋಪಾಮಾಯತನಂ ವೇದ| ಆಯತನವಾನ್ಭವತಿ|
ವಾಯುರ್ವಾ ಅಪಾಮಾಯತನಮ್| ಆಯತನವಾನ್ಭವತಿ |
ಯೋವಾಯೋರಾಯತನಂ ವೇದ| ಆಯತನವಾನ್ಭವತಿ|
ಆಪೋವೈ ವಾಯೋರಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೩||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ವಾಯು ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ವಾಯು ಉಗಮವ ಸುಖದ ಆಶ್ರಯ ಪಡೆವನವನು
ನೀರು ವಾಯುಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||3||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಅಸೌ ವೈ ತಪನ್ನಪಾಮಾಯತನಮ್| ಆಯತನವಾನ್ಭವತಿ|
ಯೋsಮುಷ್ಯ ತಪತ ಆಯತನಂ ವೇದ| ಆಯತನವಾನ್ಭವತಿ|
ಆಪೋವಾ ಅಮುಷ್ಯ ತಪತ ಆಯತನಮ್| ಆಯತನವಾನ್ಭವತಿ
ಯ ಏವಂ ವೇದ ||೪||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ತಪದ ಸೂರ್ಯನು ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಸೂರ್ಯನುಗಮವ ಸುಖದ ಆಶ್ರಯ ಪಡೆವನವನು
ನೀರು ಸೂರ್ಯಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||4||
ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಚಂದ್ರಮಾವಾ ಅಪಾಮಾಯತನಮ್| ಆಯತನವಾನ್ಭವತಿ|
ಯಶ್ಚಂದ್ರಮಸ ಆಯತನಂ ವೇದ| ಆಯತನವಾನ್ಭವತಿ|
ಆಪೋವೈ ಚಂದ್ರಮಸ ಆಯತನಂ| ಆಯತನವಾನ್ಭವತಿ|
ಯ ಏವಂ ವೇದ ||೫||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಚಂದ್ರ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಚಂದ್ರನುಗಮವ ಸುಖದ ಆಶ್ರಯ ಪಡೆವನವನು
ನೀರು ಚಂದ್ರಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೫||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ನಕ್ಷತ್ರಾಣಿವಾ ಅಪಾಮಾಯತನಮ್| ಆಯತನವಾನ್ಭವತಿ|
ಯೋ ನಕ್ಷತ್ರಾಣಾಮಾಯತನಂ ವೇದ| ಆಯತನವಾನ್ಭವತಿ|
ಆಪೋವೈ ನಕ್ಷತ್ರಣಾಮಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೬||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ತಾರೆ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ತಾರೆಯುಗಮವ ಸುಖದ ಆಶ್ರಯ ಪಡೆವನವನು
ನೀರು ತಾರೆಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೬||
ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಪರ್ಜನ್ಯೋವಾ ಅಪಾಮಾಯತನಮ್| ಆಯತನವಾನ್ಭವತಿ
ಯಃ ಪರ್ಜನ್ಯಸ್ಯಾಯತನಂ ವೇದ| ಆಯತನವಾನ್ಭವತಿ|
ಆಪೋವೈ ಪರ್ಜನ್ಯಸ್ಯಾಯತನಮ್| ಆಯತನವಾನ್ಭವತಿ|
ಯ ಏವಂ ವೇದ ||೭||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಮೋಡ ನೀರಿಗೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ಮೋಡದುಗಮವ ಸುಖದ ಆಶ್ರಯ ಪಡೆವನವನು
ನೀರು ಮೋಡಕೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೭||

ಯೋಪಾಮಾಯತನಂ ವೇದ| ಆಯತನವಾನ್ಭವತಿ|
ಸಂವತ್ಸರೋವಾ ಅಪಾಮಾಯತಮ್| ಆಯತನವಾನ್ಭವತಿ|
ಯಃ ಸಂವತ್ಸರಸ್ಯಾಯತನಂ ವೇದ| ಆಯತನವಾನ್ಭವತಿ|
ಅಪೋವೈ ಸಂವತ್ಸರಸ್ಯಾಯತನಮ್| ಆಯತನವಾನ್ಭವತಿ
ಯ ಏವಂ ವೇದ ||೮||
ತಿಳಿವನಾವನು ನೀರಿನುಗಮವ ಸುಖದ ಆಶ್ರಯ ಪಡೆವನವನು
ಒಂದು ವರ್ಷವೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿವನಾವನು ವರ್ಷದುಗಮವ ಸುಖದ ಆಶ್ರಯ ಪಡೆವನವನು
ನೀರು ವರ್ಷಕೆ ಉಗಮವೆಂಬುದ ತಿಳಿಯೆ ಪಡೆವನು ಭವ್ಯ ಸೌಧ
ತಿಳಿಯಲೀತೆರ ಪುಷ್ಪವಂತನು ಪ್ರಜೆಯ ಪಶುಗಳ ಹೊಂದುತಿಹನು ||೮||
ಯೋsಪ್ಸುನಾವಂ ಪ್ರತಿಷ್ಠಿತಾಂ ವೇದ| ಪ್ರತ್ಯೇವ ತಿಷ್ಠತಿ||
ಇಮೇ ವೈ ಲೋಕಾ ಅಪ್ಸು ಪ್ರತಿಷ್ಠಿತಾಃ| ತದೇಷಾsಭ್ಯನೂಕ್ತಾ ||೯||
ನೀರ ಮೇಲಿನ ನಾವೆಯಂದದಿ ತಿಳಿವನಾವನು ಭೂಮಿಯಿಂತು
ಲೋಕವೆಲ್ಲವವು ಸ್ಥಿರದಿ ನಿಂತಿದೆ ವೇದವೀತೆರ ಪೇಳುತಿಹುದು ||೯||


ಓಂ ಶಾಂತಿಃ ಶಾಂತಿಃ ಶಾಂತಿಃ ||

Thursday, 15 November 2012

ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ


ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ

ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿನ ಮಾಡುತಾರೆ. ಈ ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ಇದರ ಜೊತೆಗೆ ನಿಮ್ಮ ಮನೆಯಲ್ಲಿರ

ುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ.

ಪೂಜಾ ವಿಧಾನ ಇಲ್ಲಿದೆ.

ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ.

ರಂಗೋಲಿ, ಮಣೆ / ಮಂಟಪ
ದೇವರ ವಿಗ್ರಹ, ದೇವರ ಪಟ
ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ
ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ.
ಅರಿಶಿನ, ಕುಂಕುಮ, ಮಂತ್ರಾಕ್ಷತೆ
ಶ್ರೀಗಂಧ, ಊದಿನ ಕಡ್ಡಿ
ಹೂವು, ಪತ್ರೆ, ಗೆಜ್ಜೆ ವಸ್ತ್ರ
ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ
ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ
ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ
ಆರತಿ ತಟ್ಟೆ, ಸೊಡಲು, ಹೂಬತ್ತಿ,

ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ.

ದೇವ್ಯುವಾಚ
ದೇವದೇವ! ಮಹಾದೇವ! ತ್ರಿಕಾಲಙ್ಞ! ಮಹೇಶ್ವರ!
ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ||
ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ||
ಈಶ್ವರ ಉವಾಚ
ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ |
ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ||
ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ |
ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ||
ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ |
ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ||
ಸಮಸ್ತ ದೇವ ಸಂಸೇವ್ಯಮ್ ಅಣಿಮಾದ್ಯಷ್ಟ ಸಿದ್ಧಿದಮ್ |
ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ||
ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು |
ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ||
ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ |
ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ||
ಧ್ಯಾನಮ್
ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ
ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ |
ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ
ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ||
ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಙ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ||
ಓಂ
ಪ್ರಕೃತಿಂ, ವಿಕೃತಿಂ, ವಿದ್ಯಾಂ, ಸರ್ವಭೂತ ಹಿತಪ್ರದಾಮ್ |
ಶ್ರದ್ಧಾಂ, ವಿಭೂತಿಂ, ಸುರಭಿಂ, ನಮಾಮಿ ಪರಮಾತ್ಮಿಕಾಮ್ || 1 ||
ವಾಚಂ, ಪದ್ಮಾಲಯಾಂ, ಪದ್ಮಾಂ, ಶುಚಿಂ, ಸ್ವಾಹಾಂ, ಸ್ವಧಾಂ, ಸುಧಾಮ್ |
ಧನ್ಯಾಂ, ಹಿರಣ್ಯಯೀಂ, ಲಕ್ಷ್ಮೀಂ, ನಿತ್ಯಪುಷ್ಟಾಂ, ವಿಭಾವರೀಮ್ || 2 ||
ಅದಿತಿಂ ಚ, ದಿತಿಂ, ದೀಪ್ತಾಂ, ವಸುಧಾಂ, ವಸುಧಾರಿಣೀಮ್ |
ನಮಾಮಿ ಕಮಲಾಂ, ಕಾಂತಾಂ, ಕ್ಷಮಾಂ, ಕ್ಷೀರೋದ ಸಂಭವಾಮ್ || 3 ||
ಅನುಗ್ರಹಪರಾಂ, ಬುದ್ಧಿಂ, ಅನಘಾಂ, ಹರಿವಲ್ಲಭಾಮ್ |
ಅಶೋಕಾ,ಮಮೃತಾಂ ದೀಪ್ತಾಂ, ಲೋಕಶೋಕ ವಿನಾಶಿನೀಮ್ || 4 ||
ನಮಾಮಿ ಧರ್ಮನಿಲಯಾಂ, ಕರುಣಾಂ, ಲೋಕಮಾತರಮ್ |
ಪದ್ಮಪ್ರಿಯಾಂ, ಪದ್ಮಹಸ್ತಾಂ, ಪದ್ಮಾಕ್ಷೀಂ, ಪದ್ಮಸುಂದರೀಮ್ || 5 ||
ಪದ್ಮೋದ್ಭವಾಂ, ಪದ್ಮಮುಖೀಂ, ಪದ್ಮನಾಭಪ್ರಿಯಾಂ, ರಮಾಮ್ |
ಪದ್ಮಮಾಲಾಧರಾಂ, ದೇವೀಂ, ಪದ್ಮಿನೀಂ, ಪದ್ಮಗಂಧಿನೀಮ್ || 6 ||
ಪುಣ್ಯಗಂಧಾಂ, ಸುಪ್ರಸನ್ನಾಂ, ಪ್ರಸಾದಾಭಿಮುಖೀಂ, ಪ್ರಭಾಮ್ |
ನಮಾಮಿ ಚಂದ್ರವದನಾಂ, ಚಂದ್ರಾಂ, ಚಂದ್ರಸಹೋದರೀಮ್ || 7 ||
ಚತುರ್ಭುಜಾಂ, ಚಂದ್ರರೂಪಾಂ, ಇಂದಿರಾ,ಮಿಂದುಶೀತಲಾಮ್ |
ಆಹ್ಲಾದ ಜನನೀಂ, ಪುಷ್ಟಿಂ, ಶಿವಾಂ, ಶಿವಕರೀಂ, ಸತೀಮ್ || 8 ||
ವಿಮಲಾಂ, ವಿಶ್ವಜನನೀಂ, ತುಷ್ಟಿಂ, ದಾರಿದ್ರ್ಯ ನಾಶಿನೀಮ್ |
ಪ್ರೀತಿ ಪುಷ್ಕರಿಣೀಂ, ಶಾಂತಾಂ, ಶುಕ್ಲಮಾಲ್ಯಾಂಬರಾಂ, ಶ್ರಿಯಮ್ || 9 ||
ಭಾಸ್ಕರೀಂ, ಬಿಲ್ವನಿಲಯಾಂ, ವರಾರೋಹಾಂ, ಯಶಸ್ವಿನೀಮ್ |
ವಸುಂಧರಾ, ಮುದಾರಾಂಗಾಂ, ಹರಿಣೀಂ, ಹೇಮಮಾಲಿನೀಮ್ || 10 ||
ಧನಧಾನ್ಯಕರೀಂ, ಸಿದ್ಧಿಂ, ಸ್ರೈಣಸೌಮ್ಯಾಂ, ಶುಭಪ್ರದಾಮ್ |
ನೃಪವೇಶ್ಮ ಗತಾನಂದಾಂ, ವರಲಕ್ಷ್ಮೀಂ, ವಸುಪ್ರದಾಮ್ || 11 ||
ಶುಭಾಂ, ಹಿರಣ್ಯಪ್ರಾಕಾರಾಂ, ಸಮುದ್ರತನಯಾಂ, ಜಯಾಮ್ |
ನಮಾಮಿ ಮಂಗಳಾಂ ದೇವೀಂ, ವಿಷ್ಣು ವಕ್ಷಃಸ್ಥಲ ಸ್ಥಿತಾಮ್ || 12 ||
ವಿಷ್ಣುಪತ್ನೀಂ, ಪ್ರಸನ್ನಾಕ್ಷೀಂ, ನಾರಾಯಣ ಸಮಾಶ್ರಿತಾಮ್ |
ದಾರಿದ್ರ್ಯ ಧ್ವಂಸಿನೀಂ, ದೇವೀಂ, ಸರ್ವೋಪದ್ರವ ವಾರಿಣೀಮ್ || 13 ||
ನವದುರ್ಗಾಂ, ಮಹಾಕಾಳೀಂ, ಬ್ರಹ್ಮ ವಿಷ್ಣು ಶಿವಾತ್ಮಿಕಾಮ್ |
ತ್ರಿಕಾಲಙ್ಞಾನ ಸಂಪನ್ನಾಂ, ನಮಾಮಿ ಭುವನೇಶ್ವರೀಮ್ || 14 ||
ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಮ್ |
ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಮ್ ||
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಮ್ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ || 15 ||
ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ!
ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!
ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ!
ಲಕ್ಷ್ಮೀ! ಪ್ರಸೀದ ಸತತಂ ಸಮತಾಂ ಶರಣ್ಯೇ || 16 ||
ತ್ರಿಕಾಲಂ ಯೋ ಜಪೇತ್ ವಿದ್ವಾನ್ ಷಣ್ಮಾಸಂ ವಿಜಿತೇಂದ್ರಿಯಃ |
ದಾರಿದ್ರ್ಯ ಧ್ವಂಸನಂ ಕೃತ್ವಾ ಸರ್ವಮಾಪ್ನೋತ್-ಯಯತ್ನತಃ |
ದೇವೀನಾಮ ಸಹಸ್ರೇಷು ಪುಣ್ಯಮಷ್ಟೋತ್ತರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 17 ||
ಭೃಗುವಾರೇ ಶತಂ ಧೀಮಾನ್ ಪಠೇತ್ ವತ್ಸರಮಾತ್ರಕಮ್ |
ಅಷ್ಟೈಶ್ವರ್ಯ ಮವಾಪ್ನೋತಿ ಕುಬೇರ ಇವ ಭೂತಲೇ ||
ದಾರಿದ್ರ್ಯ ಮೋಚನಂ ನಾಮ ಸ್ತೋತ್ರಮಂಬಾಪರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 18 ||
ಭುಕ್ತ್ವಾತು ವಿಪುಲಾನ್ ಭೋಗಾನ್ ಅಂತೇ ಸಾಯುಜ್ಯಮಾಪ್ನುಯಾತ್ |
ಪ್ರಾತಃಕಾಲೇ ಪಠೇನ್ನಿತ್ಯಂ ಸರ್ವ ದುಃಖೋಪ ಶಾಂತಯೇ |
ಪಠಂತು ಚಿಂತಯೇದ್ದೇವೀಂ ಸರ್ವಾಭರಣ ಭೂಷಿತಾಮ್ || 19 ||
ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಸಂಪೂರ್ಣಮ್

ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ

ಪ್ರಶ್ನೋಪನಿಶದ್ : ಪ್ರಶ್ನೆ 4


ಪ್ರಶ್ನೋಪನಿಶದ್ : ಪ್ರಶ್ನೆ 4 (1)

ಇಲ್ಲಿಯ ತನಕ ಪ್ರಾಣ ದೇವರು ಭೌತಿಕವಾಗಿ, ಪ್ರಾಪಂಚಿಕವಾಗಿ, ಆಧ್ಯಾತ್ಮಿಕವಾಗಿ, ಹುಟ್ಟಿನಲ್ಲಿ, ಸಾವಿನಲ್ಲಿ ಮತ್ತು ಬದುಕಿನಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಎಲ್ಲವನ್ನೂ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಪಿಪ್ಪಲಾದರು ವಿವರಿಸಿದರ

ು. ಈ ಎಲ್ಲಾ ವಿವರಣೆಯನ್ನು ಕೇಳಿದ ‘ಸೌರ್ಯಾಯಣಿ ಗಾರ್ಗ್ಯಃರು’ ನಮ್ಮ ನಿದ್ದೆ ಹಾಗೂ ಕನಸಿನ ಮನಃಶಾಸ್ತ ಮತ್ತು ಅದರ ಹಿಂದಿನ ವಿಜ್ಞಾನವನ್ನು ತಿಳಿಯಬಯಸಿ ಮುಂದಿನ ಪ್ರಶ್ನೆ ಕೇಳುವುದರೊಂದಿಗೆ ಪ್ರಶ್ನೋಪನಿಷತ್ತಿನ ನಾಲ್ಕನೇ ಅಧ್ಯಾಯ ಆರಂಭವಾಗುತ್ತದೆ. ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಬನ್ನಿ, ಎಲ್ಲಿಯೂ ಕಾಣಸಿಗದ ಈ ಅಪೂರ್ವ ವಿಷಯವನ್ನು ಪ್ರಾಣದೇವರ ಮತ್ತು ಪ್ರಾಣಾಂತರ್ಗತ ಭಗವಂತನ ಕೃಪೆ ಬೇಡಿ, ಆರು ಋಷಿಗಳ ಜೊತೆ ಸೇರಿ ಪಿಪ್ಪಲಾದರಿಂದ ಕೇಳಿ ತಿಳಿಯೋಣ.

ಅಥ ಹೈನಂ ಸೌರ್ಯಾಯಣಿ ಗಾರ್ಗ್ಯಃ ಪಪ್ರಚ್ಛ । ಭಗವನ್ನೇತಸ್ಮಿನ್ ಪುರುಷೇ ಕಾನಿ ಸ್ವಪಂತಿ ಕಾನ್ಯಸ್ಮಿನ್ ಜಾಗ್ರತಿ ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ । ಕಸ್ಯೈತತ್ ಸುಖಂ ಭವತಿ । ಕಸ್ಮಿನ್ನು ಸರ್ವೇ ಸಂಪ್ರತಿಷ್ಠಿತಾ ಭವಂತೀತಿ ॥೧॥

ಸೌರ್ಯಾಯಣಿ ಗಾರ್ಗ್ಯಃರು’ ಪಿಪ್ಪಲಾದರ ಮುಂದೆ ತಮ್ಮ ಪ್ರಶ್ನೆಯನ್ನು ನಿವೇದಿಸಿಕೊಳ್ಳುತ್ತಾರೆ. ಅವರು ಕೇಳುವ ಪ್ರಶ್ನೆ ಹೀಗಿದೆ: ಎಚ್ಚರ-ಕನಸು-ನಿದ್ದೆ ಇವು ನಾವು ಅನುಭವಿಸುವ ಮೂರು ಅವಸ್ಥೆಗಳು. ನಮ್ಮ ದೇಹದಲ್ಲಿ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ತತ್ತ್ವಾಭಿಮಾನಿ ದೇವತೆಗಳಿದ್ದಾರೆ. ನಾವು ಎಚ್ಚರವಾಗಿದ್ದಾಗ ಈ ತತ್ತ್ವಾಭಿಮಾನಿ ದೇವತೆಗಳು ತಮ್ಮ ಕಾರ್ಯನಿರ್ವಹಿಸಿ ನಮಗೆ ಇಂದ್ರಿಯಾನುಭವವನ್ನು ಕೊಡುತ್ತಾರೆ. ನಾವು ಪೂರ್ಣನಿದ್ರಾವಸ್ಥೆಯಲ್ಲಿದ್ದಾಗ[Deep Sleep] ನಮ್ಮ ದೇಹವನ್ನು ನಿಯಂತ್ರಿಸುವ ಯಾವ ದೇವತೆಗಳು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ? ನಾವು ನಿದ್ದೆ ಮಾಡಿದಾಗಲೂ ಎಚ್ಚರವಾಗಿದ್ದು ಈ ದೇಹವನ್ನು ನಿಯಂತ್ರಿಸುವ ದೇವತೆಗಳು ಯಾರು? ನಿದ್ದೆಯಲ್ಲೂ ಜೀವನನ್ನು ಬದುಕಿಸಿ ಜೀವದಾನ ಮಾಡುವ ಶಕ್ತಿ ಯಾವುದು? ಇದು ಗಾರ್ಗ್ಯಃರ ಪ್ರಶ್ನೆ.
ಮುಂದುವರಿದು ಗಾರ್ಗ್ಯಃರು ಕನಸಿನ ಸ್ಥಿತಿಯ ಬಗ್ಗೆ ತಮ್ಮ ಪ್ರಶ್ನೆಯನ್ನು ಪಿಪ್ಪಲಾದರ ಮುಂದೆ ಪ್ರಸ್ತಾಪಿಸುತ್ತಾರೆ. ಎಚ್ಚರವೂ ಅಲ್ಲದ, ನಿದ್ದೆಯೂ ಅಲ್ಲದ ಮೂರನೇ ಸ್ಥಿತಿ ‘ಕನಸಿನ’ ಸ್ಥಿತಿ. ಈ ಕನಸಿನ ಪ್ರಪಂಚ ಬಹಳ ವಿಸ್ಮಯ. ನಾವು ಎಚ್ಚರದಲ್ಲಿ ಕಾಣಲು ಸಾಧ್ಯವೇ ಇಲ್ಲದ ವಿಷಯವನ್ನು ಕನಸಿನಲ್ಲಿ ಕಾಣುತ್ತೇವೆ. ನಾವು ಬಯಸಿದಂತೆ ನಮ್ಮ ಕನಸಿರುವುದಿಲ್ಲ. ನಮಗೆ ನಮ್ಮ ಕನಸಿನ ಮೇಲೆ ನಿಯಂತ್ರಣವಿಲ್ಲ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಮುಂದೆ ನಡೆಯಬಹುದಾದ ವಿಷಯವನ್ನು ಕನಸಿನರೂಪದಲ್ಲಿ ಕಾಣುತ್ತೇವೆ. ಇನ್ನು ಕೆಲವೊಮ್ಮೆ ಅರ್ಥಶೂನ್ಯ ಕನಸುಗಳನ್ನೂ ಕಾಣುತ್ತೇವೆ. ಈ ಕಾಣದ ಪ್ರಪಂಚವನ್ನು ನಮಗೆ ಕಾಣಿಸುವವರು ಯಾರು? ಯಾವ ದೇವತಾ ಶಕ್ತಿ ನಮಗೆ ಕನಸಿನ ಅನುಭವವನ್ನು ಕೊಡುತ್ತದೆ?
ಸಾಮಾನ್ಯವಾಗಿ ನಾವು ಒಳ್ಳೆಯ ನಿದ್ದೆ ಮಾಡಿ ಎದ್ದಾಗ “ಬಹಳ ಆನಂದವಾಗಿ ನಿದ್ರಿಸಿದೆ” ಎನ್ನುತ್ತೇವೆ. ಕನಸಿನಲ್ಲಿ ದುಃಖ ಪಡಬಹುದು, ಆದರೆ ನಿದ್ದೆಯಲ್ಲಿ ಯಾರೂ ದುಃಖ ಪಡುವುದಿಲ್ಲ. ಜೀವನಿಗೆ ಸುಖದ ಅನುಭವವಾಗುವುದು ಇಂದ್ರಿಯಾನುಭವದಿಂದ. [ನೋಡುವುದು, ಕೇಳುವುದು, ಮುಟ್ಟುವುದು, ತಿನ್ನುವುದು ಇತ್ಯಾದಿ] ನಿದ್ದೆಯಲ್ಲಿ ನಮಗೆ ಇಂದ್ರಿಯಾನುಭವ ಇರುವುದಿಲ್ಲ. ನಿದ್ದೆಯಲ್ಲಿ ಇಂದ್ರಿಯ ಮತ್ತು ಮನಸ್ಸು ಎರಡೂ ಕಾರ್ಯ ನಿರ್ವಹಿಸುವುದಿಲ್ಲ. ಹೀಗಿರುವಾಗ ಆನಂದ ಆಗುವುದು ಹೇಗೆ? ಈ ಆನಂದವನ್ನು ನೀಡುವವರು ಯಾರು? ನಾವು ನಿದ್ದೆ ಮಾಡಿದಾಗ ನಮ್ಮ ಇಂದ್ರಿಯಾಭಿಮಾನಿ ದೇವತೆಗಳು ಏನಾಗುತ್ತಾರೆ? ಅವರೇಕೆ ಕೆಲಸ ಮಾಡುವುದಿಲ್ಲ? ನಿದ್ದೆಯಲ್ಲಿ ನಮಗೆ ತಿಳಿಯದೇ ಅನೇಕ ಕ್ರಿಯೆಗಳು ನಡೆಯುತ್ತವೆ [ಉದಾಹರಣೆಗೆ: ಜೀರ್ಣಕ್ರಿಯೆ, ಉಸಿರಾಟ]. ನಾವು ನಿದ್ರಿಸಿದಾಗ ಎಚ್ಚರವಾಗಿದ್ದು ಈ ಕ್ರಿಯೆಗಳನ್ನು ಮಾಡಿ ನಮ್ಮನ್ನು ರಕ್ಷಿಸುವ ಶಕ್ತಿ ಯಾವುದು? ಇದು ಪ್ರಶ್ನೋಪನಿಷತ್ತಿನ ನಾಲ್ಕನೇ ಪ್ರಶ್ನೆ. ಈ ಪ್ರಶ್ನೆ ಅಪೂರ್ವವಾದುದು ಮತ್ತು ಈ ಪ್ರಶ್ನೆಯ ಉತ್ತರ ಆನಂದ ತರುವಂತಹದ್ದು ಎನ್ನುವುದನ್ನು ಇಲ್ಲಿ ಬಳಸಿರುವ[ಅಥ ಹೈನಂ ಎನ್ನುವಲ್ಲಿ] ‘ಹ’ಕಾರ ಸೂಚಿಸುತ್ತದೆ.
 ಪ್ರಶ್ನೋಪನಿಶದ್ : ಪ್ರಶ್ನೆ 4 (2)

ತಸ್ಮೈ ಸ ಹೋವಾಚ । ಯಥ ಗಾರ್ಗ್ಯ ಮರೀಚಯೋಽರ್ಕಸ್ಯಾಸ್ತಂ ಗಚ್ಛತಃ ಸರ್ವಾ ಏತಸ್ಮಿಂಸ್ತೇಜೋಮಂಡಲ ಏಕೀಭವಂತಿ । ತಾಃ ಪುನರುದಯತಃ ಪ್ರಚರಂತ್ಯೇವಂ ಹ ವೈ ತತ್ ಸರ್ವಂ ಪರೇ ದೇವೇ ಮನಸ್ಯೇಕೀಭವತಿ ।
ತೇನ ತರ್ಹ್ಯೇಷ ಪುರುಷೋ ನ ಶೃಣೋತಿ ನ ಪಶ್ಯತಿ ನ ಜಿಘ್ರತಿ ನ ರಸಯ

ತೇ ನ ಸ್ಪೃಶತೇ ನಾಭಿವದತೇ ನಾSದತ್ತೇ ನಾSನಂದಯತೇ ನ ವಿಸೃಜತೇ ನೇಯಾಯತೇ ಸ್ವಪಿತೀತ್ಯಾಚಕ್ಷತೇ ॥೨॥

ಗಾರ್ಗ್ಯಃರ ಪ್ರಶ್ನೆಗೆ ಇಲ್ಲಿ ಪಿಪ್ಪಲಾದರು ಕೊಡುವ ಉತ್ತರ ಅಪೂರ್ವವಾದುದು(‘ತಸ್ಮೈ ಸ ಹೋವಾಚ’ ಎನ್ನುವಲ್ಲಿ ಹ-ಕಾರ ಈ ಅಪೂರ್ವತೆಯನ್ನು ಸೂಚಿಸುತ್ತದೆ). ನಾವು ನಿತ್ಯವೂ ಅನುಭವಿಸುವ, ಆದರೂ ನಮಗೆ ತಿಳಿಯದ; ಎಂದೂ ಯೋಚಿಸದ; ನಾವು ಯೋಚಿಸಲೇ ಇಲ್ಲವಲ್ಲಾ ಎಂದು ಗಾಬರಿಗೊಳಿಸುವ ಮತ್ತು ಕಣ್ಣುತೆರೆಸುವ; ರೋಚಕವಾದ ಉತ್ತರವನ್ನು ಒಂದು ದೃಷ್ಟಾಂತದ ಮುಖೇನ ಪಿಪ್ಪಲಾದರು ಇಲ್ಲಿ ವಿವರಿಸಿದ್ದಾರೆ.
ಸಂಜೆಯಾದಾಗ ಸೂರ್ಯ ಮುಳುಗುತ್ತಾನೆ. ಆಗ ನಮಗೆ ಆತನ ಕಿರಣಗಳು ಆತನ ಒಳಗೆ ಸೇರಿಕೊಂಡಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಸೂರ್ಯ ಮುಳುಗುವುದಿಲ್ಲ, ಆತನ ಕಿರಣಗಳು ಆತನ ಒಳ ಸೇರುವುದಿಲ್ಲ. ಸೂರ್ಯ ಮುಳುಗಿದಂತೆ ಮತ್ತು ಆತನ ಕಿರಣಗಳು ಆತನ ಒಳ ಸೇರಿದಂತೆ ಭೂಮಿಯಲ್ಲಿರುವ ನಮಗೆ ಕಾಣಿಸುತ್ತದೆ ಅಷ್ಟೇ. ಅದೇ ರೀತಿ ಮುಂಜಾನೆ ಸೂರ್ಯ ಉದಯಿಸುತ್ತಾನೆ ಮತ್ತು ಆತನ ಪ್ರಖರವಾದ ಕಿರಣಗಳು ಆತನಿಂದ ಹೊರಬಂದಂತೆ ಕಾಣುತ್ತವೆ. ಇದೇ ರೀತಿ ನಾವು ಮಲಗಿದಾಗ ನಮ್ಮೊಳಗಿರುವ ದೇವತಾಶಕ್ತಿಗಳು ತಮ್ಮ ಪರಶಕ್ತಿಯಾದ, ನಮ್ಮ ಮನಸ್ಸಿನಲ್ಲಿ ಸದಾ ಸನ್ನಿಹಿತನಾಗಿರುವ, ಜ್ಞಾನಸ್ವರೂಪ ಭಗವಂತನನ್ನು ಹೋಗಿ ಸೇರುತ್ತವೆ ಮತ್ತು ಮುಂಜಾನೆ ಎದ್ದಾಗ, ಭಗವಂತನಿಂದ ಹೊರಬಂದು ಕಾರ್ಯ ನಿರ್ವಹಿಸುತ್ತವೆ. ವಾಸ್ತವವಾಗಿ ದೇವತೆಗಳು ಭಗವಂತನಲ್ಲಿ ಐಕ್ಯ ಹೊಂದುವುದಿಲ್ಲ. ಆದರೆ ನಮಗೆ ಆ ರೀತಿ ಅನುಭವವಾಗುತ್ತದೆ.
ಭಗವಂತ ಜ್ಞಾನಸ್ವರೂಪ. ಹೇಗೆ ಸೂರ್ಯನಿಗೆ ಬೆಳಕಿನ ಲೋಪವಿಲ್ಲವೋ ಹಾಗೇ ಭಗವಂತನಿಗೆ ಜ್ಞಾನದ ಲೋಪವಿಲ್ಲ. ಸೂರ್ಯ ಬೆಳಕಿನ ಉಂಡೆಯಾದರೆ ಭಗವಂತ ಜ್ಞಾನಸಾಗರ. ಈ ಜ್ಞಾನಸ್ವರೂಪ ಭಗವಂತ ಮತ್ತು ಪ್ರಾಣದೇವರು ನಿದ್ದೆಯಲ್ಲಿ ನಮ್ಮನ್ನು ನಿಯಂತ್ರಿಸುತ್ತಾರೆ. ಅವರು ನಿದ್ದೆಯಲ್ಲೂ ಸದಾ ನಮ್ಮನ್ನು ಉಸಿರಾಡಿಸಿ, ನಾವು ಸೇವಿಸಿದ ಆಹಾರವನ್ನು ಪಚನ ಮಾಡಿ, ನಮ್ಮನ್ನು ರಕ್ಷಿಸುತ್ತಾರೆ. ಇತರ ದೇವತಾಶಕ್ತಿಗಳು ಈ ಸಮಯದಲ್ಲಿ ಪ್ರಾಣದೇವರು ಮತ್ತು ಭಗವಂತನಲ್ಲಿ ಸೇರಿಕೊಂಡಿರುತ್ತಾರೆ. ಹೇಗೆ ಭಗವಂತ ಪ್ರಾಣದೇವರ ಅಂತರ್ಯಾಮಿಯಾಗಿ ನೆಲಸಿ ನಾವು ಉಂಡ ಆಹಾರವನ್ನು ಜೀರ್ಣಗೊಳಿಸುತ್ತಾನೆ ಎನ್ನುವುದನ್ನು ಕೃಷ್ಣ ಗೀತೆಯಲ್ಲಿ ಸುಂದರವಾಗಿ ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ : ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ । ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥ಭಗವದ್ಗೀತಾ-೧೫-೧೪॥ “ನಾನು ‘ವೈಶ್ವಾನರ’ನಾಗಿ ಜೀವಿಗಳ ದೇಹದೊಳಗಿದ್ದು, ಪ್ರಾಣ-ಅಪಾನರಿಂದೊಡಗೂಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ” ಎಂದು.
ಇಂದ್ರಿಯಾಭಿಮಾನಿ ದೇವತೆಗಳೆಲ್ಲರೂ ಭಗವತನಲ್ಲಿ ಸೇರಿಕೊಂಡಾಗ ಜೀವನಿಗೆ(ಪುರುಷಃ) ಯಾವುದೇ ಇಂದ್ರಿಯಾನುಭವ ಆಗುವುದಿಲ್ಲ. ಆತನಿಗೆ ಮಾತು ಕೇಳದು, ಕಣ್ಣು ಕಾಣದು, ವಾಸನೆ ಗ್ರಹಣವಾಗದು, ರುಚಿ ತಿಳಿಯದು, ಸ್ಪರ್ಶಜ್ಞಾನವಿಲ್ಲ, ಮಾತನಾಡಲಾಗುವುದಿಲ್ಲ, ಕೊಟ್ಟರೆ ಕೈ ತೆಗೆದುಕೊಳ್ಳುವುದಿಲ್ಲ, ಆನಂದಕೊಡುವ ಜನನೇಂದ್ರಿಯ ಕೆಲಸ ಮಾಡದು, ವಿಸರ್ಜನೆ ಕ್ರಿಯೆ ಇಲ್ಲ, ನಡೆಯಲು ಸಾಧ್ಯವಿಲ್ಲ. ಹೀಗೆ ನಿದ್ದೆಯಲ್ಲಿ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳೆರಡೂ ಕೆಲಸ ಮಾಡುವುದಿಲ್ಲ. ಈ ಸ್ಥಿತಿಯನ್ನು ‘ಸ್ವಪೀತಿ’ ಎನ್ನುತ್ತಾರೆ. ಮೇಲ್ನೋಟಕ್ಕೆ ಸ್ವಪೀತಿ ಎಂದರೆ ನಿದ್ರಿಸಿದ್ದಾನೆ ಎಂದರ್ಥ. ಆದರೆ ಸ್ವಪೀತಿ ಎಂದರೆ ಸ್ವತಂತ್ರನಾದ ಭಗವಂತನನ್ನು ಸೇರಿದ್ದಾನೆ ಎಂದರ್ಥ.
ಓದುಗರು ಇಲ್ಲಿ ಒಂದು ಅಪೂರ್ವವಾದ ಭಾಷಾ ವಿಶೇಷವನ್ನು ಗಮನಿಸಬೇಕು. ಇಲ್ಲಿ ಇಂದ್ರಿಯಗಳ ಕ್ರಿಯೆಯನ್ನು ಹೇಳುವಾಗ ಕೆಲವು ‘ಪರಸ್ಮೈಪದ’ ಮತ್ತೆ ಕೆಲವು ‘ಆತ್ಮನೇಪದ’ವನ್ನು ಬಳಸಲಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ ಈ ರೀತಿ ಪ್ರಯೋಗವಿದ್ದರೆ ಅದಕ್ಕೆ ಅಲ್ಲಿ ಒಂದು ವಿಶೇಷ ಅರ್ಥವಿದೆ ಎಂದರ್ಥ. ಇದನ್ನು ನಾವು ತಿಳಿಯಬೇಕಾದರೆ ಮೊದಲು ನಮಗೆ ಪರಸ್ಮೈಪದ ಮತ್ತು ಆತ್ಮನೇಪದ ಅಂದರೆ ಏನು ಎನ್ನುವುದು ತಿಳಿದಿರಬೇಕು. ಉದಾಹರಣೆಗೆ ಅಡಿಗೆ ಮಾಡುವುದನ್ನು ಸಂಸ್ಕೃತದಲ್ಲಿ ‘ಪಚತಿ’ ಅಥವಾ ‘ಪಚತೇ’ ಎನ್ನುತ್ತಾರೆ. ಇಲ್ಲಿ ‘ಪಚತಿ’ ಪರಸ್ಮೈಪದ. ಅಡಿಗೆಯನ್ನು ಬೇರೆಯವರಿಗಾಗಿ ಮಾಡುತ್ತಿದ್ದರೆ ಅದು ಪಚತಿ. ತನಗಾಗಿ ತಾನು ಅಡಿಗೆ ಮಾಡಿಕೊಂಡರೆ ಅದು ಪಚತೇ(ಆತ್ಮನೇಪದ).
ಇಲ್ಲಿ ಮೊದಲ ಮೂರು ಕ್ರೀಯಾಪದಗಳು(ಶೃಣೋತಿ, ಪಶ್ಯತಿ ಮತ್ತು ಜಿಘ್ರತಿ) ಪರಸ್ಮೈಪದದಲ್ಲಿವೆ. ಉಳಿದ ಎಲ್ಲಾ ಪದಗಳೂ ಆತ್ಮನೇಪದಗಳು. ಇದನ್ನು ವಿಶ್ಲೇಷಿಸಿದಾಗ ನಮಗೆ ಇದರ ಹಿಂದಿನ ಕಾರಣ ತಿಳಿಯುತ್ತದೆ. ಶೃಣೋತಿ, ಪಶ್ಯತಿ ಮತ್ತು ಜಿಘ್ರತಿ ಅಂದರೆ ಕೇಳುವುದು, ನೋಡುವುದು ಮತ್ತು ಆಘ್ರಾಣ ಮಾಡುವುದು. ಈ ಮೂರೂ ಕ್ರಿಯೆಗಳು ಹೊರಗಿನಿಂದ ಬರುವಂತವು. ಇವು ಏಕಕಾಲದಲ್ಲಿ ಎಲ್ಲರಿಗೂ ಅನ್ವಯವಾಗುವ ಕ್ರಿಯೆ. ಏಕಕಾಲದಲ್ಲಿ ಒಂದು ವಸ್ತುವನ್ನು ಅನೇಕ ಮಂದಿ ನೋಡಿ, ಕೇಳಿ, ಮೂಸಿ ಅನುಭವಿಸಬಹುದು. ಆದ್ದರಿಂದ ಈ ಮೂರು ಕ್ರಿಯೆಗಳನ್ನು ಹೇಳುವಾಗ ಪರಸ್ಮೈಪದ ಬಳಸಿದ್ದಾರೆ. ಇತರ ಕ್ರಿಯೆಗಳನ್ನು ನೋಡಿದರೆ ಅವು ಸಾರ್ವತ್ರಿಕವಲ್ಲ. ಅವು ಇಂದ್ರಿಯದಲ್ಲಿದ್ದು ಅನುಭವ ಕೊಡುವಂತಹದ್ದು. ಉದಾಹರಣೆಗೆ ‘ರಸಯತೇ’ . ಇಲ್ಲಿ ರುಚಿಯನ್ನು ಯಾರು ತಿನ್ನುತ್ತಿದ್ದಾನೋ ಅವನಷ್ಟೇ ಅನುಭವಿಸಬಲ್ಲ. ಅದು ಸಾರ್ವತ್ರಿಕವಲ್ಲ. ಅದೇ ರೀತಿ ಸ್ಪೃಶತೇ-ಸ್ಪರ್ಶ, ನಾಭಿವದತೇ-ಮಾತನಾಡುವುದು, ನಾSದತ್ತೇ-ಸ್ವೀಕರಿಸುವುದು, ನಾSನಂದಯತೇ-ಆನಂದ ಹೊಂದುವುದು[ಗಂಡು-ಹೆಣ್ಣು ಪರಸ್ಪರ, ಆದರೆ ಅದು ಸಾರ್ವತ್ರಿಕವಲ್ಲ] , ವಿಸೃಜತೇ-ವಿಸರ್ಜಿಸುವುದು ಮತ್ತು ನೇಯಾಯತೇ-ನಡೆಯುವುದು. ಇದು ಸಂಸ್ಕೃತ ಭಾಷೆಯ ಚೆಲುವು. ಈ ಸೊಗಸು ಇನ್ನ್ಯಾವುದೇ ಭಾಷೆಯಲ್ಲಿ ಕಾಣಸಿಗುವುದಿಲ್ಲ.


ಪ್ರಶ್ನೋಪನಿಷದಿ ತೃತೀಯಃ ಪ್ರಶ್ನಃ ॥

ಪ್ರಶ್ನೋಪನಿಶದ್ : ಪ್ರಶ್ನೆ 3 (1 -3)

ಅಥ ಹೈನಂ ಕೌಸಲ್ಯ ಆಶ್ವಲಾಯನಃ ಪಪ್ರಚ್ಛ । ಭಗವನ್ ಕುತ ಏಷ ಪ್ರಾಣೋ ಜಾಯತೇ । ಕಥಮಾಯಾತಿ ಅಸ್ಮಿನ್ ಶರೀರೇ । ಆತ್ಮಾನಂ ವಾ ಪ್ರವಿಭಜ್ಯ ಕಥಂ ಪ್ರತಿಷ್ಠತೇ । ಕೇನೋತ್ಕ್ರಮತೇ ಕಥಂ ಬಾಹ್ಯಮಭಿ ಧತೇ ಕಥಮಧ್ಯಾತ್ಮಮಿತಿ ॥ ೧॥

ಎರಡು ಪ್ರಶ್ನೆಗಳ ವಿವರಣೆಯನ್ನು

ಪಿಪ್ಪಲಾದರಿಂದ ಕೇಳಿ ತಿಳಿದ ಮೇಲೆ, ಮೂರನೇ ಋಷಿ ಕೌಸಲ್ಯ ಆಶ್ವಲಾಯನರು ತನ್ನ ಪ್ರಶ್ನೆಯನ್ನು ಗುರುಗಳ ಮುಂದಿಡುತ್ತಾರೆ. ಅವರು ಕೇಳುತ್ತಾರೆ: “ ಯಾವ ಕಾರಣಕ್ಕೋಸ್ಕರ ಪ್ರಾಣತತ್ತ್ವದ ಆವಿರ್ಭಾವವಾಯಿತು ಮತ್ತು ಅದು ಯಾರಿಂದಾಯಿತು” ಎಂದು. ಹಿಂದೆ ಎಲ್ಲವೂ ಪ್ರಜಾಪತಿ ನಾಮಕ ಭಗವಂತನಿಂದ ಸೃಷ್ಟಿಯಾಯಿತು ಎನ್ನುವ ವಿವರಣೆಯನ್ನು ಪಿಪ್ಪಲಾದರು ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಆಶ್ವಲಾಯನರು ವಿಶೇಷವಾಗಿ ಪ್ರಾಣತತ್ವದ ಬಗೆ ಮತ್ತು ಅದರ ಆವಿರ್ಭಾವದ ಹಿನ್ನೆಲೆಯನ್ನು ಪಿಪ್ಪಲಾದರಲ್ಲಿ ಪ್ರಶ್ನಿಸುತ್ತಿದ್ದಾರೆ. “ಪ್ರಾಣದೇವರು ಹೇಗೆ ನಮ್ಮ ದೇಹವನ್ನು ಪ್ರವೇಶ ಮಾಡುತ್ತಾರೆ ಮತ್ತು ದೇಹದಲ್ಲಿ ಅನೇಕ ರೂಪಗಳಿಂದ ಏನನ್ನು ನಿಯಂತ್ರಣ ಮಾಡುತ್ತಾರೆ ಎನ್ನುವುದನ್ನು ಆಶ್ವಲಾಯನರು ಪಿಪ್ಪಲಾದರಿಂದ ತಿಳಿಯಬಯಸುತ್ತಾರೆ. ನಮಗೆ ತಿಳಿದಂತೆ ಪ್ರಾಣದೇವರು ನಮ್ಮೊಳಗೆ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎನ್ನುವ ಐದು ರೂಪಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ದೇಹ ಪ್ರವೇಶಿಸಿ ತನ್ನನ್ನೇ ತಾನು ಐದು ವಿಭಾಗ ಮಾಡಿಕೊಂಡು ಅವರು ನಿರ್ವಹಿಸುವ ಚಟುವಟಿಕೆಗಳೇನು ಎನ್ನುವುದು ಇಲ್ಲಿರುವ ಪ್ರಶ್ನೆ.
ಪ್ರಾಣದೇವರು ಕೇವಲ ಪಿಂಡಾಂಡದಲ್ಲಷ್ಟೇ ಅಲ್ಲ, ಬ್ರಹ್ಮಾಂಡದಲ್ಲೂ ತುಂಬಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ದೇಹ ಪ್ರವೇಶಿಸಿ ಜೀವ ತುಂಬುವ ಅವರು, ದೇಹವನ್ನು ಬಿಟ್ಟು ಯಾರ ಜೊತೆಗೆ ಹೊರಟು ಹೋಗುತ್ತಾರೆ ಮತ್ತು ಏಕೆ ಹೊರಟು ಹೋಗುತ್ತಾರೆ? ಹೊರಗೆ ಪಂಚಭೂತಗಳಲ್ಲಿ ತುಂಬಿರುವ ಪ್ರಾಣದೇವರ ಚಟುವಟಿಕೆಗಳೇನು-ಎನ್ನುವ ಬಹಳ ಮಹತ್ವವಾದ ಪ್ರಶ್ನೆಯನ್ನು ಆಶ್ವಲಾಯನರು ಪಿಪ್ಪಲಾದರ ಮುಂದಿಡುತ್ತಾರೆ.
ಪ್ರಶ್ನೆಯಿಂದಲೇ ತಿಳಿಯುವಂತೆ ಈ ಅಧ್ಯಾಯ ಪೂರ್ಣವಾಗಿ ಪ್ರಾಣದೇವರ ಮಹಿಮೆಯನ್ನು ಹೇಳುವ ಅಧ್ಯಾಯ. ಬನ್ನಿ, ಆಶ್ವಲಾಯನರ ಪ್ರಶ್ನೆಗೆ ಪಿಪ್ಪಲಾದರ ಉತ್ತರವನ್ನು ಭಗವಂತನ ಕೃಪೆ ಬೇಡಿ ಆಲಿಸೋಣ.

ತಸ್ಮೈ ಸ ಹೋವಾಚ । ಅತಿಪ್ರಶ್ನಾನ್ ಪೃಚ್ಛಸಿ ಬ್ರಹ್ಮಿಷ್ಠೋಽಸೀತಿ ತಸ್ಮಾತ್ ತೇಽಹಂ ಬ್ರವೀಮಿ ॥ ೨॥

ಪಿಪ್ಪಲಾದರಿಗೆ ಆಶ್ವಲಾಯನರ ಪ್ರಶ್ನೆಯನ್ನು ಕೇಳಿ ಬಹಳ ಸಂತೋಷವಾಯಿತು. ಏಕೆಂದರೆ ಇದು ಪಂಚಭೂತಗಳಲ್ಲಿ ಮತ್ತು ದೇಹದಲ್ಲಿ ವಾಯುದೇವರ ಚಟುವಟಿಕೆ ಏನು ಎಂದು ತಿಳಿಯಬಯಸಿ ಕೇಳಿದ ಪ್ರಶ್ನೆ. ಸಾಮಾನ್ಯರಿಗೆ ಇಂತಹ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಇಂತಹ ಪ್ರಶ್ನೆಯನ್ನು ಕೇವಲ ವೇದಾಧ್ಯಯನ ಮಾಡಿದ ಜ್ಞಾನಿಯಷ್ಟೇ ಕೇಳಬಲ್ಲರು. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ದೇಹಶಾಸ್ತ್ರ, ಮನಃಶಾಸ್ತ್ರ ಮತ್ತು ಭೌತಶಾಸ್ತ್ರ ಪೂರ್ಣ ತಿಳಿದಿರಬೇಕು. ಪಿಪ್ಪಲಾದರು ಹೇಳುತ್ತಾರೆ: “ನೀನು ವೇದಾಧ್ಯನ ಮಾಡಿ ಅನೇಕ ಸತ್ಯವನ್ನು ತಿಳಿದಿರುವುದರಿಂದ, ಒಬ್ಬ ಸಾಮಾನ್ಯನಿಗೆ ಹೊಳೆಯದ ಅಪೂರ್ವವಾದ ಈ ಪ್ರಶ್ನೆಯನ್ನು ಕೇಳಿದ್ದೀಯ. ನನಗೆ ಬಹಳ ಸಂತೋಷವಾಯಿತು” ಎಂದು. ಪ್ರಪಂಚದ ಎಲ್ಲಾ ಜಿಜ್ಞಾಸುಗಳು ತಿಳಿಯಬೇಕಾದ, ಇಡೀ ಮಾನವ ಜನಾಂಗಕ್ಕೆ ಉಪಕಾರವಾಗುವ, ಅತ್ಯಮೂಲ್ಯವಾದ ವಿಷಯದ ಮೇಲೆ ಕೇಳಿರುವ ಈ ಪ್ರಶ್ನೆ ‘ಅತಿಪ್ರಶ್ನೆ’ ಎಂದು ಪಿಪ್ಪಲಾದರು ಶಿಷ್ಯನ ಪ್ರಶ್ನೆಯನ್ನು ಪ್ರಶಂಸಿಸುತ್ತಾರೆ.

ಆತ್ಮತ ಏಷ ಪ್ರಾಣೋ ಜಾಯತೇ । ಯಥೈಷಾ ಪುರುಷೇ ಛಾಯ ಏತಸ್ಮಿನ್ನೇತದಾತತಮ್ । ಮನೋಕೃತೇನಾಯಾತ್ಯಸ್ಮಿನ್ ಶರೀರೇ ॥ ೩॥

ಪಿಪ್ಪಲಾದರು ಹೇಳುತ್ತಾರೆ: “ಮುಖ್ಯಪ್ರಾಣ ಆತ್ಮನಿಂದ ಹುಟ್ಟಿದ” ಎಂದು. ಇಲ್ಲಿ ‘ಆತ್ಮ’ ಎಂದರೆ ಪರಮಾತ್ಮ. ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದೇ ಆತ್ಮತತ್ತ್ವ. ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮಾ ವಾ ಅರೇ ದೃಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತ್ವ್ಯಃ ॥ ಬೃಹದಾರಣ್ಯಕ-೪-೫-೬॥ ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಂಚಥಾ ॥ಮುಂಡಕ ಉಪನಿಷತ್-೨-೨-೫॥ ಮನುಷ್ಯ ತಿಳಿಯಬೇಕಾದ ಸತ್ಯಗಳಲ್ಲಿ ಮೂಲಭೂತವಾದ ಸತ್ಯ ಎಂದರೆ ಆತ್ಮನನ್ನು ತಿಳಿಯುವುದು. ಆತ್ಮಾ ಎನ್ನುವುದಕ್ಕೆ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ಅಂತರ್ಯಾಮಿ, ಸ್ವಾಮಿ ಎನ್ನುವ ಅರ್ಥವಿದೆ. ಎಲ್ಲರೊಳಗೂ ತುಂಬಿ ಎಲ್ಲವನ್ನೂ ನಿಯಂತ್ರಿಸುವ ಪರಶಕ್ತಿ ಆತ್ಮ. ಭಾಗವತದಲ್ಲಿ ಹೇಳುವಂತೆ: ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥ಭಾಗವತ-೧-೨-೧೧॥ ದೇವರನ್ನು ಬ್ರಹ್ಮ, ಆತ್ಮಾ, ಪರಮಾತ್ಮ, ಭಗವಂತ, ಇತ್ಯಾದಿಯಾಗಿ ಕರೆಯುತ್ತಾರೆ. ಹೀಗಾಗಿ ಪಿಪ್ಪಲಾದರು ಇಲ್ಲಿ ಭಗವದ್ ವಾಚಕವಾದ ‘ಆತ್ಮ’ ಶಬ್ದವನ್ನು ಬಳಸಿದ್ದಾರೆ. ಎಲ್ಲರ ಅಂತರ್ಯಾಮಿ, ಎಲ್ಲರ ನಿಯಾಮಕ ಭಗವಂತ ಆತ್ಮಃ.
ನಮಗೆ ತಿಳಿದಂತೆ ಎಲ್ಲವೂ ಆ ಭಗವಂತನಿಂದ ಹುಟ್ಟಿದೆ. ಹೀಗಿರುವಾಗ ಇಲ್ಲಿ ‘ಪ್ರಾಣ ಭಗವಂತನಿಂದ ಹುಟ್ಟಿದ’ ಎನ್ನುವಲ್ಲಿನ ವಿಶೇಷತೆ ಏನು-ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿ ಒಂದು ವಿಶೇಷವಿದೆ. ಇತರ ದೇವತೆಗಳಿಗೆ ಒಂದು ಕಲ್ಪದಲ್ಲಿ ಅನೇಕ ಹುಟ್ಟಿದೆ. ಆದರೆ ಬ್ರಹ್ಮ-ವಾಯು ಎಲ್ಲಾ ದೇವತೆಗಳಿಗಿಂತ ಮೊದಲು ಭಗವತನಿಂದ ಸೃಷ್ಟಿಯಾಗುವ ತತ್ತ್ವ. ಇವರಿಗೆ ಪುನಃ ಯಾರಿಂದಲೂ ಮರು ಸೃಷ್ಟಿ ಇಲ್ಲ. ಭಗವಂತನಿಂದ ಸಾಕ್ಷಾತ್ ಹುಟ್ಟುವುದರಿಂದ ಮತ್ತು ಕಲ್ಪಾಂತದ ತನಕ ಮರು ಹುಟ್ಟು ಇಲ್ಲವಾದ್ದರಿಂದ ಪ್ರಾಣದೇವರನ್ನು ಭಗವಂತನ ಸಾಕ್ಷಾತ್ ಪುತ್ರ ಎನ್ನುತ್ತಾರೆ. ಹೇಗೆ ನಮ್ಮ ನೆರಳು ನಮ್ಮನ್ನು ಸದಾ ಬಿಡದೆ ಅನುಸರಿಸುತ್ತದೋ ಹಾಗೆ ಇಡೀ ವಿಶ್ವ ಭಗವಂತನನ್ನು ಆಶ್ರಯಿಸಿದೆ. ಇದೇ ರೀತಿ ಲಕ್ಷ್ಮೀ-ನಾರಾಯಣ ಮತ್ತು ಬ್ರಹ್ಮದೇವರನ್ನು ಬಿಟ್ಟರೆ, ಇತರ ಸಮಸ್ತ ವಿಶ್ವವೂ ನೆರಳಿನಂತೆ ಪ್ರಾಣದೇವರನ್ನು ಆಶ್ರಯಿಸಿಕೊಂಡಿದೆ. ಹೀಗೆ ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣದೇವರು ಭಗವಂತನ ಆದೇಶದಂತೆ ಪ್ರತಿಯೊಂದು ಜೀವದ ಜೀವಕಲಾಭಿಮಾನಿಯಾಗಿ ಸಮಸ್ತ ಜೀವರ ಒಳಗೆ ಪ್ರವೇಶಿಸಿ ನೆಲೆಸಿದ್ದಾರೆ ಮತ್ತು ನಮ್ಮ ಒಳಗೂ ಹೊರಗೂ ನಿಂತು ನಮ್ಮನ್ನು ರಕ್ಷಿಸಿ ನಡೆಸುತ್ತಿದ್ದಾರೆ.
 


ರಶ್ನೋಪನಿಶದ್ : ಪ್ರಶ್ನೆ 3 (4 )

ದೇಹವನ್ನು ಪ್ರವೇಶಿಸುವ ಪ್ರಾಣದೇವರು ತಮ್ಮನ್ನು ತಾವು ಎಷ್ಟು ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ವಿಭಾಗದ ಉದ್ದೇಶವೇನು, ಯಾವಯಾವ ವಿಭಾಗದಲ್ಲಿ ಏನೇನು ಕ್ರಿಯೆ ನಡೆಯುತ್ತದೆ ಎನ್ನುವುದನ್ನು ಪಿಪ್ಪಲಾದರು ‘ಒಂದು ದೇಶದ ಆಡಳಿತದ’ ಉದಾಹರಣೆಯೊಂದಿಗೆ
ವಿವರಿಸುತ್ತಾರೆ.

ಯಥಾ ಸಮ್ರಾಡೇವಾಧಿಕೃತಾನ್ ವಿನಿಯುಙಕ್ತೇ ಏತಾನ್ ಗ್ರಾಮಾನಧಿತಿಷ್ಠಸ್ವೇತಾನ್ ಗ್ರಾಮಾನಧಿತಿಷ್ಠಸ್ವೇತಿ ಏವಮೇವೈಷ ಪ್ರಾಣ ಇತರಾನ್ ಪ್ರಾಣಾನ್ ಪೃಥಕ್ ಪೃಥಗೇವ ಸನ್ನಿಧತ್ತೇ ॥ ೪॥

ಇಲ್ಲಿ ಪಿಪ್ಪಲಾದರು “ಒಬ್ಬ ಚಕ್ರವರ್ತಿ ತನ್ನ ದೇಶದಲ್ಲಿ ವಿವಿಧ ಆಡಳಿತಾಧಿಕಾರಿಗಳನ್ನು ನೇಮಿಸಿ ಹೇಗೆ ಸಮಸ್ತವಾಗಿ ಆಡಳಿತ ನಿರ್ವಹಣೆ ಮಾಡುತ್ತಾನೋ, ಹಾಗೆ ಪ್ರಾಣದೇವರು ದೇಹದಲ್ಲಿ ಕಾರ್ಯನಿರ್ವಹಿಸುತ್ತಾರೆ” ಎಂದಿದ್ದಾರೆ. ಈ ಮಾತು ನಮಗೆ ಅರ್ಥವಾಗಬೇಕಾದರೆ ನಾವು ನಮ್ಮ ಹಿಂದಿನ ದೇಶಾಡಳಿತ ಕ್ರಮವನ್ನು ತಿಳಿದಿರಬೇಕು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಂದು ದೇಶದ ಆಡಳಿತವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದನ್ನು ಬಹಳ ಸುಂದರವಾಗಿ ವಿವರಿಸಲಾಗಿದೆ. ಹಿಂದೆ ಒಂದು ಗ್ರಾಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಈ ನಾಲ್ಕು ವಿಭಾಗದಲ್ಲಿ ಒಂದು ಅಂಶ ಜನವಸತಿಗೆ, ಒಂದು ಅಂಶ ಬೇಸಾಯಕ್ಕೆ, ಒಂದು ಅಂಶ ಹುಲ್ಲುಗಾವಲು ಮತ್ತು ಉಳಿದ ಒಂದು ಅಂಶ ಕಾಡು-ಹೀಗೆ ಅಭಿವೃದ್ಧಿಪಡಿಸುತ್ತಿದ್ದರು. ಇಲ್ಲಿ ಪ್ರತಿಯೊಂದು ಗ್ರಾಮವೂ ತಮಗೆ ಬೇಕಾದ ಆಹಾರ ಬೆಳೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗುತ್ತಿತ್ತು. ಇಂತಹ ಹತ್ತು ಗ್ರಾಮಗಳ(ತಾಲೋಕು) ಆಡಳಿತವನ್ನು ನಿರ್ವಹಿಸಲು ದೇಶದ ಚಕ್ರವರ್ತಿ ಒಬ್ಬ ಸಮರ್ಥ ವ್ಯಕ್ತಿಯನ್ನು ನಿಯಮಿಸುತ್ತಿದ್ದ. ಈ ಆಡಳಿತಾಧಿಕಾರಿಯನ್ನು ‘ದಶಪ’ ಎಂದು ಕರೆಯುತ್ತಿದ್ದರು. ಆತನಿಗೆ ಈ ಹತ್ತು ಗ್ರಾಮದ ಒಟ್ಟು ಕಂದಾಯದ ಹತ್ತನೇ ಒಂದು ಭಾಗವನ್ನು ಸಂಬಳವಾಗಿ ಕೊಡುತ್ತಿದ್ದರು. ದಶಪನ ನಂತರ ‘ವಿಂಶತಪ’. ಈತ ಇಬ್ಬರು ದಶಪರ ಮೇಲಾಧಿಕಾರಿ(ಜಿಲ್ಲಾಧಿಕಾರಿ). ಈತನ ನಂತರ ‘ಶತಪ’. ಈತನ ಆಡಳಿತ ವ್ಯಾಪ್ತಿ ನೂರು ಗ್ರಾಮಗಳು. ಇದನ್ನು ಒಂದು ರಾಜ್ಯ ಎನ್ನಬಹುದು(ರಾಜ್ಯಪಾಲ). ಚಕ್ರವರ್ತಿಯಾದವನು ಈ ಎಲ್ಲಾ ಅಧಿಕಾರಿಗಳ ನೆರವು ಪಡೆದು ದೇಶದ ಪೂರ್ಣಾಡಳಿತವನ್ನು ನಡೆಸುತ್ತಿದ್ದ. ಇದೇ ರೀತಿ ಇಲ್ಲಿ ನಾವು ನಮ್ಮ ದೇಹವನ್ನು ಒಂದು ದೇಶ ಎಂದುಕೊಂಡರೆ ದೇಹದ ಬೇರೆಬೇರೆ ಭಾಗಗಳೇ ತಾಲೋಕು, ಜಿಲ್ಲೆ ಮತ್ತು ರಾಜ್ಯಗಳು. ಅದಕ್ಕೆ ಬೇರೆ ಬೇರೆ ಅಧಿಕಾರಿಗಳು. ಆ ಎಲ್ಲಾ ಅಧಿಕಾರಿಗಳ ಮೂಲಕ ದೇಹದ ನಿಯಂತ್ರಣ ಮಾಡುವ ಚಕ್ರವರ್ತಿ ಪ್ರಾಣದೇವರು. ಪ್ರಾಣದೇವರ ರಾಜ್ಯಪಾಲರು- ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ. ಇವರನ್ನು 'ಅವಾಂತರ ಪ್ರಾಣರು' ಎನ್ನುತ್ತಾರೆ. ಭಗವಂತನ ಸಾಕ್ಷಾತ್ ಪುತ್ರನಾದ ‘ಪ್ರಾಣ’ ಅವಾಂತರ ಪ್ರಾಣರನ್ನು ದೇಹದ ಬೇರೆಬೇರೆ ವಿಭಾಗದ ಆಡಳಿತ ನಡೆಸಲು ಕಳುಹಿಸುತ್ತಾನೆ. ಇಲ್ಲಿ ಒಂದು ವಿಶೇಷವೇನೆಂದರೆ ಒಬ್ಬ ಚಕ್ರವರ್ತಿಯಂತೆ ಪ್ರಾಣ ಮತ್ತು ಭಗವಂತ ಒಂದು ಕಡೆ ನೆಲಸಿ ಆಡಳಿತ ನಿರ್ವಹಿಸುವುದಿಲ್ಲ. ಬದಲಾಗಿ ಅವರು ಅವಾಂತರ ಅಧಿಕಾರಿಗಳ ಅಂತರ್ಯಾಮಿಯಾಗಿ ಸೇರಿ ಶಕ್ತಿಪಾತ ಮಾಡಿ ಕಾರ್ಯನಿರ್ವಹಣೆ ಮಾಡಿಸುತ್ತಾರೆ.
 
ರಶ್ನೋಪನಿಶದ್ : ಪ್ರಶ್ನೆ 3 ( 5 )

ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರತಿಷ್ಠತೇ । ಮಧ್ಯೇ ತು ಸಮಾನಃ। ಏಷ ಹ್ಯೇತದ್ಧ್ರುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವಂತಿ ಹೃದಿ ಹ್ಯೇಷ ಆತ್ಮಾ ॥ ೫॥

ಇಲ್ಲಿ ಪಿಪ್ಪಲಾದರು ಪ್ರತಿಯೊಬ್ಬ ಅವಾಂತರ
ಪ್ರಾಣರ ಆಡಳಿತ ವ್ಯಾಪ್ತಿಯನ್ನು ವಿವರಿಸಿದ್ದಾರೆ. ನಮ್ಮ ದೇಹದ ಒಳಗೆ ಪ್ರತಿಯೊಂದು ಕ್ರಿಯೆಯನ್ನು ನಿರಂತರವಾಗಿ ಒಂದು ವ್ಯವಸ್ಥಿತ ರೀತಿಯಲ್ಲಿ ಪ್ರಾಣದೇವರು ತನ್ನ ಐದು ರೂಪಗಳಿಂದ ನಡೆಸುತ್ತಿದ್ದಾರೆ. ಮೊದಲನೆಯದಾಗಿ ದೇಹದ ಕೆಳಭಾಗ. ಈ ಭಾಗದ ಅಧಿಕಾರ ವ್ಯಾಪ್ತಿ ಅಪಾನನಿಗೆ ಸೇರಿದೆ. ಈತ ನಮ್ಮ ಪಾಯು(ಮಲ ವಿಸರ್ಜನೆ) ಮತ್ತು ಉಪಸ್ಥ(ಮೂತ್ರ ಮತ್ತು ಸಂತಾನ ಕ್ರಿಯೆ)ದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾನೆ. ಎರಡನೆಯದಾಗಿ ದೇಹದ ಮೇಲ್ಭಾಗ. ನಮ್ಮ ಕಣ್ಣು, ಕಿವಿ, ಬಾಯಿ, ಉಸಿರು. ಈ ಕ್ರಿಯೆಯನ್ನು ಸ್ವಯಂ ಪ್ರಾಣ ದೇವರು ನಿರ್ವಹಿಸುತ್ತಾರೆ. ಅವರು ನಮಗೆ ಕಣ್ಣಿನಿಂದ ನೋಡಿಸುತ್ತಾರೆ, ಕಿವಿಯಿಂದ ಕೇಳಿಸುತ್ತಾರೆ, ಬಾಯಿಯಿಂದ ಮಾತನಾಡಿಸುತ್ತಾರೆ, ಮೂಗಿನಿಂದ ಉಸಿರಾಡಿಸಿ ಬದುಕಿಸುತ್ತಾರೆ. ಮೂರನೆಯದು ದೇಹದ ಮಧ್ಯಭಾಗ. ನಾವು ಸೇವಿಸುವ ಆಹಾರವನ್ನು ಜೀರ್ಣಗೊಳಿಸಿ, ಅದರಿಂದ ಬೇಡವಾದ ಸ್ಥೂಲಭಾಗವನ್ನು ವಿಭಾಗಿಸಿ, ದೇಹಕ್ಕೆ ಬೇಕಾದ ಆಹಾರದ ಅಂಶವನ್ನು ದೇಹದ ವಿವಿಧ ಭಾಗಕ್ಕೆ ತಲುಪಿಸಿ, ಶಕ್ತಿಯನ್ನು ನೀಡುವ ಕ್ರಿಯೆಯನ್ನು- ದೇಹದ ಮಧ್ಯಭಾಗದಲ್ಲಿ ಕುಳಿತ ‘ಸಮಾನ’ ನಾಮಕ ಪ್ರಾಣ ನಿರ್ವಹಿಸುತ್ತಾನೆ. [ಇದಕ್ಕಾಗಿ ಊಟ ಮಾಡುವ ಮೊದಲು ಪ್ರಾಣನಿಗೆ ಮತ್ತು ಪ್ರಾಣನ ಅಂತರ್ಯಾಮಿ ಭಗವಂತನಿಗೆ ಆಹುತಿ ಕೊಟ್ಟು ಊಟ ಮಾಡುವುದು ಪದ್ಧತಿ]. ಇಲ್ಲಿ ದೇಹದ ಮಧ್ಯಭಾಗ ಎಂದರೆ ನಾಭಿಯಿಂದ ಹೃದಯದ ತನಕದ ಭಾಗ. ಶಾಸ್ತ್ರದಲ್ಲಿ ಹೊಟ್ಟೆಯನ್ನೂ ಕೂಡಾ ಮಧ್ಯಭಾಗ ಎನ್ನುತ್ತಾರೆ. ದೇಹದ ಮಧ್ಯಭಾಗದ ಕೇಂದ್ರಬಿಂದು ಹೃದಯ. ಇದು ದೇಹದಲ್ಲಿ ಭಗವಂತನ ಪ್ರತಿಬಿಂಬವಾಗಿರುವ ಜೀವನಿರುವ ಸ್ಥಾನ. ಬಿಂಬವಿರುವಲ್ಲೇ ಪ್ರತಿಬಿಂಬವಿರುವುದು ಸಾಧ್ಯ. ಆದ್ದರಿಂದ ಇದು ದೇಹದಲ್ಲಿ ಬಿಂಬರೂಪಿ ಭಗವಂತನಿರುವ ಸ್ಥಾನ ಕೂಡಾ ಹೌದು. ನಮಗೆ ತಿಳಿದಂತೆ ಪ್ರಾಣದೇವರು ಭಗವಂತನ ನಿತ್ಯಸಂಗಾತಿ. ಅವರು ಎಂದೂ ಭಗವಂತನನ್ನು ಬಿಟ್ಟಿರಲಾರರು. ಹಾಗಾಗಿ ಹೃತ್ಕಮಲದಲ್ಲಿ ಜೀವ-ಪ್ರಾಣ ಮತ್ತು ಬಿಂಬರೂಪಿ ಭಗವಂತ ಜೊತೆಯಾಗಿ ನೆಲೆಸಿರುತ್ತಾರೆ.
ಜೀವ ಅನ್ನುವುದು ಅತಿಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ ಜೀವ ಅತಿಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಲ್ಲೇ ಭಗವಂತ ಮತ್ತು ಪ್ರಾಣ ಜೀವನನ್ನು ಧರಿಸಿ ನೆಲೆಸಿರುತ್ತಾರೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ: “ಪದ್ಮಕೋಶ-ಪ್ರ’ತೀಕಾಶಗ್ಂ ಹೃದಯಂ’ ಚಾಪ್ಯಧೋಮು’ಖಮ್” ಕೆಳಮುಖವಾಗಿರುವ ಕೆಂದಾವರೆಯ ಮೊಗ್ಗಿನಂತಿರುವ ಶಕ್ತಿ ಕೇಂದ್ರದಲ್ಲಿರುವ ಅತ್ಯಂತ ಸೂಕ್ಷ್ಮ ನೆಲೆಮನೆಯಲ್ಲಿ ಜೀವನನ್ನು ಪ್ರಾಣಾಂತರ್ಗತ ಭಗವಂತ ಧರಿಸಿ ನಿಂತಿದ್ದಾನೆ. ದೇಹದ ಸಮಸ್ತ ಚಟುವಟಿಕೆಗಳೂ ನಡೆಯುವುದು ಈ ಶಕ್ತಿ ಕೇಂದ್ರದಿಂದ.
ದೇಹದ ಮಧ್ಯಭಾಗದಲ್ಲಿ ನೆಲೆಸಿರುವ ‘ಸಮಾನ’ ನಾಮಕ ಅವಾಂತರ ಪ್ರಾಣನ ಅಂತರ್ಯಾಮಿಯಾಗಿ ಪ್ರಾಣದೇವರು ನಾವು ಆಹುತಿ ರೂಪದಲ್ಲಿ ಸೇವಿಸುವ ಆಹಾರವನ್ನು ಸಮನಾಗಿ(ಸಮಮ್-ನಯತಿ) ದೇಹದ ಆಯಾ ಭಾಗಗಳಿಗೆ ತಲುಪಿಸುತ್ತಾರೆ. ದೇಹದಲ್ಲಿ ಆಹಾರ ವಿತರಣೆ ಮಾಡುವ ‘ಸಮಾನ’ ನಾಮಕ ಪ್ರಾಣನಿಂದಾಗಿ ನಮಗೆ ಏಳು ಬಗೆಯ ಅರಿವು(ಜ್ಞಾನ) ಮೂಡುತ್ತದೆ. ಕಣ್ಣಿನಿಂದ ರೂಪದ ಅರಿವು, ಕಿವಿಯಿಂದ ಶಬ್ದದ ಅರಿವು, ಮೂಗಿನಿಂದ ಗಂಧದ ಅರಿವು, ನಾಲಿಗೆಯಿಂದ ರಸದ ಅರಿವು, ಚರ್ಮದಿಂದ ಸ್ಪರ್ಶದ ಅರಿವು, ಮನಸ್ಸಿನಲ್ಲಿ ಬಯಕೆ, ಬುದ್ಧಿಯಿಂದ ಬೇಕು ಬೇಡಗಳ ತೀರ್ಮಾನ-ಇವೇ ಆ ಏಳು ಬಗೆಯ ಬೆಳಕುಗಳು. ಹೀಗೆ ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಆಧಾನ ಮಾಡಿ, ಜ್ಞಾನಪೂರ್ಣವಾದ ಸಮಸ್ತ ಚಟುವಟಿಕೆಗಳನ್ನು ಹೃದಯದಲ್ಲಿ ನೆಲಸಿರುವ ‘ಸಮಾನ’ ನಿರ್ವಹಿಸುತ್ತಾನೆ.
 
ಪ್ರಶ್ನೋಪನಿಶದ್ : ಪ್ರಶ್ನೆ 3 ( 6-7)

ಅತ್ರೈತದೇಕಶತಂ ನಾಡೀನಾಂ ತಾಸಾಂ ಶತಂಶತಮೇಕೈಕಸ್ಯಾಂ ದ್ವಾಸಪ್ತತಿಂದ್ವಾಸಪ್ತತಿಮ್ ಪ್ರತಿಶಾಖಾನಾಡೀಸಹಸ್ರಾಣಿ ಭವಂತ್ಯಾಸು ವ್ಯಾನಶ್ಚರತಿ ॥ ೬॥

ಪ್ರಾಣ, ಅಪಾನ ಮತ್ತು ಸಮಾನರ ಕಾರ್ಯವ್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು ಇಲ್ಲಿ ‘ವ್ಯಾನ’ ನ ಕಾರ್ಯವ್ಯಾ
ಪ್ತಿಯನ್ನು ವಿವರಿಸುತ್ತಾರೆ. ಇದೊಂದು ಅಪೂರ್ವವಾದ ವಿಷಯ. ಈ ವಿಷಯ ಅಧ್ಯಾತ್ಮ ಶಾಸ್ತ್ರದಲ್ಲಿ ಇನ್ನೆಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಹೃದಯದ ಕೇಂದ್ರ ಭಾಗದಿಂದ ೧೦೧ ನಾಡಿಗಳು ಕವಲೊಡೆದಿವೆ. [ಐವತ್ತು ಎಡ ಭಾಗದಲ್ಲಿ, ಐವತ್ತು ಬಲಭಾಗದಲ್ಲಿ ಮತ್ತು ನಡುವೆ ಸುಷುಮ್ನಾ ನಾಡಿ]. ಇಲ್ಲಿರುವ ಪ್ರತಿಯೊಂದು ನಾಡಿಗಳಿಗೂ ೧೦೦ ಉಪನಾಡಿಗಳಿವೆ. ಹಾಗಾಗಿ ಒಟ್ಟು ೧೦,೧೦೦ ಉಪನಾಡಿಗಳು. ಪ್ರತಿಯೊಂದು ಉಪನಾಡಿಗಳಿಗೂ ಕೂಡಾ ೭೨,೦೦೦ ಪ್ರತಿನಾಡಿಗಳಿವೆ. ಆದ್ದರಿಂದ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ: ೭೨ ಕೋಟಿ ೭೨ ಲಕ್ಷ! ಇದು ಇಂದಿನ ವೈದ್ಯಶಾಸ್ತ್ರಕ್ಕೆ ತಿಳಿಯದ ವಿಚಾರ. ಏಕೆಂದರೆ ಇದರಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಸಂಪರ್ಕಗಳು ಸೇರಿವೆ. ಈ ಎಲ್ಲಾ ನಾಡಿಗಳಲ್ಲಿ, ಕಾಲಿನ ಬೆರಳಿನಿಂದ ಹಿಡಿದು, ತಲೆಕೂದಲಿನ ತನಕ ‘ವ್ಯಾನ’ ಬೇರೆ ಬೇರೆ ಶಕ್ತಿಯನ್ನು ಹರಿಸುತ್ತಾನೆ. ನಮ್ಮ ದೇಹದಲ್ಲಿ ವ್ಯಾನ ಶಕ್ತಿ ದೇಹದ ಎಲ್ಲಾ ಭಾಗದಲ್ಲಿ ಹರಿಯುತ್ತಿದ್ದರೆ ಆಗ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಲ್ಲಿ ವ್ಯಾನ ಶಕ್ತಿ ಕಡಿಮೆಯಾಯಿತೋ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ದೇಹದಲ್ಲಿನ ಪ್ರತಿನಾಡಿಯಲ್ಲೂ ವಿಶೇಷ ಶಕ್ತಿಯನ್ನು ತುಂಬುವ ವಿಶಿಷ್ಟವಾದ ಕಾರ್ಯವನ್ನು ವ್ಯಾನ ನಾಮಕ ವಾಯುವಿನ ಅಂತರ್ಯಾಮಿಯಾಗಿ ಕುಳಿತು ಪ್ರಾಣದೇವರು ಮಾಡಿಸುತ್ತಿರುತ್ತಾರೆ.

ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್ ॥ ೭॥

ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ ವಿಶುದ್ಧಿಚಕ್ರದ ಮೂಲಕ ನಮಗೆ ಕನಸಿನ ಅನುಭವವನ್ನು ಕೊಡುವವನು ಉದಾನ. ಜೀವನನ್ನು ದೇಹದ ಯಾವುದಾದರೊಂದು ನಾಡಿಯ ಮೂಲಕ ಹೊರ ಕರೆದುಕೊಂಡು ಹೋಗಿ, ಜೀವ ಸೇರಬೇಕಾದ ಲೋಕಕ್ಕೆ ಸೇರಿಸುವವನೂ ಅವನೇ. ಜೀವ ದೇಹದಿಂದ ಯಾವುದೇ ಭಾಗದಿಂದ ಕೂಡಾ ಹೊರ ಹೋಗಬಹುದು. ಕೇವಲ ನವದ್ವಾರದಲ್ಲಷ್ಟೇ ಅಲ್ಲ ರೋಮಕೂಪದಲ್ಲಿ ಕೂಡಾ ಜೀವ ಹೊರ ಹೋಗಬಹುದು. ಸಾಮಾನ್ಯವಾಗಿ ಪುಣ್ಯ ಮಾಡಿದ ಜೀವ ದೇಹದ ಊರ್ಧ್ವಭಾಗದಿಂದ ಹೊರ ಹೋಗುತ್ತದೆ. ಇಂತಹ ಜೀವರನ್ನು ಉದಾನ ಸುಖವನ್ನು ಅನುಭವಿಸುವ ಸ್ವರ್ಗದಂತಹ ಪುಣ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾಪ ಮಾಡಿದ ಜೀವ ದೇಹದ ಸೊಂಟದ ಕೆಳಗಿನ ಭಾಗದಿಂದ ಹೊರ ಹೋಗುತ್ತದೆ. ಅಂತಹ ಜೀವರನ್ನು ಪ್ರಾಣದೇವರು ದುಃಖವನ್ನು ಅನುಭವಿಸುವ ನರಕಾದಿ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪುಣ್ಯ-ಪಾಪಗಳೆರಡೂ ಸಮನಾಗಿದ್ದಾಗ ಅಂತಹ ಜೀವ ನೇರವಾಗಿ ಮನುಷ್ಯ ಲೋಕದಲ್ಲಿ ಹುಟ್ಟುತ್ತದೆ. ಕೆಲವೊಮ್ಮೆ ಪ್ರಸವಕಾಲದಲ್ಲಿ ಜೀವ ದೇಹವನ್ನು ಬಿಟ್ಟು ಹೋಗುವುದುಂಟು. ಅಂತಹ ಸಮಯದಲ್ಲಿ ನೇರ ಮನುಷ್ಯಲೋಕದಲ್ಲಿ ಹುಟ್ಟಬೇಕಾದ ಜೀವ ಆ ದೇಹವನ್ನು ಪ್ರವೇಶಿಸಿ ಹುಟ್ಟಬಹುದು. ಇದು ಅತ್ಯಂತ ವಿರಳ. ಆದರೆ ಈ ರೀತಿ ಜೀವ ಇನ್ನೊಂದು ಶರೀರವನ್ನು ತಕ್ಷಣ ಪ್ರವೇಶಿಸಿದರೆ ಆಗ ಆ ಜೀವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗರ್ಭದಲ್ಲಿರುವ ಒಂಬತ್ತು ತಿಂಗಳಿನಿಂದ ಹಿಡಿದು, ಹುಟ್ಟಿ ಸಾಯುವ ತನಕ, ಸತ್ತ ನಂತರ ಲೋಕಾಂತರ ಹೋಗಿ ಮತ್ತೆ ಹುಟ್ಟುವ ತನಕ, ಪ್ರತಿಯೊಂದು ಜೀವರ ಕ್ರಿಯೆ ಪಂಚಪ್ರಾಣರ ಅಧೀನವಾಗಿ ನಡೆಯುತ್ತಿರುತ್ತದೆ. ಈ ಪ್ರಾಣತತ್ತ್ವವನ್ನು ತಿಳಿದರೆ ಪ್ರಪಂಚದ ರಹಸ್ಯವನ್ನು ತಿಳಿದಂತೆ.
 
ಪ್ರಶ್ನೋಪನಿಶದ್ : ಪ್ರಶ್ನೆ 3 ( 8 )

ಆದಿತ್ಯೋ ಹ ವೈ ಬಾಹ್ಯಃ ಪ್ರಾಣಃ ಉದಯತ್ಯೇಷ ಹ್ಯೇನಂ ಚಾಕ್ಷುಷಂ ಪ್ರಾಣಮನುಗೃಹ್ಣಾನಃ । ಪೃಥಿವ್ಯಾಂ ಯಾ ದೇವತಾ ಸೌಷಾ ಪುರುಷಸ್ಯಾಪಾನಮವಷ್ಟಭ್ಯಾಂತರಾ ಯದಾಕಾಶಃ ಸ ಸಮಾನೋ ವಾಯುರ್ವ್ಯಾನಃ ॥ ೮॥

ನಮ್ಮ ಅಂತರಂಗ ಪ್ರಪಂಚ(ಪಿಂಡಾಂಡ)ದಲ್ಲಿ ಪ್ರಾಣದೇವರ ಕಾರ್ಯವ
್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು, ಮುಂದೆ ಬ್ರಹ್ಮಾಂಡದಲ್ಲಿ ಪ್ರಾಣದೇವರ ಐದು ರೂಪಗಳ ಕಾರ್ಯಕ್ಷೇತ್ರವನ್ನು ವಿವರಿಸುತ್ತಾರೆ. ಇಲ್ಲಿ ದೇಹದ ಒಳಗೆ ಮತ್ತು ದೇಹದ ಹೊರಗೆ ಪ್ರಾಣದೇವರ ಕ್ರಿಯೆಯನ್ನು ಸಮನ್ವಯ ಮಾಡಿ ವಿವರಿಸಲಾಗಿದೆ. ಪಂಚಪ್ರಾಣರಿಗೂ ಮತ್ತು ಪಂಚಭೂತಗಳಿಗೂ ಇರುವ ಸಂಬಂಧವನ್ನು ಇಲ್ಲಿ ಪಿಪ್ಪಲಾದರು ವಿವರಿಸಿದ್ದಾರೆ.
ಹೇಗೆ ನಮ್ಮ ದೇಹದ ಊರ್ಧ್ವಭಾಗದಲ್ಲಿದ್ದು ಪ್ರಾಣದೇವರು ಜ್ಞಾನದಬೆಳಕು ನೀಡುತ್ತಾರೋ, ಹಾಗೇ ದೇಹದ ಹೊರಗೆ ಸೂರ್ಯನಲ್ಲಿದ್ದು, ಇಡೀ ವಿಶ್ವವನ್ನು ಬೆಳಗುವ ಶಕ್ತಿ ಪ್ರಾಣದೇವರು. ಸೂರ್ಯನಿಗೂ ನಮ್ಮ ಕಣ್ಣಿಗೂ ನೇರ ಸಂಬಂಧ. ಬ್ರಹ್ಮಾಂಡದಲ್ಲಿರುವ ಸೂರ್ಯನೇ ಪಿಂಡಾಂಡದಲ್ಲಿ ಕಣ್ಣಾಗಿದ್ದಾನೆ. ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ: ಆದಿತ್ಯಶ್ಚಕ್ಷುರ್ಭೂತ್ವಾSಕ್ಷಿಣೀ ಪ್ರಾವಿಶದ್ ॥ಐ-ಉ-೨-೪ ॥ ಸೂರ್ಯಶಕ್ತಿಯಿಂದಲೇ ನಮಗೆ ಕಣ್ಣು ಕಾಣುವುದು. ಇಲ್ಲಿ ವಿಶೇಷವೇನೆಂದರೆ ಪ್ರಾಣದೇವರೇ ಸೂರ್ಯನಲ್ಲಿ ನಿಂತು ಬೆಳಕು ನೀಡುವವರು ಹಾಗೂ ನಮ್ಮ ಕಣ್ಣಿನಲ್ಲಿ ನಿಂತು ನಮಗೆ ನೋಡುವ ಶಕ್ತಿ ಕೊಡುವವರು. ಎಲ್ಲಾ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಪ್ರಾಣ ಶಕ್ತಿಯಾದರೂ ಸಹ, ಇದೊಂದು ಪ್ರಾಣದೇವರ ವಿಶೇಷ ಸನ್ನಿಧಾನ.
ಪ್ರಾಣದೇವರು ಪಂಚಭೂತಗಳಲ್ಲಿ ಒಂದಾದ ನೀರಿನಲ್ಲಿ ಸನ್ನಿಹಿತರಾಗಿದ್ದಾರೆ. ನಾವು ಒಂದು ವೇಳೆ ಊಟ ಮಾಡದೇ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ನೀರಿನಲ್ಲಿ ಮತ್ತು ಕಣ್ಣಿನಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿದೆ. ಹಾಗಾಗಿ ನಮಗೆ ಬಹಳ ಆನಂದವಾದಾಗ ಅಥವಾ ಬಹಳ ದುಃಖವಾದಾಗ ಕಣ್ಣಿನಿಂದ ನೀರು ಬರುತ್ತದೆ. ಅದೇ ರೀತಿ ಹೊರಗೆ ನೀರನ್ನು ಆವಿಯಾಗಿಸಿ ಮಳೆ ಸುರಿಸುವವರೂ ಸೂರ್ಯನ ಅಂತರ್ಯಾಮಿಯಾಗಿರುವ ಪ್ರಾಣದೇವರು. ‘ಮೇಘೇ ಭೂತ್ವಾ ಪ್ರಾವಸ್ಯತಿ’ ಎನ್ನುವ ಒಂದು ಮಾತಿದೆ. ಇದು ಪ್ರಾಣದೇವರ ಒಂದು ವಿಶೇಷ ಕ್ರಿಯೆಯನ್ನು ಹೇಳುತ್ತದೆ. ಪ್ರಾಣದೇವರು ಸಮುದ್ರಕ್ಕೆ ಸೇರುವ ಎಲ್ಲಾ ನದಿನೀರನ್ನು ಸಮುದ್ರದ ಲವಣನೀರಿನಿಂದ ಬೇರ್ಪಡಿಸಿ ಮಳೆ ಬರಿಸುತ್ತಾರೆ. ಹೀಗೆ ಆಕಾಶದಿಂದ ಮಳೆ ಸುರಿಯುವುದೂ ಪ್ರಾಣದೇವರಿಂದ ಮತ್ತು ಕಣ್ಣಿನಿಂದ ನೀರು ಸುರಿಯುವುದೂ ಪ್ರಾಣದೇವರಿಂದ. ಒಟ್ಟಿನಲ್ಲಿ ಹೇಳಬೇಕೆಂದರೆ: ಪ್ರಾಣದೇವರು ಕಣ್ಣಿನಲ್ಲಿ ಸನ್ನಿಹಿತರಾಗಿ ಅರಿವಿನ ಬೆಳಕು ನೀಡುತ್ತಾರೆ; ನೀರಿನಲ್ಲಿ ಸನ್ನಿಹಿತರಾಗಿ ಜೀವನವನ್ನು ಕೊಡುತ್ತಾರೆ; ಸೂರ್ಯನ ಅಂತರ್ಯಾಮಿಯಾಗಿ ನಿಂತು, ಆದಿತ್ಯನಾಮಕರಾಗಿ, ಉದಯಿಸುವ ಸೂರ್ಯನಲ್ಲಿದ್ದು, ಸೌರಶಕ್ತಿ ಹರಿಸುತ್ತಾ, ನಮಗೆ ಕಾಣಿಸಿಕೊಳ್ಳುತ್ತಾರೆ. ಇದು ನಮ್ಮ ಪ್ರಾಚೀನ ಋಷಿಗಳು ಕಂಡುಕೊಂಡ ದೈವವಿಜ್ಞಾನ.
ದೇಹದಲ್ಲಿ ಅಪಾನನಾಮಕನಾಗಿ ನಮ್ಮ ಮಲ-ಮೂತ್ರ ವಿಸರ್ಜನೆಗೆ ಕಾರಣವಾಗಿರುವ ಶಕ್ತಿಯೇ, ಭೂಮಿಯಲ್ಲಿ ಮೇಲಿನಿಂದ ಕೆಳಕ್ಕೆಳೆಯುವ ಶಕ್ತಿಯಾಗಿದೆ. ಇದೇ ಭೂಮಿಯ ಗುರುತ್ವಾಕರ್ಷಣ ಶಕ್ತಿ. [ಪಿಪ್ಪಲಾದರ ಈ ಮಾತಿನಿಂದ ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು; ಅದು ಇಂದಿನ ಪಾಶ್ಚಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ ಎನ್ನುವುದು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ್ಟ “ಆಕೃಷ್ಟಿ ಶಕ್ತಿಶ್ಚ ಮಹೀ” ಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ‘ಭೂಗೋಲ’ ಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ‘ಗೋಲ’ ಎನ್ನುವ ಪದದಿಂದಲೇ ತಿಳಿಯುತ್ತದೆ. ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲಾ ]. ಭೂಮಿಯಲ್ಲಿ ಅಪಾನಶಕ್ತಿ ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ ನಿರಾಲಂಭವಾಗಿ ನಿಂತಿದೆ. ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ನ್ಯೂಟನ್ ಕೂಡಾ ಈ ಸತ್ಯವನ್ನು ಕಂಡುಕೊಂಡಿದ್ದು ಯಾವುದೇ ಸಂಶೋಧನೆಯಿಂದಲ್ಲ, ಬದಲಾಗಿ ಸೇಬುಹಣ್ಣಿನ ಮರದಿಂದ ಸೇಬು ಕೆಳಕ್ಕೆ ಬಿದ್ದಾಗ ಅದು ಅವನಿಗೆ ಸ್ಫುರಣವಾಯಿತು.
ಪ್ರಾಣ ಮತ್ತು ಅಪಾನರು ಮಣ್ಣು-ನೀರಿನಲ್ಲಿ ತುಂಬಿ ಈ ವಿಶ್ವದ ಭೌತಿಕ ರೂಪಕ್ಕೆ ಕಾರಣರಾದರು. ಅವರೇ ನಮ್ಮ ಪಿಂಡಾಂದಲ್ಲಿದ್ದು, ನಮ್ಮ ಅನ್ನಮಯಕೋಶಕ್ಕೆ ಆಕಾರ ಕೊಟ್ಟವರು. ಪಂಚಭೂತಗಳಲ್ಲಿ ಮಣ್ಣು ಮತ್ತು ನೀರಿನಲ್ಲಿ ತುಂಬಿರುವ ಪ್ರಾಣಶಕ್ತಿಯನ್ನು ವಿವರಿಸಿದ ಪಿಪ್ಪಲಾದರು, ಮುಂದೆ ಆಕಾಶದಲ್ಲಿರುವ ಪ್ರಾಣಶಕ್ತಿಯನ್ನು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ಅಂತರಾ ಯದಾಕಾಶಃ ಸ ಸಮಾನಃ” ಎಂದು. ಹಿಂದೆ ಹೇಳಿದಂತೆ ನಮ್ಮ ಹೃದಯಾಕಾಶದಲ್ಲಿ ಹೇಗೆ ‘ಸಮಾನ’ ನಾಮಕ ಪ್ರಾಣ ತುಂಬಿ ನಿಂತು ನಡೆಸುತ್ತಿದ್ದಾನೋ, ಹಾಗೇ ಹೊರಗೆ ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಆಕಾಶದಲ್ಲಿ, ‘ಅವಕಾಶವಾಗಿ’, ಪ್ರಾಣದೇವರು ಆಕಾಶದ ದೇವತೆಯಾದ ಗಣಪತಿಯ ಅಂತರ್ಯಾಮಿಯಾಗಿ ನೆಲಸಿ, ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಪಂಚದ ಸಮಸ್ತ ಚಟುವಟಿಕೆಗಳು ನಡೆಯುವುದು ಆಕಾಶದಲ್ಲಿ. ಆಕಾಶವೇ ಇಲ್ಲದಿದ್ದರೆ ಯಾವ ಚಟುವಟಿಕೆಗೂ ಅವಕಾಶವಿಲ್ಲ. ವಿಶ್ವದಲ್ಲಿ ಪ್ರತಿಯೊಂದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವವರು ‘ಸಮಾನ’ ಅಂತರ್ಯಾಮಿ ಮುಖ್ಯಪ್ರಾಣ ದೇವರು. ದೇಹದಲ್ಲಿರುವ ೭೨ಕೋಟಿ ೭೨ಲಕ್ಷ ನಾಡಿಗಳಲ್ಲಿ ಜೀವವಾಗಿ ತುಂಬಿರುವ ‘ವ್ಯಾನ’ ನಾಮಕ ಪ್ರಾಣ, ಹೊರಗೆ ಆಕಾಶದಲ್ಲಿ ವಾಯುವಾಗಿ ನಮಗೆ ಜೀವವಾಯುವಾದ ಆಮ್ಲಜನಕವನ್ನು ನೀಡುತ್ತಾರೆ. ಆಕಾಶದಲ್ಲಿ ಗಾಳಿ ಇರುವುದರಿಂದ ನಮಗೆ ಶಬ್ದದ ಅನುಭವವಾಗುತ್ತದೆ. ಗಾಳಿಯಲ್ಲಿ, ಹತ್ತು ದಿಕ್ಕುಗಳಲ್ಲಿ, ನಮ್ಮ ಗ್ರಹಣೇಂದ್ರಿಯದಲ್ಲಿ ತುಂಬಿ ನಮಗೆ ಶಬ್ದ ಕೇಳುವಂತೆ ಮಾಡುವವರು ‘ವ್ಯಾನ’ ಅಂತರ್ಗತ ಮುಖ್ಯಪ್ರಾಣ ದೇವರು. ಈ ಎಲ್ಲಾ ವಿಚಾರಗಳೂ ಬಹಳ ಅದ್ಭುತವಾದ ವಿಜ್ಞಾನ. ಇದು ಯಾವುದೇ ಸಂಶೋಧನೆಗೆ ನಿಲುಕದ ವಿಷಯ. ಇದು ನಮ್ಮ ಪ್ರಾಚೀನ ಋಷಿಗಳು ಭಗವದನುಗ್ರಹದಿಂದ ಅಂತರ್ದರ್ಶನದಲ್ಲಿ ಕಂಡುಕೊಂಡ ಸತ್ಯ.
 
ಪ್ರಶ್ನೋಪನಿಶದ್ : ಪ್ರಶ್ನೆ 3 ( 9 - 10 )

ತೇಜೋ ಹವಾ ಉದಾನಃ । ತಸ್ಮಾದುಪಶಾಂತತೇಜಾಃ । ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈರ್ಯಚ್ಚಿತ್ತಸ್ತೇನೈಷ ಪ್ರಾಣ ಆಯತಿ ॥ ೯॥
ಪ್ರಾಣಸ್ತೇಜಸಾ ಯುಕ್ತಃ ಸ ಹಾSತ್ಮನಾ ಯಥಾಸಂಕಲ್ಪಿತಂ ಲೋಕಂ ನಯತಿ ॥ ೧೦॥

ಈ ಹಿಂದೆ ವಿವರಿಸಿದಂತೆ: ‘ಉದಾನ’ ಜೀವನನ
್ನು ದೇಹದಲ್ಲಿನ ಯಾವುದೋ ಒಂದು ನಾಡಿಯ ಮುಖೇನ ದೇಹದಿಂದ ಹೊರ ಕರೆದುಕೊಂಡು ಹೋಗುತ್ತಾನೆ. ಪ್ರಾಣದೇವರು ಜೀವನೊಂದಿಗೆ ದೇಹವನ್ನು ಬಿಟ್ಟ ತಕ್ಷಣ, ದೇಹ ಶವವಾಗುತ್ತದೆ ಮತ್ತು ತಣ್ಣಗಾಗುತ್ತದೆ. ಹೇಗೆ ನಮ್ಮ ದೇಹದ ಒಳಗೆ ಪ್ರಾಣಾಗ್ನಿಯಾಗಿ ತೇಜಸ್ಸಿನ ದೇವತೆ ‘ಉದಾನ’ ಸನ್ನಿಹಿತನಾಗಿದ್ದಾನೋ, ಹಾಗೇ ದೇಹದ ಹೊರಗೆ ಪಂಚಭೂತಗಳಲ್ಲಿ ‘ಉದಾನ’ ನಾಮಕ ಪ್ರಾಣ ಅಗ್ನಿಯಲ್ಲಿ ಸನ್ನಿಹಿತನಾಗಿದ್ದಾನೆ.
ಹೀಗೆ ಸಮಸ್ತ ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿರುವ ಒಂದೊಂದು ಶಕ್ತಿಯ ಹಿಂದಿರುವ ಮೂಲಶಕ್ತಿ ಪ್ರಾಣದೇವರು. ಪ್ರಪಂಚದಲ್ಲಿ ಪ್ರಾಣದೇವರ ಪ್ರವೇಶವಿಲ್ಲದೇ ಒಂದು ಹುಲ್ಲುಕಡ್ಡಿಗೂ ಅಸ್ತಿತ್ವವಿಲ್ಲ. ಇಡೀ ಬ್ರಹ್ಮಾಂಡದಲ್ಲಿ ಪಂಚಭೂತಗಳ ಒಳಗೆ, ಪಂಚೇಂದ್ರಿಯದ ಒಳಗೆ, ಪಂಚಪ್ರಾಣನಾಗಿ ತುಂಬಿ, ಇಡೀ ಪ್ರಪಂಚವನ್ನು ನಿಯಂತ್ರಿಸುವ ಈ ಪಂಚಪ್ರಾಣರ ಮಹಿಮೆಯೇ ಇಷ್ಟಿರುವಾಗ, ಇನ್ನು ಈ ಪ್ರಾಣದೇವರನ್ನೂ ನಿಯಂತ್ರಿಸುವ ಭಗವಂತನ ಮಹಿಮೆ ಅದೆಷ್ಟಿರಬಹುದು? ಅದು ನಮ್ಮ ಮನಸ್ಸು ಗ್ರಹಿಸಲು ಅಸಾಧ್ಯವಾದ ಅಗಣಿತ ಶಕ್ತಿ!
ದೇಹದಿಂದ ಜೀವನನ್ನು ಆಚೆ ಕರೆದುಕೊಂಡು ಹೋಗುವ ಪ್ರಾಣದೇವರು, ಆ ಜೀವದ ಮುಂದಿನ ಗತಿಯನ್ನು ಜೀವದ ಕರ್ಮಕ್ಕನುಸಾರವಾಗಿ ನಿರ್ಧರಿಸುತ್ತಾರೆ. ಜೀವಕ್ಕೆ ಮರುಹುಟ್ಟು ತಕ್ಷಣ ಆಗಬಹುದು ಅಥವಾ ಸೂಕ್ಷ್ಮಲೋಕದಲ್ಲಿ ಸುಖವನ್ನೋ ಅಥವಾ ದುಃಖವನ್ನೋ ಅನುಭವಿಸಿದ ನಂತರ ಆಗಬಹುದು. ಜೀವ ದೇಹವನ್ನು ಬಿಟ್ಟು ಹೊರ ಹೋದಾಗ, ಆ ಜೀವಕ್ಕೆ ಸಂಬಂಧಿಸಿದ ಚಕ್ಷುರಾದಿ ಇಂದ್ರಿಯಗಳು ಮನಸ್ಸಿನ ಜೊತೆಗೆ ಜೀವದ ಸೂಕ್ಷ್ಮ ಶರೀರದೊಂದಿಗಿರುತ್ತವೆ.
ಮೂಲತಃ ಎಲ್ಲಾ ಇಂದ್ರಿಯಗಳು ಇರುವುದು ಸೂಕ್ಷ್ಮ ಶರೀರದಲ್ಲೇ. ಸ್ಥೂಲ ಶರೀರದ ಭೌತಿಕ ಇಂದ್ರಿಯ ಕೆಲಸ ಮಾಡದೇ ಇರಬಹುದು, ಆದರೆ ಸೂಕ್ಷ್ಮ ಶರೀರದಲ್ಲಿನ ಎಲ್ಲಾ ಇಂದ್ರಿಯಗಳು ಸುಸೂತ್ರವಾಗಿರುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿ ಕುರುಡನಾಗಿದ್ದರೆ, ಆತನ ಸೂಕ್ಷ್ಮ ಶರೀರದ ಇಂದ್ರಿಯ ಕುರುಡಾಗಿರುವುದಿಲ್ಲ. [ಈ ಕುರಿತು ಕೆಲವು ನೈಜ ಘಟನೆಗಳನ್ನೊಳಗೊಂಡ ವಿಷಯವನ್ನು ನಾವು Raymond moody ಬರೆದಿರುವ Life after life ಎನ್ನುವ ಪುಸ್ತಕದಲ್ಲಿ ಕಾಣಬಹುದು]. ಜೀವ ಮರುಹುಟ್ಟು ಪಡೆದಾಗ ಇದೇ ಇಂದ್ರಿಯಗಳೊಂದಿಗೆ ಮರಳಿ ಹುಟ್ಟುತ್ತಾನೆ.
ಜೀವದ ಮರುಜನ್ಮಕ್ಕೆ ನಿರ್ಣಾಯಕ ‘ದೇಹತ್ಯಾಗ ಮಾಡುವ ಕೊನೇ ಕ್ಷಣದಲ್ಲಿ ಜೀವ ಮಾಡುವ ಚಿಂತನೆ’. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ ॥ಭಗವದ್ಗೀತಾ-೮-೬॥ ಕೃಷ್ಣ ಹೇಳುತ್ತಾನೆ: “ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ, ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ” ಎಂದು. [ಇದಕ್ಕೆ ಉತ್ತಮ ದೃಷ್ಟಾಂತ ಭರತ ಚಕ್ರವರ್ತಿ ಜಿಂಕೆಯಾಗಿ ಹುಟ್ಟುವ ಕಥೆ (ಭಾಗವತ-೫-೮)]. ಇಲ್ಲಿ ಪಿಪ್ಪಲಾದರು ಇದನ್ನೇ ‘ಯಚ್ಚಿತ್ತಃ’ ಎಂದು ವಿವರಿಸಿದ್ದಾರೆ. ಪ್ರಾಣದೇವರು ಜೀವದ ಕೊನೇ ಕ್ಷಣದ ಇಚ್ಛೆಗನುಗುಣವಾಗಿ ಮತ್ತು ಜೀವದ ಕರ್ಮಕ್ಕನುಗುಣವಾಗಿ, ಆ ಜೀವ ಎಲ್ಲಿ ಮರಳಿ ಹುಟ್ಟಬೇಕೋ ಅಲ್ಲಿಗೆ ಕರೆದುಕೊಂಡು ಹೋಗಿ ಹುಟ್ಟಿಸುತ್ತಾರೆ.[ಇಲ್ಲಿ ಎಲ್ಲವೂ ಪರಾಬ್ಧ ಕರ್ಮಕ್ಕನುಗುಣವಾಗಿ ಭಗವಂತನ ಇಚ್ಛೆಯಂತೆಯೇ ನಡೆಯುತ್ತದೆ. ಚಿತ್ತದ ದೇವತೆ ಕೂಡಾ ಪ್ರಾಣನಾಗಿರುವುದರಿಂದ ಜೀವದ ಕೊನೇ ಇಚ್ಛೆ ಕೂಡಾ ಪ್ರಾಣದೇವರ ಅಧೀನ!]
ಇಲ್ಲಿಯ ತನಕ ಪಿಪ್ಪಲಾದರು ಒಂದು ಅದ್ಭುತವಾದ ಪ್ರಾಣತತ್ತ್ವದ ಮಹಿಮೆಯನ್ನು ವಿವರಿಸಿದರು. ಈ ಪ್ರಾಣತತ್ತ್ವದ ಮಹತ್ವವನ್ನು ನಾವೆಲ್ಲರೂ ಎಲ್ಲಾ ಸಮಯದಲ್ಲೂ ತಿಳಿದಿರಬೇಕು. ಉದಾಹರಣೆಗೆ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಅಥವಾ ಮನೆಯಲ್ಲಿ ಪ್ರಾಣದೇವರ ಉಪಾಸನೆ ಮಾಡುತ್ತೇವೆ. ಈ ರೀತಿ ಪೂಜೆ ಮಾಡುವಾಗ ನಮಗೆ ಪ್ರಾಣದೇವರ ಈ ಮಹಿಮೆಯ ಎಚ್ಚರ ಇರಬೇಕು. ತಿಳಿದು ಉಪಾಸನೆ ಮಾಡಿದಾಗ ಅಲ್ಲಿ ಸಿಗುವ ಆನಂದ ಅಪರಂಪಾರವಾದುದು. ಆ ಆನಂದವನ್ನು ವಿವರಿಸಲು ಸಾಧ್ಯವಿಲ್ಲ, ಕೇವಲ ಅನುಭವಿಸಬೇಕು! ಇಲ್ಲಿ ಮುಂದುವರಿದು ಪಿಪ್ಪಲಾದರು ಪ್ರಾಣದೇವರ ಬಗಿಗಿನ ಈ ಜ್ಞಾನವನ್ನು ಅರಿತು ಉಪಾಸನೆ ಮಾಡುವುದರ ಫಲಶ್ರುತಿಯನ್ನು ವಿವರಿಸುತ್ತಾರೆ.
 
ಪ್ರಶ್ನೋಪನಿಶದ್ : ಪ್ರಶ್ನೆ 3 ( 11 -12 )

ಯ ಏವಂ ವಿದ್ವಾನ್ ಪ್ರಾಣಂ ವೇದ ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ ॥ ೧೧॥

ಪ್ರಾಣದೇವರು ಒಳಗಿನಿಂದ ಪಂಚಪ್ರಾಣರಾಗಿದ್ದಾರೆ; ಹೊರಗೆ ಪಂಚಭೂತಗಳಲ್ಲಿದ್ದಾರೆ; ಸೂರ್ಯನಲ್ಲಿದ್ದಾರೆ; ಇಂದ್ರಿಯಗಳಲ್ಲಿದ್ದಾರೆ; ಹುಟ್ಟು-ಸಾವುಗಳಲ್ಲಿದ್ದಾರೆ; ಪಂಚಕೋಶಗಳ
ಲ್ಲಿ ತುಂಬಿ ನಮ್ಮನ್ನು ನಡೆಸುತ್ತಿದ್ದಾರೆ; ನಮ್ಮ ಬದುಕಿನ ಒಂದೊಂದು ಕ್ಷಣವೂ ಪ್ರಾಣದೇವರಿಂದ ನಿಯಂತ್ರಿಸಲ್ಪಡುತ್ತದೆ- ಎಂದು ತಿಳಿದು ಯಾರು ಉಪಾಸನೆ ಮಾಡುತ್ತಾರೋ: ಅವರು ಜೀವನದಲ್ಲಿ ಎಂದೂ ದುರಂತವನ್ನು[ಚಿಕ್ಕವರು ತಮ್ಮ ಕಣ್ಣ ಮುಂದೆ ಸಾಯುವ ದುರಂತ] ಕಾಣುವುದಿಲ್ಲ; ಅವರ ಬುದ್ಧಿಶಕ್ತಿ ಎಂದೂ ಕುಂದುವುದಿಲ್ಲ; ಅವರು ಬುದ್ಧಿವಂತ ಜ್ಞಾನಿಯಾಗಿ ಬೆಳೆಯುತ್ತಾರೆ; ಬಂದ ಜ್ಞಾನ ಅವರಲ್ಲಿ ಕೊನೇ ತನಕ ಸ್ಮರಣಶಕ್ತಿಯಾಗಿ ಉಳಿಯುತ್ತದೆ. ಮುಖ್ಯವಾಗಿ ಪ್ರಾಣದೇವರ ಉಪಾಸನೆ ಮಾಡುವುದರಿಂದ ಅವರು ಸಂಸಾರದಿಂದ ಪಾರಾಗಿ, ಶಾಶ್ವತವಾಗಿ ಮೋಕ್ಷದಲ್ಲಿ ಭಗವಂತನನ್ನು ಸೇರುತ್ತಾರೆ.
ಮೋಕ್ಷ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠ ಸಾಧನೆ –ಭಗವಂತನನ್ನು ಪ್ರಾಣದೇವರ ಮೂಲಕ ಉಪಾಸನೆ ಮಾಡುವುದು. ಇದನ್ನೇ ವೇದದಲ್ಲಿ ಈ ರೀತಿ ಹೇಳಲಾಗಿದೆ ಎಂದು ಪಿಪ್ಪಲಾದರು ವೇದದ ಒಂದು ಮಂತ್ರವನ್ನು ಉಲ್ಲೇಖಿಸುತ್ತಾರೆ:

ತದೇಷ ಶ್ಲೋಕಃ -
ಉತ್ಪತ್ತಿಮಾಗತಿಂ ಸ್ಥಾನಂ ವಿಭುತ್ವಂ ಚೈವ ಪಂಚಧಾ ।
ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ ವಿಜ್ಞಾಯಾಮೃತಮಶ್ನುತ ಇತಿ ॥ ೧೨॥

ನಾವು ತಿಳಿಯಬೇಕಾದುದು: ಪ್ರಾಣದೇವರ ಹುಟ್ಟಿನ ಮಹಿಮೆಯನ್ನು; ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣಶಕ್ತಿಯ ಮಹಿಮೆಯನ್ನು; ಪಂಚಭೂತಗಳಲ್ಲಿ ಮತ್ತು ಪಂಚಪ್ರಾಣರಾಗಿ ನಮ್ಮ ದೇಹದಲ್ಲಿ ತುಂಬಿರುವ ಅವರ ಮಹಿಮೆಯನ್ನು. ನಾವು ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಪ್ರಾಣದೇವರ ವೈಭವವನ್ನು ಅರಿತಿರಬೇಕು. ಇದನ್ನೆಲ್ಲವನ್ನು ತಿಳಿದರೆ ಮಾತ್ರ ಭಗವಂತನನ್ನು ಕಾಣಲು ಸಾಧ್ಯ. ಪ್ರಾಣದೇವರನ್ನು ತಿಳಿಯದೇ ಭಗವಂತನನ್ನು ತಿಳಿಯಲು ಸಾಧ್ಯವಿಲ್ಲ.
ಇಲ್ಲಿ ಬಳಕೆಯಾದ ‘ಚ’-ಕಾರ ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆ ಅತ್ಯಂತ ಮುಖ್ಯವಾದುದು ಎನ್ನುವುದನ್ನು ಸೂಚಿಸುತ್ತದೆ. ಅದೇ ರೀತಿ ನಾವು ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆಯನ್ನು ತಿಳಿದಿರಲೇಬೇಕು ಎನ್ನುವುದನ್ನು ‘ಏವ’-ಕಾರ ಸೂಚಿಸುತ್ತದೆ. ಪ್ರಾಣದೇವರ ಈ ಮಹಿಮೆಯನ್ನು ಅರಿತವನು ಸಾವಿಲ್ಲದ, ಆನಂದಮಯವಾದ ಮೋಕ್ಷವನ್ನು ಸೇರುತ್ತಾನೆ ಎನ್ನುತ್ತದೆ ವೇದ.
ಇಲ್ಲಿ ಕೊನೆಯಲ್ಲಿ ‘ವಿಜ್ಞಾಯಾಮೃತಮಶ್ನುತ’ ಎನ್ನುವ ಪದವನ್ನು ಎರಡು ಬಾರಿ ಬಳಸಲಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅಧ್ಯಾಯ ಮುಗಿಯಿತು ಎನ್ನುವುದನ್ನು ಸೂಚಿಸಲು ಈ ರೀತಿ ಕೊನೆಯಲ್ಲಿ ಒಂದು ಪದವನ್ನು ಎರಡು ಬಾರಿ ಬಳಸುತ್ತಾರೆ. ಅದೇ ರೀತಿ ಇಲ್ಲಿ ಬಳಸಲಾದ ‘ಇತಿ’ ಎನ್ನುವ ಪದ ಇಲ್ಲಿಗೆ ಮೂರನೇ ಪ್ರಶ್ನೆಗೆ ಉತ್ತರರೂಪವಾದ ಗ್ರಂಥ ಸಮಾಪ್ತಿಯಾಯಿತು ಎನ್ನುವುದನ್ನು ಸೂಚಿಸುತ್ತದೆ.

ಇತಿ ಪ್ರಶ್ನೋಪನಿಷದಿ ತೃತೀಯಃ ಪ್ರಶ್ನಃ ॥
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಮೂರನೇ ಪ್ರಶ್ನೆ/ಅಧ್ಯಾಯ ಮುಗಿಯಿತು.
 

ಷಟ್ ಪ್ರಶ್ನೋಪನಿಷದಿ ದ್ವಿತೀಯಃ ಪ್ರಶ್ನಃ ॥

ಪ್ರಶ್ನೋಪನಿಶದ್ : ಪ್ರಶ್ನೆ 2 (1-2)

ಅಥ ಹೈನಂ ಭಾರ್ಗವೋ ವೈದರ್ಭಿಃ ಪಪ್ರಚ್ಛ । ಭಗವನ್ ಕತ್ಯೇವ ದೇವಾಃ ಪ್ರಚಾಂ ವಿಧಾರಯಂತೇ, ಕತರ ಏತತ್ ಪ್ರಕಶಯಂತೇ, ಕಃ ಪುನರೇಷಾಂ ವರಿಷ್ಠ ಇತಿ ॥೧॥

ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗದ ವಿಶ್ಲೇಷಣೆ ಮಾಡಿ ಇಡೀ ಸೃಷ್ಟಿಯ ಬಿತ್ತರವನ್ನು ವಿವರಿಸಿದ ಪಿಪ್ಪ

ಲಾದರಲ್ಲಿ ಎರಡನೇ ಶಿಷ್ಯ ಭಾರ್ಗವ ವೈದರ್ಭಿಃ ತನ್ನ ಪ್ರಶ್ನೆಯನ್ನು ಕೇಳುತ್ತಾನೆ. ಆತ ಕೇಳುತ್ತಾನೆ: “ಈ ದೇಹ ಕುಸಿದು ಬೀಳದಂತೆ, ತ್ರಾಣ ಕೊಟ್ಟು, ನಡೆಸುವವರು ಯಾರು? ಕ್ರಿಯೆ ಮತ್ತು ಜ್ಞಾನ ಕೊಡುವ ದೇವತೆಗಳು ಯಾರು? ಈ ದೇಹವನ್ನು ಧಾರಣೆ ಮಾಡಿ ಜ್ಞಾನ ಕೊಡುವ ದೇವತೆಗಳಲ್ಲಿ ಶ್ರೇಷ್ಠ ಯಾರು? ಭಗವಂತನ ನಂತರದ ಸರ್ವ ಶ್ರೇಷ್ಠ ದೇವತೆ ಯಾರು?” ಇದು ಭಾರ್ಗವ ವೈದರ್ಭಿಃ ಪ್ರಶ್ನೆ.

ತಸ್ಮೈ ಸ ಹೋವಾಚಾಕಾಶೋ ಹ ವಾ ಏಷ ದೇವೋ ವಾಯುರಗ್ನಿರಾಪಃ ಪೃಥಿವೀ ವಾಙ್ಮನಶ್ಚಕ್ಷುಃ ಶ್ರೋತ್ರಂ ಚ । ತೇ ಪ್ರಕಾಶ್ಯಾಭಿವದಂತಿ ವಯಮೇತದ್ಬಾಣಮವಷ್ಟಭ್ಯ ವಿಧಾರಯಾಮಃ ॥ ೨ ॥

ಹಿಂದೆ ಸೃಷ್ಟಿಯ ಬಗ್ಗೆ ಪಿಪ್ಪಲಾದರು ಕೊಟ್ಟ ಉತ್ತರ ಎಷ್ಟು ವಿಸ್ಮಯಕರವೋ ಅಷ್ಟೇ ವಿಸ್ಮಯಕರವಾದುದು ಈ ಧಾರಣೆ, ಕ್ರಿಯೆ ಮತ್ತು ಜ್ಞಾನಶಕ್ತಿ ಕೊಡುವ ದೇವತೆಗಳ ವಿವರಣೆ. ಏಕೆ ವಿಸ್ಮಯ ಎಂದರೆ ನಮಗೆ ಗೊತ್ತಿರುವ ಸಂಗತಿಗಳಲ್ಲಿ ಅನೇಕ ಗೊತ್ತಿಲ್ಲದ ಸಂಗತಿಗಳು ಸೇರಿವೆ. ನಾವು ಸಾಮಾನ್ಯವಾಗಿ ಕೇವಲ ಸ್ಥೂಲ ವಿಚಾರಗಳನ್ನಷ್ಟೇ ತಿಳಿದಿರುತ್ತೇವೆ. ಅದರ ಹಿಂದಿನ ಸೂಕ್ಷ್ಮ ವಿವರಣೆ ನಮಗೆ ತಿಳಿದಿರುವುದಿಲ್ಲ. ಅಂತಹ ಸೂಕ್ಷ್ಮ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳುವ ಪಿಪ್ಪಲಾದರ ಈ ವಿವರಣೆ ಒಂದು ವಿಸ್ಮಯಕಾರಿ ವಿವರಣೆ.
ಪಿಪ್ಪಲಾದರು ಹೇಳುತ್ತಾರೆ: “ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ ದೇಹದಲ್ಲಿ ನೆಲೆಸಿದ್ದಾರೆ” ಎಂದು. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ ಜೀವಂತವಾಗಿರುವ ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ. ಇದು ಸರ್ವ ಶಾಸ್ತ್ರಗಳಲ್ಲೂ ಪ್ರಸಿದ್ಧವಾದ ವಿಷಯ.
ಆಕಾಶ ದೇವತೆಯ ಸೃಷ್ಟಿಯ ನಂತರ ಆ ಆಕಾಶದಲ್ಲಿ ಗಾಳಿ ಹುಟ್ಟಿತು. ಅಂದರೆ ಗಾಳಿಯ ಅಭಿಮಾನಿ ದೇವತೆಯ ಸೃಷ್ಟಿಯಾಯಿತು. ಈತ ಪ್ರಧಾನವಾಯುವಿನ ಮಗನಾದ ಭೂತವಾಯು. ಈತನನ್ನು ಮರೀಚಿ ಎಂದೂ ಕರೆಯುತ್ತಾರೆ[ಈ ಕುರಿತ ವಿವರಣೆ ಗೀತೆಯಲ್ಲಿ ಬರುತ್ತದೆ. ಅ-೧೦ ಶ್ಲೋಕ-೨೧]. ಮರೀಚಿಯ ನಂತರ ಅಗ್ನಿಯ ಜನನ. ಪ್ರಧಾನ ಅಗ್ನಿಯ ಮಗ ‘ಪಾವಕ’ ಎನ್ನುವವನು ಇಲ್ಲಿ ಅಗ್ನಿದೇವತೆ. ನಂತರ ನೀರಿನ ದೇವತೆ ಬುಧ, ಪ್ರಥಿವೀದೇವತೆ ‘ಶನಿ’. ಹೀಗೆ ಗಣಪತಿ, ಮರೀಚಿ, ಪಾವಕ, ಬುಧ ಮತ್ತು ಶನಿ ಇವರು ಪಂಚಭೂತಗಳ ದೇವತೆಗಳಾಗಿ ಸೃಷ್ಟಿಯಾದರು. ನಮ್ಮ ದೇಹ ಕೂಡಾ ಪಂಚಭೂತಗಳಿಂದಾಗಿದೆ. ಈ ಪಂಚದೇವತೆಗಳು ನಮ್ಮ ದೇಹ ಧಾರಣೆ ಮಾಡಿ ನಮಗೆ ಕ್ರಿಯಾಶಕ್ತಿ ಕೊಡುತ್ತಾರೆ.
ನಮಗೆ ಜ್ಞಾನ ಕೊಡುವ ಶಕ್ತಿ ಯಾವುದೆಂದರೆ ‘ವಾಙ್ಮನ’. ನಮಗೆ ಜ್ಞಾನ ಹುಟ್ಟುವುದು ಶಬ್ದದ ಮೂಲಕ. ಮಾತಿಲ್ಲದೆ ಯಾವುದೇ ಅರಿವು ಬರುವುದಿಲ್ಲ. ಮಾತು ಅನ್ನುವುದು ಜ್ಯೋತಿ. ಇದರ ಜೊತೆಗೆ ಕಿವಿ, ಕಣ್ಣು ಹಾಗೂ ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸು. ಹೀಗೆ ಮನಸ್ಸು, ಮಾತು, ಕಣ್ಣು, ಕಿವಿ, ಇವು ನಮ್ಮ ದೇಹದಲ್ಲಿ ನಮಗೆ ಜ್ಞಾನದ ವಿಕಾಸವನ್ನು ಕೊಡತಕ್ಕಂತವು. ನೋಡಿ-ಕಲಿಯುವುದು, ಕೇಳಿ-ತಿಳಿಯುವುದು. ಹೇಳಿದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು ಗ್ರಹಿಸುವುದು ಮನಸ್ಸು. ಈ ನಾಲ್ಕು ಇಂದ್ರಿಯಗಳು ಇಲ್ಲದಿದ್ದರೆ ಮನುಷ್ಯನ ಜ್ಞಾನ ಬೆಳವಣಿಗೆ ಆಗುವುದೇ ಇಲ್ಲ. ಇಲ್ಲಿ ಮಾತಿನ ದೇವತೆ ಅಗ್ನಿ, ಕಣ್ಣಿನ ದೇವತೆ ಸೂರ್ಯ, ಕಿವಿಯ ದೇವತೆ ಚಂದ್ರ. ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸಿನ ದೇವತೆ ಗರುಡ-ಶೇಷ-ರುದ್ರರು. ವಿಶೇಷವಾಗಿ ಶಿವಶಕ್ತಿ. ರುದ್ರ ದೇವರ ಅನುಗ್ರಹ ಇಲ್ಲದೆ ಯಾವುದೇ ಅರಿವು ಬೆಳೆಯದು. ಹೀಗೆ ಪಂಚಭೂತಗಳ ದೇವತೆಗಳಿಂದ ದೇಹ ಧಾರಣೆಯಾದರೆ, ಈ ನಾಲ್ಕು ದೇವತೆಗಳಿಂದ ಅರಿವು ಬೆಳೆಯುತ್ತದೆ. ಇಷ್ಟು ವಿವರಣೆ ನೀಡಿದ ಪಿಪ್ಪಲಾದರು ಮುಂದೆ ದೇವತೆಗಳ ಒಂದು ಕಥೆಯನ್ನು ಹೇಳುತ್ತಾರೆ.
ಒಮ್ಮೆ ಬೆಳಕು ನೀಡುವ ದೇವತೆಗಳಲ್ಲಿ [ಕಣ್ಣಿನ, ಕಿವಿಯ, ಬಾಯಿಯ ಮತ್ತು ಮನಸ್ಸಿನ ಅಭಿಮಾನಿ ದೇವತೆಗಳಲ್ಲಿ] ಒಂದು ಚರ್ಚೆ ಆರಂಭವಾಯಿತಂತೆ. [ಇದು ಒಂದು ಅಪೂರ್ವ ಜ್ಞಾನವನ್ನು ನಮಗೆ ತಿಳಿಸುವುದಕ್ಕೋಸ್ಕರ ದೇವತೆಗಳು ಆಡಿದ ಒಂದು ನಾಟಕ]. ಇಲ್ಲಿ ಪ್ರತಿಯೊಬ್ಬ ದೇವತೆಯೂ ‘ದೇಹಧಾರಣೆಯಲ್ಲಿ ತಮ್ಮ ಪಾತ್ರ ಮುಖ್ಯ ಎಂದು ಸಮರ್ಥಿಸಿ ಕೊಳ್ಳುತ್ತಿದ್ದರಂತೆ. ಕಣ್ಣಿನ ದೇವತೆ ಸೂರ್ಯ “ನಾನಿಲ್ಲದೆ ಜೀವನಿಗೆ ಬದುಕೇ ಇಲ್ಲ” ಎಂದರೆ ಕಿವಿಯ ದೇವತೆ ಚಂದ್ರ “ಕಣ್ಣಿಗಿಂತ ಕಿವಿ ಮುಖ್ಯ ಆದ್ದರಿಂದ ನಾನು ಶ್ರೇಷ್ಠ” ಎಂದನಂತೆ. ಇದಕ್ಕೆ ಬಾಯಿಯ ದೇವತೆ “ಮಾತೇ ಮುಖ್ಯ, ಮಾತಿಲ್ಲದೆ ಏನೂ ಇಲ್ಲ ಹಾಗಾಗಿ ನಾನು ಮುಖ್ಯ” ಎಂದನಂತೆ. ಆಗ ಮನಸ್ಸಿನ ದೇವತೆ: “ನೋಡುವುದು, ಕೇಳುವುದು ಮಾತನಾಡುವುದು ಎಲ್ಲಕ್ಕಿಂತ ಮುಖ್ಯ ಗ್ರಹಣ ಮಾಡುವ ಮನಸ್ಸು. ಆದ್ದರಿಂದ ಎಲ್ಲವುದಕ್ಕಿಂತ ಮುಖ್ಯ ನಾನು” ಎಂದನಂತೆ. ಹೀಗೆ ಎಲ್ಲಾ ದೇವತೆಗಳು ತಾವೇ ಮುಖ್ಯ ಎಂದು ಪ್ರಾಣ ದೇವರ ಮುಂದೆ ನಿಂತು ಚರ್ಚಿಸಿದರಂತೆ. ಎಲ್ಲರೂ “ಈ ಬಾಣವನ್ನು ಧರಿಸಿದವನು ನಾನು” ಎನ್ನುವ ಅಭಿಪ್ರಾಯವನ್ನು ಮುಂದಿಟ್ಟರಂತೆ. [ಇಲ್ಲಿ ಬಾಣ ಎನ್ನುವ ಪದ ಬಳಕೆಯಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ ಬಾಣ ಎಂದರೆ ಶರೀರ. ಬಾ= ಬಯಕೆ/ಕಾಮನೆ; ಅಣ=ಈಡೇರಿಸುವ ಸಾಧನ. ನಮ್ಮ ಬಯಕೆಗಳನ್ನು ನಾವು ನಮ್ಮ ದೇಹದ ಮೂಲಕ ಈಡೇರಿಸಿಕೊಳ್ಳುತ್ತೇವೆ. ಆದ್ದರಿಂದ ದೇಹವನ್ನು ಬಾಣ ಎಂದು ಕರೆಯುತ್ತಾರೆ].
 


ಪ್ರಶ್ನೋಪನಿಶದ್ : ಪ್ರಶ್ನೆ 2 (3 - 4)

ತಾನ್ ವರಿಷ್ಠಃ ಪ್ರಾಣ ಉವಾಚ । ಮಾ ಮೋಹಮಾಪದ್ಯಥ ಅಹಮೇವೈತತ್ ಪಂಚಧಾಽಽತ್ಮಾನಂ ಪ್ರವಿಭಜ್ಯೈತದ್ಬಾಣಮವಷ್ಟಭ್ಯ ವಿಧಾರಯಾಮೀತಿ ತೇಽಶ್ರದ್ದಧಾನಾ ಬಭೂವುಃ ॥ ೩ ॥

ದೇವತೆಗಳ ಚರ್ಚೆಯನ್ನು ಕೇಳಿಸಿಕೊಂಡ ದೇವತಾ ಸಮುದಾಯದಲ್ಲಿ ವರಿಷ್ಠನಾದ ಪ್ರಾಣದೇವರು ಹೇಳುತ
್ತಾರೆ: “ಏಕೆ ಸುಮ್ಮನೆ ವ್ಯರ್ಥ ಚರ್ಚೆ ಮಾಡುತ್ತೀರಾ? ಈ ದೇಹಕ್ಕೆ ಜ್ಞಾನಶಕ್ತಿ, ಕ್ರಿಯಾಶಕ್ತಿ ಕೊಟ್ಟು ಅದು ಕುಸಿಯದಂತೆ ಧರಿಸಿದವರು ನೀವಲ್ಲ ನಾನೇ. ನಿಮ್ಮ ಕಣ್ಣಮುಂದೆ ಕಾಣುವ ನನ್ನ ಐದು ರೂಪಗಳಿಂದ ಈ ಶರೀರವನ್ನು ಪ್ರವೇಶಮಾಡಿ, ಅದನ್ನು ನಾನು ಧರಿಸಿದ್ದೇನೆ ಹಾಗೂ ನೀವು ನನಗೆ ಅಧೀನರಾಗಿದ್ದೀರಿ” ಎನ್ನುತ್ತಾರೆ. ಪ್ರಾಣದೇವರ ಈ ಮಾತಿಗೆ ದೇವತೆಗಳು ವಿಶ್ವಾಸ ತೋರುವುದಿಲ್ಲ.

ಸೋಽಭಿಮಾನಾದೂರ್ಧ್ವಮುತ್ಕ್ರಾಮತ ಇವ ತಸ್ಮಿನ್ನುತ್ಕ್ರಾಮತ್ಯಥೇತರೇ ಸರ್ವ ಏವೋತ್ಕ್ರಾಮಂತೇ ತಸ್ಮಿಂಶ್ಚ ಪ್ರತಿಷ್ಠಮಾನೇ ಸರ್ವ ಏವ ಪ್ರತಿಷ್ಠಂತೇ । ತದ್ಯಥಾ ಮಕ್ಷಿಕಾ ಮಧುಕರರಾಜಾನಮುತ್ಕ್ರಾಮಂತಂ ಸರ್ವ ಏವೋತ್ಕ್ರಮಂತೇ ತಸ್ಮಿಂಷ್ಚ ಪ್ರತಿಷ್ಠಮಾನೇ ಸರ್ವಾ ಏವ ಪ್ರತಿಷ್ಠಂತ ಏವಂ ವಾಙ್ಮನಷ್ಚಕ್ಷುಃ ಶ್ರೋತ್ರಂ ಚ ತೇ ಪ್ರೀತಾಃ ಪ್ರಾಣಂ ಸ್ತುನ್ವಂತಿ ॥ ೪ ॥

ಪ್ರಾಣದೇವರು ಹೇಳುತ್ತಾರೆ: “ನಮ್ಮಲ್ಲಿ ಒಬ್ಬೊಬ್ಬರಾಗಿ ಈ ದೇಹದಿಂದ ಹೊರ ಹೋಗೋಣ. ಯಾರು ಹೊರ ಹೋದಾಗ ಈ ದೇಹ ಬಿದ್ದು ಹೋಗುತ್ತದೋ ಅವರು ನಿಜವಾದ ಧಾರಕ” ಎಂದು ಹೇಳಿ ದೇಹದಿಂದ ಆಚೆ ಹೊರಟವರಂತೆ ಪ್ರಾಣದೇವರು ಏಳುತ್ತಾರೆ. ಆಗ ಅಲ್ಲಿ ಇತರ ದೇವತೆಗಳಿಗೆ ನಿಲ್ಲಲು ಸಾಧ್ಯವಾಗುವುದಿಲ್ಲ. ಅದೇ ರೀತಿ ದೇಹ ಪ್ರವೇಶ ಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಇತರ ದೇವತೆಗಳನ್ನು ದೇಹ ಪ್ರವೇಶಿಸುವಂತೆ ಹೇಳುತ್ತಾರೆ ಪ್ರಾಣ ದೇವರು. ಆದರೆ ಎಲ್ಲಾ ದೇವತೆಗಳು ಪ್ರವೇಶಿಸಿದರೂ ಕೂಡಾ ಪ್ರಾಣದೇವರ ಪ್ರವೇಶದ ತನಕ ಅಲ್ಲಿ ಯಾವುದೇ ಚಟುವಟಿಕೆ ಅವರಿಂದ ಸಾಧ್ಯವಾಗಲಿಲ್ಲ. ಆಗ ದೇವತೆಗಳಿಗೆ ಪ್ರಾಣದೇವರ ಪ್ರಾಮುಖ್ಯತೆ ಮನವರಿಕೆಯಾಗುತ್ತದೆ. ಅವರನ್ನು ತಮ್ಮೆಲ್ಲರ ಮುಖಂಡ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಪ್ರಾಣದೇವರ ಮಹತ್ವವನ್ನು ಇಲ್ಲಿ ಪಿಪ್ಪಲಾದರು ಒಂದು ಅಪೂರ್ವವಾದ ಪ್ರಕೃತಿಯ ದೃಷ್ಟಾಂತದೊಂದಿಗೆ ವಿವರಿಸಿದ್ದಾರೆ. ಒಂದು ಜೇನುಗೂಡು. ಅಲ್ಲಿ ಒಂದು ರಾಣಿಹುಳ ರಾಜನಂತೆ ಕಾರ್ಯಭಾರ ಮಾಡುತ್ತಿರುತ್ತದೆ. ಎಲ್ಲಾ ಜೇನುಹುಳಗಳ ಚಲನವಲನ, ನಿಯಂತ್ರಣ ಆ ಪ್ರಧಾನ ರಾಣಿಹುಳದಲ್ಲಿರುತ್ತದೆ. ಒಂದು ವೇಳೆ ಈ ರಾಣಿಹುಳ ಗೂಡನ್ನು ಬಿಟ್ಟು ಹೊರಟರೆ ಇತರ ಎಲ್ಲಾ ಹುಳಗಳು ಅದನ್ನು ಹಿಂಬಾಲಿಸುತ್ತವೆ. ನಮ್ಮ ದೇಹ ಒಂದು ಜೇನುಗೂಡಿನಂತೆ. ಇಲ್ಲಿ ಪ್ರಾಣದೇವರು ಮಧುಕರ ರಾಜನಂತೆ. ಇತರ ದೇವತೆಗಳು ಜೇನು ಹುಳಗಳಂತೆ. ನಮ್ಮ ದೇಹದಲ್ಲಿ ಭಗವಂತನನ್ನು ಬಿಟ್ಟರೆ ಎರಡನೇ ಸರ್ವಾಧಿಕ, ಸರ್ವೋತ್ಕೃಷ್ಟ ಶಕ್ತಿ ಪ್ರಾಣದೇವರು. ಅವರ ಅಧೀನವಾಗಿ ಇತರ ಇಂದ್ರಿಯಾಭಿಮಾನಿ ದೇವತೆಗಳಿರುತ್ತಾರೆ. ಈ ವಿವರಣೆಯನ್ನು ಕೇಳಿದ ಎಲ್ಲಾ ದೇವತೆಗಳಿಗೂ ಬಹಳ ಸಂತೋಷವಾಯಿತು. ಅವರು ಪ್ರಾಣದೇವರನ್ನು ಸ್ತೋತ್ರ ಮಾಡಿದರು.
ಈ ಅಧ್ಯಾಯದಲ್ಲಿ ಬರುವ ಮುಂದಿನ ಒಂಬತ್ತು ಮಂತ್ರಗಳು ದೇವತೆಗಳು ಮಾಡಿದ ಪ್ರಾಣಸ್ತುತಿ. ಇದನ್ನು ತ್ರಿವಿಕ್ರಮಪಂಡಿತರ ವಾಯುಸ್ತುತಿಯೊಂದಿಗೆ ನಿತ್ಯ ಪಠಿಸಿದರೆ ಅದೊಂದು ಅದ್ಭುತ ಅನುಷ್ಠಾನ. ಪುರುಷಸೂಕ್ತ ಭಗವಂತನಿಗೆ ಹೇಗೆ ಅತ್ಯಂತ ಪ್ರಿಯವೋ ಹಾಗೇ ಪ್ರಾಣದೇವರ ಉಪಾಸನೆಯಲ್ಲಿ ವಾಯುಸ್ತುತಿ ಅತ್ಯಂತ ಶ್ರೇಷ್ಠ. ಇಲ್ಲಿ ಕೇವಲ ವಾಯುಸ್ತುತಿ ಮಾತ್ರವಲ್ಲ ಹರಿಸ್ತುತಿಯೂ ಇದೆ. ಆದ್ದರಿಂದ ಇದು ನಿಜವಾದ ಹರಿವಾಯುಸ್ತುತಿ. [ತ್ರಿವಿಕ್ರಮ ಪಂಡಿತರು ಹರಿಸ್ತುತಿ ಮತ್ತು ವಾಯುಸ್ತುತಿಯನ್ನು ಬೇರೆ ಬೇರೆಯಾಗಿ ಬರೆದಿರುವುದರಿಂದ ಅವರು ಬರೆದಿರುವ ವಾಯುಸ್ತುತಿಯನ್ನು ಹರಿವಾಯು ಸ್ತುತಿ ಎಂದು ಕರೆಯುವುದು ಅಷ್ಟು ಪ್ರಸ್ತುತವಲ್ಲ. ಅವರು ವಿಷ್ಣುಸ್ತುತಿ ಬೇರೆಯಾಗಿ ಬರೆದಿರುವುದರಿಂದ ವಾಯುಸ್ತುತಿ ರಚನೆ ವಿಷ್ಣುಪರ ಅನುಸಂಧಾನದಿಂದ ಬರೆದಿಲ್ಲ ಎನ್ನುವುದು ತಿಳಿಯುತ್ತದೆ. ಆದರೆ ಇಲ್ಲಿ ಬರುವ ಒಂಬತ್ತು ಮಂತ್ರಗಳ ಪ್ರಾಣಸ್ತುತಿ- ವಿಷ್ಣು ಮತ್ತು ವಾಯುಪರವಾಗಿರುವ ವೈದಿಕ ಸ್ತುತಿ]
 
ಪ್ರಶ್ನೋಪನಿಶದ್ : ಪ್ರಶ್ನೆ 2 ( 5 - 7)

ಇಲ್ಲಿ ಮೊದಲ ಎರಡು ಮಂತ್ರವನ್ನು ಪರೋಕ್ಷವಾಗಿ ಹೇಳಿದರೆ ಉಳಿದ ಏಳು ಮಂತ್ರಗಳಲ್ಲಿ ನೇರ ಸಂಬೋಧನೆ ಇದೆ. ಬನ್ನಿ ದೇವತೆಗಳು ಮಾಡಿದ ಈ ಶ್ರೇಷ್ಠವಾದ ಹರಿವಾಯು ಸ್ತುತಿಯನ್ನು ಪಿಪ್ಪಲಾದರ ಬಾಯಿಂದ ಕೇಳೋಣ:

ಏಷೋಽಗ್ನಿಸ್ತಪತ್ಯೇಷ ಸೂರ್ಯ ಏಷ ಪರ್ಜನ್ಯೋ ಮಘವಾನ
ೇಷ ವಾಯುಃ
ಏಷ ಪೃಥಿವೀ ರಯಿರ್ದೇವಃ ಸದಸಚ್ಚಾಮೃತಂ ಚ ಯತ್ ॥ ೫ ॥

ಅಗ್ನಿಯೊಳಗಿದ್ದು ಅಗ್ನಿ ನಾಮಕನಾಗಿರುವವನು, ಸೂರ್ಯನೊಳಗಿದ್ದು ಸೂರ್ಯ ನಾಮಕನಾಗಿರುವವನು, ಮೋಡದೊಳಗಿದ್ದು ಮಳೆ ಸುರಿಸುವವನು, ಇಂದ್ರನೊಳಗಿದ್ದು ಮೂರು ಲೋಕಗಳ ರಕ್ಷಣೆ ಮಾಡುವವನು, ವಾಯುದೇವರೊಳಗಿದ್ದು ಜಗತ್ತನ್ನು ಉಸಿರಾಡಿಸುವವನು, ಭೂಮಿಯೊಳಗಿದ್ದು ಸಮಸ್ತ ಭೂಲೋಕವನ್ನು ಧಾರಣೆ ಮಾಡಿದವನು, ಭಾರತೀದೇವಿಯೊಳಗಿದ್ದು ಸಮಸ್ತ ವಾಕ್ ನಿಯಂತ್ರಕ ಮತ್ತು ಸಮಸ್ತ ಚರಾಚರಾತ್ಮಕ ಪ್ರಪಂಚವನ್ನು ಧಾರಣೆ ಮಾಡಿದವನು ‘ಅವನು’.[ಇಲ್ಲಿ ‘ಅವನು ಎಂದರೆ ಮೊದಲು ಭಗವಂತ ನಂತರ ಮುಖ್ಯಪ್ರಾಣ-ಈ ಎರಡೂ ಅರ್ಥದಲ್ಲಿ ಈ ಮಂತ್ರವನ್ನು ನೋಡಬಹುದು ಎನ್ನುವುದು ಮುಂದೆ ಬರುವ ಮಂತ್ರಗಳಿಂದ ತಿಳಿಯುತ್ತದೆ].

ಅರಾ ಇವ ರಥನಾಭೌ ಪ್ರಾಣೇ ಸರ್ವಂ ಪ್ರತಿಷ್ಠಿತಂ ।
ಋಚೋ ಯಜೂಂ ̐ಷಿ ಸಾಮಾನಿ ಯಜ್ಞಃ ಕ್ಷತ್ರಂ ಬ್ರಹ್ಮ ಚ ॥ ೬ ॥

ಯಾವ ರೀತಿ ರಥದ ಚಕ್ರದ ನಾಭಿ(Axle) ಇಡೀ ರಥವನ್ನು ಧಾರಣೆ ಮಾಡಿದೆಯೋ ಹಾಗೇ ಭಗವಂತ ಮತ್ತು ಪ್ರಾಣದೇವರು ಈ ವಿಶ್ವವೆಂಬ ರಥದ ಚಕ್ರದ ನಾಭಿ ರೂಪದಲ್ಲಿ ವಿಶ್ವಧಾರಕರಾಗಿದ್ದಾರೆ. ಇವರು ಕೇವಲ ರೂಪಾತ್ಮಕ ಜಗತ್ತಿನ ಧಾರಕರಷ್ಟೇ ಅಲ್ಲ, ನಾಮಾತ್ಮಕ ಪ್ರಪಂಚದ ಧಾರಕ ಶಕ್ತಿ ಕೂಡಾ ಇವರೇ. [ಗದ್ಯ, ಪದ್ಯ ಮತ್ತು ಗಾನ ರೂಪದ ಮೂರು ವೇದಗಳನ್ನು ಧಾರಣೆ ಮಾಡಿದವನು ಆ ಭಗವಂತ. ಸಮಸ್ತ ವೇದದ ಸಮಸ್ತ ಶಬ್ದವೂ ಆ ಭಗವಂತನನ್ನು ಹೇಳುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿದಿರಬೇಕು] ನಾವು ಮಾಡುವ ಯಜ್ಞ[ಸಮಸ್ತ ಕರ್ಮ] ಭಗವಂತನ ಅಧೀನ. ಸಮಾಜದ ರಕ್ಷಕರು, ಸಮಾಜಕ್ಕೆ ಜ್ಞಾನವನ್ನು ಕೊಟ್ಟು ಜ್ಞಾನದಿಂದ ಸಮಾಜವನ್ನು ಶ್ರೀಮಂತಗೊಳಿಸುವವರು ಮತ್ತು ಎಲ್ಲರೂ ಆ ಭಗವಂತನ ಮತ್ತು ಭಗವಂತನ ನಂತರ ಪ್ರಾಣದೇವರ ಅಧೀನ.

ಪ್ರಜಾಪತಿಶ್ಚರಸಿ ಗರ್ಭೇ ತ್ವಮೇವ ಪ್ರತಿಜಾಯಸೇ ।
ತುಭ್ಯಂ ಪ್ರಾಣ ಪ್ರಜಾಸ್ತ್ವಿಮಾ ಯತ್ ಪ್ರಣೈಃ ಪ್ರತಿತಿಷ್ಠಸಿ ॥ ೭ ॥

“ಪ್ರಜಾಪತಿಯಾಗಿ ಗರ್ಭದ ಒಳಗಿರುವ ಪ್ರಜೆಯನ್ನು ರಕ್ಷಣೆ ಮಾಡುವವನು ‘ನೀನು’ [ಇಲ್ಲಿ ನೇರವಾಗಿ ‘ನೀನು’ ಎಂದು ಪ್ರಾಣ ದೇವರನ್ನು ದೇವತೆಗಳು ಸ್ತುತಿಸುವುದನ್ನು ನಾವು ಗಮನಿಸಬೇಕು. ಹಿಂದೆ ಪ್ರಜಾಪತಿ ಎಂದರೆ ಭಗವಂತ ಎನ್ನುವುದನ್ನು ನೋಡಿದ್ದೇವೆ. ಭಗವಂತನ ನಂತರ ಪ್ರಜಾಪತಿ: ಬ್ರಹ್ಮ-ವಾಯು] ಹುಟ್ಟಲಿರುವ ಸಂತಾನದ ಪಾಲಕನಾಗಿ, ಗರ್ಭದಲ್ಲಿ ನಿಂತು ಆ ಜೀವಕ್ಕೆ ಒಂದು ಸುಂದರ ರೂಪವನ್ನು ಕೊಡುವ ಶಿಲ್ಪಿ ನೀನು, ಗರ್ಭದಲ್ಲಿರುವ ಮಗುವಿನೊಂದಿಗೆ ಹುಟ್ಟುವವನು ನೀನು, ಹುಟ್ಟಿದ ಮಗುವನ್ನು ಆ ಮಗುವಿನ ಪೂರ್ಣ ಆಯಸ್ಸಿನ ತನಕ ಅಂತರ್ಯಾಮಿಯಾಗಿ ರಕ್ಷಿಸುವವನು ನೀನು. [ವಯಸ್ಸಾದಂತೆ ಇತರ ದೇವತೆಗಳು ಜೀವನನ್ನು ಬಿಟ್ಟುಹೋಗಬಹುದು. ಆದರೆ ಪ್ರಾಣದೇವರು ಮತ್ತು ಭಗವಂತ ಕೊನೇ ಕ್ಷಣದ ತನಕ ಜೀವನೊಂದಿಗಿದ್ದು ರಕ್ಷಣೆ ಮಾಡುತ್ತಾರೆ]. ಹಾಗಾಗಿ ಸಮಸ್ತ ಜೀವಜಾತವೂ ನಿನ್ನ ಅಧೀನ. ಸಮಸ್ತ ಇಂದ್ರಿಯಾಭಿಮಾನಿ ದೇವತೆಗಳ ಮಧ್ಯದಲ್ಲಿ ನಿಂತು ಎಲ್ಲವನ್ನು ಪಾಲಿಸುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು [ಮತ್ತು ಭಗವಂತನನ್ನು] ಸ್ತುತಿಸುತ್ತಾರೆ.
 
ಪ್ರಶ್ನೋಪನಿಶದ್ : ಪ್ರಶ್ನೆ 2 ( 8)

ದೇವಾನಾಮಸಿ ವಹ್ನಿತಮಃ ಪಿತೃಣಾಂ ಪ್ರಥಮಾ ಸ್ವಧಾ ।
ಋಷೀಣಾಂ ಚರಿತಂ ಸತ್ಯಮಥರ್ವಾಂಗಿರಸಾಮಸಿ ॥ ೮ ॥

ಹಿಂದಿನ ಮಂತ್ರದಲ್ಲಿ ಅಗ್ನಿ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ ಮಾಡಿರುವುದನ್ನು ನೋಡಿದ್ದೇವೆ. ಇಲ್ಲಿ ವಹ್ನಿ ಎನ್ನುವ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ
ಮಾಡಿ ಸ್ತುತಿಸುವುದನ್ನು ಕಾಣುತ್ತೇವೆ. ‘ಅಗ್ನಿ’ ಎಂದರೆ ಚಲನೆ ಇಲ್ಲದ ವಸ್ತುವಿಗೆ ಚಲನೆ ಕೊಡುವಂತಹದ್ದು. ‘ವಹ್ನಿ’ ಎಂದರೆ ಕೊಂಡೊಯ್ಯುವಂತಹದ್ದು. ಈ ಎರಡು ಶಬ್ದಗಳ ನಿರ್ವಚನದ ಅರ್ಥ ಬೇರೆಬೇರೆ. ನಾವು ಯಜ್ಞದಲ್ಲಿ ಯಾವ ದೇವತೆಯ ಮಂತ್ರವನ್ನು ಜಪಿಸಿ ಆಹುತಿ ಕೊಡುತ್ತೇವೋ ಅದನ್ನು ಆ ದೇವತೆಗೆ ಮುಟ್ಟಿಸುವವನು ‘ವಹ್ನಿ’. ಹಾಗಾಗಿ ನಾವು ಕೊಟ್ಟ ಆಹುತಿಯನ್ನು ದೇವತೆಗಳಿಗೆ ತಲುಪಿಸುವವನು ಎನ್ನುವ ಅರ್ಥದಲ್ಲಿ ಬೆಂಕಿಯನ್ನು ವಹ್ನಿ ಎನ್ನುತ್ತಾರೆ. ನಾವು ಮಾಡುವ ಸಮಸ್ತ ಕರ್ಮವನ್ನು ಭಗವಂತನಿಗೆ/ದೇವತೆಗಳಿಗೆ ಕೊಂಡುಹೋಗಿ ಮುಟ್ಟಿಸುವವರು ಮೂಲತಃ ಪ್ರಾಣದೇವರು. ಆದ್ದರಿಂದ “ನೀನು ವಹ್ನಿತಮಃ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ. ಕೇವಲ ದೇವತೆಗಳಿಗೆ ಆಹುತಿ ತಲುಪಿಸುವುದಷ್ಟೇ ಅಲ್ಲ, “ಪಿತೃಪತಿಗಳ ಒಳಗಿದ್ದು ಪಿತೃಗಳಿಗೆ ಕವ್ಯವನ್ನು ಸಲ್ಲಿಸುವ ‘ಪ್ರಥಮಾ ಸ್ವಧಾ’ ನೀನು” ಎನ್ನುತ್ತಾರೆ ದೇವತೆಗಳು.
[ನಾವು ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಾಹಾ ಎಂದೂ ಹಾಗೂ ಪಿತೃಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು ಹೇಳಿ ಅರ್ಪಿಸುತ್ತೇವೆ. ಇದು ಒಂದು ರೀತಿ ಅವರ ವಿಳಾಸವಿದ್ದಂತೆ. ಆದ್ದರಿಂದ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಧಾ ಎಂದಾಗಲಿ, ಪಿತೃಗಳಿಗೆ ಅರ್ಪಿಸುವಾಗ ಸ್ವಾಹಾ ಎಂದು ಹೇಳಿ ಅರ್ಪಿಸುವುದು ತಪ್ಪು. ಹಾಗೆ ಹೇಳಿ ಅರ್ಪಿಸಿದರೆ ಅದು ತಲುಪಬೇಕಾದವರಿಗೆ ತಲುಪದೇ ದಾನವರ ಪಾಲಾಗಬಹುದು. ಈ ಮಂತ್ರದಲ್ಲಿ ‘ಸ್ವಧಾ’ ಎನ್ನುವ ಪದ ವಿಶೇಷ ಅರ್ಥದಲ್ಲಿ ಬಳಕೆಯಾಗಿದೆ. ಯಮ-ಸೋಮ-ಕವ್ಯವಾಹ ಇವರು ಪಿತೃಪತಿಗಳು. ಇವರು ನಾವು ಅರ್ಪಿಸಿದ ಕವ್ಯವನ್ನು ಇತರ ಪಿತೃದೇವತೆಗಳಿಗೆ ತಲುಪಿಸುವ ಪಿತೃಪತಿಗಳಾದ್ದರಿಂದ ಇವರನ್ನು ಸ್ವಧಾ ಎಂದೂ ಕರೆಯುತ್ತಾರೆ. ಆದರೆ ಪಿತೃಪತಿಗಳಿಗೂ ಮೊದಲಿಗನಾಗಿ ಅವರೊಳಗಿದ್ದು ಆ ಕೆಲಸವನ್ನು ಮಾಡುವ ನೀನು ‘ಪ್ರಥಮಾ ಸ್ವಧಾ’ ಎಂದು ಇಲ್ಲಿ ದೇವತೆಗಳು ಸ್ತುತಿಸಿದ್ದಾರೆ.]
ಋಷಿಗಳ ಬದುಕು, ಜೀವನ, ಸಾತ್ವಿಕವಾಗಿ ಭಗವಂತನನ್ನು ಒಲಿಸಿಕೊಳ್ಳುವುದಕ್ಕಾಗಿ ಅವರು ಮಾಡುವ ಅನುಷ್ಠಾನ, ಅವರಲ್ಲಿರುವ ಪ್ರಾಮಾಣಿಕತೆ, ಭಗವಂತನ ಬಗೆಗಿರುವ ಕಳಕಳಿ ಇವೆಲ್ಲವನ್ನೂ “ಋಷಿಗಳ ಒಳಗಿದ್ದು ನಡೆಸುವವನು ನೀನು” ಎನ್ನುತ್ತಾರೆ ದೇವತೆಗಳು. [ಇಲ್ಲಿ ವಿಶೇಷವಾಗಿ ಅಥರ್ವ ಮತ್ತು ಅಂಗಿರಸ ಋಷಿಗಳನ್ನು ಹೆಸರಿಸಲಾಗಿದೆ. ಚತುರ್ಮುಖನಿಂದ ವೇದವನ್ನು ಉಪದೇಶ ಪಡೆದವನು ಅಥರ್ವ. ಅವರ ನಂತರ ಈ ಪರಂಪರೆಯನ್ನು ಬೆಳೆಸಿಕೊಂಡು ಬಂದವರು ಅಂಗಿರಸರು].
 
ಪ್ರಶ್ನೋಪನಿಶದ್ : ಪ್ರಶ್ನೆ 2 ( 9)

ಇಂದ್ರಸ್ತ್ವಂ ಪ್ರಾಣ ತೇಜಸಾ ರುದ್ರೋಽಸಿ ಪರಿರಕ್ಷಿತಾ ।
ತ್ವಮಂತರಿಕ್ಷೇ ಚರಸಿ ಸೂರ್ಯಸ್ತ್ವಂ ಜ್ಯೋತಿಷಾಂ ಪತಿಃ ॥ ೯ ॥

ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಇಂದ್ರಸ್ತ್ವಂ” ಎಂದು. ಇಂದ್ರ ದೇವತೆಗಳ ರಾಜ. ‘ಇಂದ್ರ’ ಎಂದರೆ ಸರ್ವಸಮರ್ಥ. ನಿಜವಾದ
ಸರ್ವಸಮರ್ಥ ಭಗವಂತನೊಬ್ಬನೆ. ಭಗವಂತನ ನಂತರ ಸರ್ವಸಮರ್ಥ ಪ್ರಾಣದೇವರು. “ಎಲ್ಲಾ ಜೀವಜಾತಗಳಲ್ಲಿ ಸರ್ವಸಮರ್ಥನಾದ ನಿರ್ವಾಹಕ, ಒಡೆಯ, ದೇವತೆಗಳಿಗೂ ಒಡೆಯ ನೀನು. ಏಕೆಂದರೆ ಇಂದ್ರನನ್ನು ನಿಯಂತ್ರಿಸುವ ತೇಜಸ್ಸು ನಿನ್ನದು. ನಿನ್ನ ತೇಜಸ್ಸಿನಿಂದ ಇಂದ್ರ ಇಂದ್ರನಾಗಿದ್ದಾನೆ. ನೀನೇ ಇಂದ್ರ ಹಾಗೂ ನಿನಗೂ ಇಂದ್ರ ಆ ಭಗವಂತ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ.
ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯವನ್ನು ಕೊಟ್ಟು ನಮ್ಮನ್ನು ರಕ್ಷಣೆ ಮಾಡುವವ ರುದ್ರ. ಶಿವನಿಲ್ಲದ ದೇಹ ಶವ. ಆದರೆ “ಆ ರುದ್ರಶಕ್ತಿಯ ಒಳಗಿದ್ದು ಎಲ್ಲವನ್ನೂ ಮಾಡುವ ರುದ್ರ ಶಬ್ದವಾಚ್ಯ ನೀನೇ” ಎನ್ನುತ್ತಾರೆ ದೇವತೆಗಳು. ನಮ್ಮೊಳಗೆ ರಕ್ತ, ಗಾಳಿ, ಆಹಾರ ಸಂಚಾರಕ್ಕೆ ಬೇಕಾದ ಅಂತರಿಕ್ಷ(space, ಆಕಾಶ/ಅವಕಾಶ)ವಿದೆ. “ಆ ಅಂತರಿಕ್ಷವನ್ನು ನಿಯಂತ್ರಿಸಿ, ಶುದ್ಧಿಗೊಳಿಸಿ ನಮಗೆ ಬದುಕು ಕೊಡುವವನು ನೀನು. ಅಷ್ಟೇ ಅಲ್ಲ, ದೇಹದ ಹೊರಗಿರುವ ಆಕಾಶದಲ್ಲಿ ಗಾಳಿಯಾಗಿ ತುಂಬಿ ನಮಗೆ ಉಸಿರು ಕೊಡುವವನು ನೀನು” ಎಂದು ದೇವತೆಗಳು ಸ್ತೋತ್ರ ಮಾಡುತ್ತಾರೆ.
ಹಿಂದೆ ಸೂರ್ಯನ ಅಂತರ್ಯಾಮಿಯಾಗಿ ಪ್ರಾಣನನ್ನು ಹೇಳಿರುವುದನ್ನು ನೋಡಿದ್ದೇವೆ. ಇಲ್ಲಿ ಅದನ್ನು ವಿವರಿಸುತ್ತಾ ಹೇಳುತ್ತಾರೆ: “ಸೂರ್ಯನ ಒಳಗಿರುವ ನಿಜವಾದ ಸೂರ್ಯ ನೀನು” ಎಂದು. ಏಕೆಂದರೆ ‘ಸೂರ್ಯ’ ಎಂದರೆ ಸೂರಿಗಳಿಗೆ ಗೋಚರವಾಗುವವನು ಎಂದರ್ಥ. ಸೂರಿಗಳು ಎಂದರೆ ಜ್ಞಾನಿಗಳು. ಜ್ಞಾನಿಗಳಿಗೆ ಗೋಚರವಾಗುವವರು ಪ್ರಾಣ ಮತ್ತು ಭಗವಂತ. ಸೂರ್ಯನೊಳಗೆ ಶಿವನಿದ್ದಾನೆ-ಅವನೂ ಸೂರ್ಯ; ಶಿವನೊಳಗೆ ಮುಖ್ಯಪ್ರಾಣನಿದ್ದಾನೆ-ಅವನೂ ಸೂರ್ಯ; ಮುಖ್ಯಪ್ರಾಣನಲ್ಲಿ ಭಗವಂತನಿದ್ದಾನೆ ಅವನೂ ಸೂರ್ಯ(ಸೂರ್ಯನಾರಾಯಣ). ಹೀಗೆ “ಬೆಳಕುಗಳಲ್ಲೆಲ್ಲಾ ದೊಡ್ಡ ಬೆಳಕು ನೀನು” ಎಂದು ದೇವತೆಗಳು ಪ್ರಾಣ ದೇವರನ್ನು ಮತ್ತು ಭಗವಂತನನ್ನು ಸ್ತುತಿಸುತ್ತಾರೆ.
 
 ರಶ್ನೋಪನಿಶದ್ : ಪ್ರಶ್ನೆ 2 (10 - 11)

ಯದಾ ತ್ವಮಭಿವರ್ಷಸ್ಯಥೇಮಾಃ ಪ್ರಾಣ ತೇ ಪ್ರಜಾಃ ।
ಆನಂದರೂಪಾಸ್ತಿಷ್ಠಂತಿ ಕಾಮಾಯಾನ್ನಂ ಭವಿಷ್ಯತೀತಿ ॥ ೧೦ ॥

ಇಳೆಗೆ ಮಳೆ ತರಿಸುವವನು ಪರ್ಜನ್ಯ. ಆತನ ನಿಯಾಮಕ ಇಂದ್ರ. ಆದರೆ ಇಂದ್ರನ ನಿಯಾಮಕ ಮುಖ್ಯಪ್ರಾಣ. ಬ
ಾಹ್ಯವಾಗಿ ನೋಡಿದರೆ ಸೂರ್ಯನ ಬಿಸಿಲಿನಿಂದ ನೀರು ಆವಿಯಾಗಿ ಮೋಡವಾಗುತ್ತದೆ. [ಇದನ್ನು ಮೇಘದೂತದಲ್ಲಿ ಹೀಗೆ ಹೇಳಿದ್ದಾರೆ : ಧೂಮಜ್ಯೋತಿಃಸಲಿಲಮರುತಾಂ ಸನ್ನಿಪಾತಃ ಕ್ವ ಮೇಘಃ]. ಮೋಡ ಮತ್ತು ಗಾಳಿಯ ಸಂಘರ್ಷದಿಂದ ಮಳೆಯಾಗುತ್ತದೆ. ಹಾಗಾಗಿ ಮಳೆಯಾಗುವುದು ವಾಯುದೇವರಿಂದ. ಇಲ್ಲಿ ದೇವತೆಗಳು ಹೇಳುತ್ತಾರೆ: “ನೀನು ಮಳೆ ಬರಿಸಿದಾಗ ಲೋಕದ ಜನ(ಜೀವಜಾತಗಳು) ಸಂತೋಷದಿಂದ ಕುಣಿದಾಡುತ್ತಾರೆ” ಎಂದು. ಏಕೆಂದರೆ ಮಳೆ ಬಂದರೆ ಬೆಳೆ, ಆಹಾರ ಸಮೃದ್ಧಿ. ಹಾಗಾಗಿ ಜೀವನಕ್ಕೆ ಮುಖ್ಯವಾಗಿ ಬೇಕಾದ ಆಹಾರ ಸಿಗುವುದು ಮಳೆಯಿಂದ. ಆ ಮಳೆಯನ್ನು ಕೊಡುವವನು ಇಂದ್ರನ ಅಂತರ್ಗತ, ಸೂರ್ಯನ ಅಂತರ್ಗತ ವಾಯುದೇವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇಂದ್ರಿಯಗಳಲ್ಲಿರುವವರು, ಭೌತಿಕ ಪ್ರಪಂಚದಲ್ಲಿದ್ದು ಸಲಹುವವರು ಭಗವಂತ ಮತ್ತು ಪ್ರಾಣದೇವರು.

ವ್ರಾತ್ಯಸ್ತ್ವಂ ಪ್ರಾಣೈಕರ್ಷರತ್ತಾ ವಿಶ್ವಸ್ಯ ಸತ್ಪತಿಃ ।
ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ ॥ ೧೧ ॥

ಇಲ್ಲಿ ‘ವ್ರಾತ್ಯಸ್ತ್ವಂ’ ಎನ್ನುವ ಪದ ಬಳಕೆಯಾಗಿದೆ. ನಾವು ಮೊದಲು ಈ ಪದದ ಅರ್ಥ ತಿಳಿದುಕೊಳ್ಳಬೇಕು. ಅಥರ್ವವೇದದಲ್ಲಿ ವ್ರಾತ್ಯಕಾಂಡ ಎನ್ನುವ ಒಂದು ಭಾಗ ಕೂಡಾ ಇದೆ. ಸಂಸ್ಕೃತದಲ್ಲಿ ವ್ರಾತ್ಯ ಎಂದರೆ ಆಚಾರಹೀನ ಎನ್ನುವ ಅರ್ಥವಿದೆ. ನೇಮ-ನಿಷ್ಠೆ ಇಲ್ಲದೆ ದಾರಿತಪ್ಪಿದ ವ್ಯಕ್ತಿ ‘ವ್ರಾತ್ಯ’. ಆದರೆ ಈ ಪದಕ್ಕೆ ಒಂದು ವಿಶೇಷ ಅರ್ಥವಿದೆ ಮತ್ತು ಆ ಅರ್ಥದಲ್ಲಿ ಇದನ್ನು ವೇದದಲ್ಲಿ ಬಳಸಿದ್ದಾರೆ. ‘ವ್ರಾತ’ ಎಂದರೆ ಸಮುದಾಯ. ಇಂದ್ರಿಯಾಭಿಮಾನಿ ದೇವತೆಗಳ ಸಮುದಾಯ, ಜೀವಜಾತಗಳ ಸಮುದಾಯ, ಚರಾಚರ ಪ್ರಪಂಚದ ಸಮುದಾಯ. ಅಂತಹ ವ್ರಾತದ ನಿಯಾಮಕ ‘ವ್ರಾತ್ಯ’. ಇಲ್ಲಿ ದೇವತೆಗಳು ಹೇಳುತ್ತಾರೆ: “ ನೀನು ವ್ರಾತ್ಯಸ್ತ್ವಂ ಪ್ರಾಣಃ” ಎಂದು. ಅಂದರೆ “ಸಮಸ್ತ ಜೀವಸಮುದಾಯದ ನಿಯಾಮಕ ಶಕ್ತಿ ನೀನು” ಎಂದರ್ಥ. ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಏಕಋಷಿಃ” ಎಂದು. ಏಕಋಷಿಃ ಎಂದರೆ ಜ್ಞಾನಿಗಳಲ್ಲಿ ಮುಖ್ಯ ಎಂದರ್ಥ. ಇನ್ನು ಅಥರ್ವ ಋಷಿಗಳು ಬಳಸುವ ಅಗ್ನಿಗೆ ‘ಏಕಋಷಿ’ ಎಂದೂ ಕರೆಯುತ್ತಾರೆ. “ಅಥರ್ವವೇದಿಗಳು ಆರಾಧನೆ ಮಾಡತಕ್ಕಂತಹ ಏಕಋಷಿ ಎನ್ನುವ ಅಗ್ನಿಯ ಒಳಗಿದ್ದು ಆರಾಧ್ಯನಾಗುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು ಸ್ತುತಿಸುತ್ತಾರೆ.
“ಎಲ್ಲವನ್ನು ರಕ್ಷಣೆ ಮಾಡುವವನು, ಹಾಗೇ ಪ್ರಳಯಕಾಲದಲ್ಲಿ ಇಡೀ ವಿಶ್ವವನ್ನು ಸಂಹಾರಮಾಡಿ ಕಬಳಿಸಿ ನಿಲ್ಲುವ ನೀನು ಸತ್ಪತಿ” ಎಂದು ದೇವತೆಗಳು ವಾಯುದೇವರನ್ನು ಸ್ತುತಿಸುತ್ತಾರೆ. ಸತ್ಪತಿ ಎನ್ನುವಲ್ಲಿ ‘ಸತ್’ ಎಂದರೆ ಜ್ಞಾನಿ, ಸಾತ್ವಿಕ. ಪ್ರಾಣದೇವರು ಅತಿಶಯ ಸಾತ್ವಿಕಮೂರ್ತಿ. ಸಾತ್ವಿಕರ, ಜ್ಞಾನಿಗಳ ಮತ್ತು ಎಲ್ಲರ ಸ್ವಾಮಿ ಪ್ರಾಣದೇವರು ಮತ್ತು ಆ ಭಗವಂತ ಸತ್ಪತಿಃ.
ಭಗವಂತನ ಮತ್ತು ಪ್ರಾಣದೇವರ ಮುಂದೆ ತಮ್ಮ ಅಸ್ತಿತ್ವದ ಮಹತ್ವವೇನು ಎನ್ನುವುದನ್ನು ವಿವರಿಸುತ್ತಾ ದೇವತೆಗಳು ಹೇಳುತ್ತಾರೆ: “ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ” ಎಂದು. ಅಂದರೆ “ ಸರ್ವ ಜೀವಗಳಲ್ಲಿ ಮೊದಲ ಜೀವನಾದ ನಿನಗೆ ನಾವು ಆಹಾರವನ್ನು ತಂದುಕೊಡುವ ಸೇವಕರು” ಎಂದರ್ಥ. ದೇವತೆಗಳು ಹೇಳುತ್ತಾರೆ “ ಓ ಮಾತರಿಶ್ವನೇ, ನೀನು ಸಮಸ್ತ ದೇವತಾಗಣಗಳ ತಂದೆ” ಎಂದು. [ಇಲ್ಲಿ ಮಾತರಿಶ್ವನ್ ಎಂದು ಹೇಳುವ ಬದಲು ಕೇವಲ ಮಾತರಿಶ್ವ ಎಂದು ಹೇಳಿದ್ದಾರೆ. ಇದು ಭಾಷಾಶಾಸ್ತ್ರ. ಒಂದೇ ಅಕ್ಷರ ಒಟ್ಟಿಗೆ ಎರಡು ಬಾರಿ ಬಂದಾಗ ಅಲ್ಲಿ ಒಂದನ್ನು ಲೋಪ ಮಾಡಬಹುದು. ಹಾಗಾಗಿ ಮಾತರಿಶ್ವನ್ ನಃ ಎನ್ನುವುದನ್ನು ಇಲ್ಲಿ ‘ಮಾತರಿಶ್ವ ನಃ’ ಎಂದಿದ್ದಾರೆ.] ಮಾತರಿಶ್ವ ಎನ್ನುವ ಹೆಸರು ಕೇವಲ ಪ್ರಾಣದೇವರಿಗೆ ಮಾತ್ರ ಇರುವುದು. ‘ಮಾತರಿ+ಶ್ವ’ ಎಂದರೆ: ಆಕಾಶ(ಮಾತೃ)ದಲ್ಲಿ ಸಂಚರಿಸುವವ(ಗಾಳಿ) ಎಂದರ್ಥ. ಮಾತೃ ಎಂದರೆ ನಿರ್ಮಾತೃ. ಈ ಜಗತ್ತನ್ನು ನಿರ್ಮಾಣ ಮಾಡಿದ ಭಗವಂತನಲ್ಲಿ ಸದಾ ಸಂಚರಿಸುತ್ತಿರುವ ಪ್ರಾಣದೇವರು ಮಾತರಿಶ್ವ. ಮಾತೃ ಎಂದರೆ ತಾಯಿ. ತಾಯಿಯ ಗರ್ಭದಲ್ಲಿ ಚಲಿಸಿ ಅಲ್ಲಿ ಬೆಳೆಯುತ್ತಿರುವ ಮಗುವನ್ನು ಪಾಲಿಸುವವ ಮಾತರಿಶ್ವ. ಮಾತೃ ಎಂದರೆ ‘ಮಾತು’. ಋಗ್ವೇದ, ಯಜುರ್ವೇದ, ಸಾಮವೇದಗಳೇ ಮೊದಲ ಮಾತು. ಸದಾ ವೇದಗಳಲ್ಲಿ ಚಲಿಸುವವ, ಸದಾ ವೇದಾರ್ಥ ಚಿಂತನದಲ್ಲಿ ತೊಡಗಿದವ ಮಾತರಿಶ್ವ. ಹೀಗೆ ನಾನಾ ಬಗೆಯಿಂದ ಪ್ರಾಣದೇವರ ಕ್ರಿಯೆಗಳನ್ನು ಹೇಳುವ ಅಪೂರ್ವವಾದ ಶಬ್ದ ‘ಮಾತರಿಶ್ವ’. ಆದ್ದರಿಂದ ದೇವತೆಗಳು ಹೇಳುತ್ತಾರೆ: “ಓ ಮಾತರಿಶ್ವನೇ, ನೀನು ನಮಗೆಲ್ಲಾ ತಂದೆ. ತಾಯಿಯ ಗರ್ಭದಲ್ಲಿದ್ದು ಅದನ್ನು ಬೆಳೆಸುವವನು ನೀನು, ವೇದಗಳ ನಿಜವಾದ ಅರ್ಥವನ್ನು ಬಲ್ಲವನು ನೀನು, ವೇದಾರ್ಥಭೂತನಾದ ಭಗವಂತನನ್ನು ತಿಳಿದವನು ನೀನು, ಎಲ್ಲರಿಗೂ ಉಸಿರು ನೀಡುತ್ತಾ ಆಕಾಶದಲ್ಲಿ ಚಲಿಸುವವನು ನೀನು” ಎಂದು.
 
ಪ್ರಶ್ನೋಪನಿಶದ್ : ಪ್ರಶ್ನೆ 2 (12 - 13)

ಯಾ ತೇ ತನೂರ್ವಾಚಿ ಪ್ರತಿಷ್ಠಿತಾ ಯಾ ಶ್ರೋತ್ರೇ ಯಾ ಚ ಚಕ್ಷುಷಿ ।
ಯಾ ಚ ಮನಸಿ ಸಂತತಾ ಶಿವಾಂ ತಾಂ ಕುರೂ ಮೋತ್ಕ್ರಮೀಃ ॥ ೧೨ ॥

ಈ ವಿಶೇಷವಾದ ಚರ್ಚೆಯಲ್ಲಿ ಪಾಲ್ಗೊಂಡ ಪ್ರಮುಖ ದೇವತೆಗಳಾದ ಅಗ್ನಿ(ವಾಗ್ದೇವತೆ), ಇಂದ್ರ, ಗರುಡ, ಶೇಷ, ರುದ್ರ(ಮನೋಭಿಮಾ
ನಿಗಳು), ಸೂರ್ಯ(ಕಣ್ಣಿನ ಅಭಿಮಾನಿ) ಮತ್ತು ಚಂದ್ರ(ಕಿವಿಯ ಅಭಿಮಾನಿ) ಈಗ ಹೇಳುತ್ತಾರೆ: “ಅಗ್ನಿಯಲ್ಲಿ ಕೂತು ನುಡಿಸುವವನು ನೀನು. ಆದ್ದರಿಂದ ವಾಗೇಂದ್ರಿಯದಲ್ಲಿರುವ ನಿನ್ನ ರೂಪವನ್ನು ದೇಹದಿಂದ ಹೊರಕಳುಹಿಸಬೇಡ. ಕಿವಿಯಲ್ಲಿ ನಿನ್ನ ಪ್ರಾಣಶಕ್ತಿ ಇದೆ, ಕಣ್ಣಿನಲ್ಲಿ ನಿನ್ನ ಸನ್ನಿಧಾನವಿದೆ. ನೀನಿಲ್ಲದೆ ಸೂರ್ಯ ಚಂದ್ರರು ಏನೂ ಮಾಡಲು ಸಾಧ್ಯವಿಲ್ಲ. ಮನಸ್ಸನ್ನು ನಿಯಂತ್ರಿಸುವ ನಿನ್ನ ರೂಪವನ್ನು ಮನಸ್ಸಿನಲ್ಲಿ ಇರಗೊಡು. ಎಲ್ಲಾ ದೇವತೆಗಳ ಒಳಗಿದ್ದು ಸಮಸ್ತ ಇಂದ್ರಿಯಗಳ ವ್ಯಾಪಾರವನ್ನು ನಿಯಂತ್ರಿಸಿ ಈ ಜಗತ್ತಿಗೆ ಬೆಳಕು ನೀಡುವವನು ನೀನು. ನಿನ್ನ ಮಾಂಗಲಿಕವಾದ ದೃಷ್ಟಿ ಎಲ್ಲಾ ಇಂದ್ರಿಯಗಳ ಮೇಲಿರಲಿ. ಇದರಿಂದ ಕಣ್ಣು ಒಳ್ಳೆಯದನ್ನು ನೋಡಲಿ, ಕಿವಿ ಒಳ್ಳೆಯದನ್ನು ಕೇಳಲಿ, ಬಾಯಿ ಒಳ್ಳೆಯದನ್ನು ನುಡಿಯಲಿ, ಮನಸ್ಸು ಒಳ್ಳೆಯದನ್ನು ಗ್ರಹಿಸಲಿ. ಎಲ್ಲವೂ ಮಾಂಗಲಿಕವಾಗಿ ಒಳ್ಳೆಯ ಅನುಭವ ಬರುವಂತೆ ಮಾಡು. ದಯವಿಟ್ಟು ಈ ದೇಹದಿಂದ ನೀನು ಹೊರ ಹೋಗಬೇಡ. ನಮ್ಮೊಳಗೆ ಕೂತು ನಮ್ಮನ್ನು ನಡೆಸು” ಎಂದು ದೇವತೆಗಳು ಪ್ರಾಣದೇವರನ್ನು ಪ್ರಾರ್ಥಿಸುತ್ತಾರೆ.
ಈ ಮೇಲಿನ ಎಂಟು ಮಂತ್ರಗಳಲ್ಲಿ ಬಂದಿರುವ ಮಳೆ, ಸುಡುವುದು, ಉಸಿರಾಡಿಸುವುದು, ಗರ್ಭರಕ್ಷಣೆ, ಇತ್ಯಾದಿ ಕ್ರಿಯೆಗಳು ಮತ್ತು ಸೂರ್ಯ, ಚಂದ್ರ, ಅಗ್ನಿ, ವಹ್ನಿ, ಪರ್ಜನ್ಯ, ಪ್ರಜಾಪತಿ ಇತ್ಯಾದಿ ಶಬ್ದಗಳು ಮೂಲತಃ ಭಗವಂತನನ್ನು ಹೇಳುತ್ತವೆ. ಭಗವಂತನ ಆನಂತರ ಇವು ವಾಯುದೇವರನ್ನು ಹೇಳುತ್ತವೆ. ಇದು ನೇರವಾಗಿ ವಾಯುದೇವರ ಮುಂದೆ ದೇವತೆಗಳು ಮಾಡಿದ ಶ್ಲೋಕವಾದ್ದರಿಂದ ಇದು ವಾಯುಸ್ತುತಿ. ಆದರೆ ಇದು ವಿಷ್ಣುಸ್ತೋತ್ರವೂ ಹೌದು ಎನ್ನುವುದಕ್ಕೆ ಮುಂದಿನ ಮಂತ್ರದಲ್ಲಿ ನಮಗೆ ಖಚಿತವಾದ ಮಾಹಿತಿ ದೊರೆಯುತ್ತದೆ. ಅಲ್ಲಿ ದೇವತೆಗಳು ಪ್ರಾಣನ ಅಂತರ್ಗತ ನಾರಾಯಣನನ್ನೂ ಕೂಡಾ ಸ್ತೋತ್ರ ಮಾಡಿದ್ದಾರೆ ಎನ್ನುವುದು ಖಚಿತವಾಗಿ ತಿಳಿಯುತ್ತದೆ.

ಪ್ರಾಣಸ್ಯೇತದ್ ವಶೇ ಸರ್ವಂ ತ್ರಿದಿವೇ ಯತ್ ಪ್ರತಿಷ್ಠಿತಂ ।
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನ ಇತಿ ॥ ೧೩ ॥

ದೇವತೆಗಳು ಹೇಳುತ್ತಾರೆ: “ಓ ಪ್ರಾಣದೇವನೇ, ಸರ್ವ ಜಗತ್ ಚೇಷ್ಠಕನಾದ ನಿನ್ನ ವಶದಲ್ಲಿ ಎಲ್ಲವೂ ಇದೆ” ಎಂದು. ಇಲ್ಲಿ ತ್ರಿದಿವ ಎನ್ನುವ ಪದ ಬಳಕೆಯಾಗಿದೆ. ತ್ರಿದಿವ ಎಂದರೆ ಮೇಲಿನ ಸ್ವರ್ಗಲೋಕ ಮತ್ತು ಅದರಿಂದಾಚೆಗೆ ಸತ್ಯಲೋಕದ ತನಕ ಇರುವ ಎಲ್ಲಾ ಲೋಕಗಳು[ಮೇಲಿನ ಏಳು ಲೋಕಗಳು: ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯಲೋಕ] ಪ್ರಾಣದೇವರಿರುವ ಸ್ಥಾನ ಸತ್ಯಲೋಕ. ಇದು ಅತ್ಯಂತ ಉನ್ನತವಾಗಿರುವ ‘ತ್ರಿದಿವ’. ಇಲ್ಲಿಯ ತನಕ ಇರುವ ಸಮಸ್ತವೂ ಪ್ರಾಣ ದೇವರ ಅಧೀನವಾಗಿದೆ.
ಜಡಕ್ಕೆ ರೂಪಕೊಡುವವರು ಪ್ರಾಣದೇವರು. ಜೀವಕ್ಕೆ ಉಸಿರುಕೊಟ್ಟು ಬದುಕಿಸಿ ರಕ್ಷಣೆ ಮಾಡುವವರು ಪ್ರಾಣದೇವರು. ಆದ್ದರಿಂದ ಎಲ್ಲವೂ ಪ್ರಾಣದೇವರ ವಶ. ಸಮಸ್ತ ದೇವತೆಗಳೂ ಪ್ರಾಣದೇವರ ಅಧೀನವಾಗಿ, ಅವರ ನಿಯತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. “ನೀನು ನಿಯಮಿಸಿದ ಕೆಲಸವನ್ನು ನಿನ್ನ ಆಜ್ಞಾನುಸಾರ ನೀನು ಕೊಟ್ಟ ಶಕ್ತಿಯಿಂದ ನಾವು ಮಾಡುತ್ತೇವೆ” ಎನ್ನುತ್ತಾರೆ ದೇವತೆಗಳು. ಇದು ಭಗವಂತನ ಮತ್ತು ಪ್ರಾಣದೇವರ ಶಕ್ತಿ ವಿಶೇಷ.
ಕೊನೆಯದಾಗಿ ದೇವತೆಗಳು ಹೇಳುತ್ತಾರೆ: “ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನಃ” ಎಂದು. ಇಲ್ಲಿ ನಮಗೆ ಈ ವಾಯುಸ್ತುತಿ ಕೇವಲ ವಾಯುಸ್ತುತಿಯಷ್ಟೇ ಅಲ್ಲ ಹರಿಸ್ತುತಿ ಕೂಡಾ ಹೌದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ದೇವತೆಗಳು ಕೊನೆಯದಾಗಿ “ಓ ಶ್ರೀದೇವಿಯೇ” ಎಂದು ತಾಯಿಯನ್ನು ಸಂಬೋಧಿಸಿದ್ದಾರೆ. ನಮಗೆ ತಿಳಿದಂತೆ ‘ಶ್ರೀ’ ಅಂದರೆ ಲಕ್ಷ್ಮಿ. ಇನ್ನೊಂದು ಅರ್ಥದಲ್ಲಿ ‘ಶಂ’ ಎಂದರೆ ಆನಂದಸ್ವರೂಪನಾಗಿರುವ ಪ್ರಾಣದೇವರು. ಅವನಲ್ಲಿ ರಮಿಸುವವಳು ಶ್ರೀಃ. ಅಂದರೆ ಪ್ರಾಣದೇವರ ಮಡದಿ ಭಾರತೀದೇವಿ. [ಭಾರತೀದೇವಿಯನ್ನೂ ಕೂಡಾ ಶ್ರೀ ಎಂದು ಕರೆಯುತ್ತಾರೆ ಎನ್ನುವುದು ನಮಗೆ ಪಾಂಡವರ ಸ್ವರ್ಗಾರೋಹಣದ ನಂತರ ಬರುವ ಕಥೆಯಲ್ಲಿ ತಿಳಿಯುತ್ತದೆ. ಅಲ್ಲಿ ಧರ್ಮರಾಯ ಭಾರತೀದೇವಿಯನ್ನು ದ್ರೌಪದಿ ಎಂದು ತಪ್ಪಾಗಿ ತಿಳಿದಾಗ ಆತನಿಗೆ ಭಾರತೀದೇವಿಯ ಪರಿಚಯ ಮಾಡುವಾಗ ‘ಶ್ರೀಃ’ ಎಂದು ಪರಿಚಿಸುವುದನ್ನು ಕಾಣುತ್ತೇವೆ]
ದೇವತೆಗಳು ತಮ್ಮ ಸ್ತುತಿಯನ್ನು ಲಕ್ಷ್ಮೀ-ಭಾರತಿಯರ ಸ್ತುತಿಯೊಂದಿಗೆ ಉಪಸಂಹಾರ ಮಾಡುತ್ತಾ ಹೇಳುತ್ತಾರೆ: “ ಓ ಶ್ರೀದೇವಿಯೇ[ಓ ಲಕ್ಷ್ಮೀ ದೇವಿಯೇ, ಓ ಭಾರತೀ ದೇವಿಯೇ] ನೀನು ನಮ್ಮನ್ನು ರಕ್ಷಿಸು. ನಾವು ನಿನ್ನ ಮಕ್ಕಳು. ಮಕ್ಕಳು ತಪ್ಪು ಮಾಡಿದಾಗ ತಾಯಿ ಹೇಗೆ ಕ್ಷಮಿಸುತ್ತಾಳೋ ಹಾಗೆ ನಮ್ಮ ತಪ್ಪನ್ನು ಕ್ಷಮಿಸಿ ನಮ್ಮನ್ನು ಸಲಹು” ಎಂದು. “ನಾವು ನಿನ್ನಲ್ಲಿ ಬೇಡುವುದು ಒಂದನ್ನೇ. ನಮಗೆ ಒಳ್ಳೆಯ ಬುದ್ಧಿಕೊಡು ಎಂದು. ಶ್ರೇಷ್ಠವಾದ ಜ್ಞಾನ, ಜ್ಞಾನದಿಂದ ಪ್ರಾಣ ಮತ್ತು ಭಗವಂತನ ಎಚ್ಚರ, ಅದರಿಂದ ಭಗವಂತನ ನಿಯತಿಗೆ ತಕ್ಕನಾಗಿ ನಮ್ಮ ಕರ್ಮ ನಿರ್ವಹಣೆ ಮಾಡುವ ಶಕ್ತಿಯನ್ನು ನಮಗೆ ಕೊಡು” ಎಂದು ದೇವತೆಗಳು ಬೇಡುತ್ತಾರೆ.
ಇಲ್ಲಿಗೆ ದೇವತೆಗಳು ಪ್ರಾಣದೇವರ ಮುಂದೆ ಹಾಡಿದ ಒಂಬತ್ತು ಮಂತ್ರಗಳ ಅಪೂರ್ವವಾದ ಈ ವೈದಿಕ ಹರಿ-ವಾಯುಸ್ತುತಿಯ ಜೊತೆಗೆ ಎರಡನೇ ಪ್ರಶ್ನೆ/ಅಧ್ಯಾಯ ಮುಕ್ತಾಯವಾಯಿತು(ಇತಿ).

ಇತಿ ಷಟ್ ಪ್ರಶ್ನೋಪನಿಷದಿ ದ್ವಿತೀಯಃ ಪ್ರಶ್ನಃ ॥

ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಎರಡನೇ ಪ್ರಶ್ನೆ/ಅಧ್ಯಾಯ ಮುಗಿಯಿತು.
 

ನವಗ್ರಹ ಮತ್ತು ದೀಪರಾಧನೆ...



                                                              ನವಗ್ರಹ ಮತ್ತು ದೀಪರಾಧನೆ...

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ

ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.


ಸೂರ್ಯ :

ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||

ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.

ಚಂದ್ರ :

ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ |
ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ ||

ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬೆಳಗಿದವರು ಕಾಂತಿವಂತರೂ , ತೇಜೋವಂತರೂ ಆಗುತ್ತಾರೆ. ಕಟಕ ಲಗ್ನ ಅಥವಾ ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಕಟಕ ರಾಶಿಯವರು ಬೆಳ್ಳಿದೀಪಾರಾಧನೆ ಮೂಲಕ ಚಂದ್ರನನ್ನು ಪೂಜಿಸಿದರೆ ಶುಭಫಲಗಳು ಶತಸಿದ್ಧ.

ಮಂಗಳ :

ಮಹಿಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ |
ಮಹಾವೀರೋ ಮಹಾಶೂರೋ ಮಹಾಬಲ ಪರಾಕ್ರಮಃ ||

ಈ ಮಂತ್ರದ ಮೂಲಕ ಮತ್ತು ಕುಜ ಅಷ್ಟೋತ್ತರ ಸ್ತೋತ್ರಗಳ ಪಠನದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಕುಜ ದೋಷದ ಪರಿಹಾರ ಸಾಧ್ಯ ಮತ್ತು ಮನದ ಉದ್ವೇಗ ಕಡಿಮೆಯಾಗುತ್ತದೆ. ಯಾರಿಗೆ ಅಧಿಕ ರಕ್ತದೊತ್ತಡ ಇದೆಯೋ ಅವರು ದೀಪ ಬೆಳಗಿದಲ್ಲಿ ರಕ್ತದೊತ್ತಡ ಕಡಿಮೆ ಮಾಡಬಹುದು.

ಬುಧ :

ಬುಧೋ ಬುಧಾರ್ಚಿತಃ ಸೌಮ್ಯಃ ಚಿತ್ತಃ ಶುಭಪ್ರದಃ |
ದೃಢವ್ರತೋ ದೃಢಫಲಃ ಶ್ರುತಿಚಾಲ ಪ್ರಭೋಧಕಃ ||

ಈ ಮಂತ್ರದ ಪಠನದ ಮೂಲಕ ದೀಪ ಬೆಳಗಿದಲ್ಲಿ ಶುಭಫಲ ಲಭ್ಯವಾಗುವುದು. ಬುದ್ಧಿಶಕ್ತಿಗೆ ಕಾರಕ ಗ್ರಹ ಬುಧ. ಮಿಥುನ ಮತ್ತು ಕನ್ಯಾರಾಶಿಯವರಿಗೆ ಬುಧ ಅಧಿಪತಿ. ಈ ಜಾತಕರು ಬುಧನ ಆರಾಧನೆ ಮಾಡಿದರೆ ಉತ್ತಮ. ಇತರ ಜಾತಕರಿಗೂ ಒಳ್ಳೆ ಫಲ ಇದೆ, ಸ್ವಂತ ವ್ಯವಹಾರ ಮಾಡುವವರು ಬೆಳ್ಳಿ ದೀಪ ಬೆಳಗಿದಲ್ಲಿ ಅಭಿವೃಧ್ಹಿ ಕಾಣುವರು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ.

ಗುರು :

ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಂ |
ಬುದ್ದಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ||
ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇರತಃ |
ಅನೇಕ ಶಿಷ್ಯ ಸಂಪೂರ್ಣಂ ಪೀಡಾಂ ಹರತು ಮೇ ಗುರುಃ ||

ಈ ಮಂತ್ರ ಪಠಿಸಿ ಬೆಳ್ಳಿ ದೀಪವನ್ನು ಕಡಲೆಕಾಯಿ ಎಣ್ಣೆ ಬಳಸಿ ಬೆಳಗಿಸಿದರೆ ಗುರು ಸಂಪ್ರೀತನಾಗುತ್ತಾನೆ. ಎಲ್ಲಾ ವಿಧದ ಜಯಗಳನ್ನು ಕೊಡುತ್ತಾನೆ ಮತ್ತು ಉದರ ಸಂಬಂಧೀ ಕಾಯಿಲೆಗಳು ಶಮನವಾಗುತ್ತದೆ.

ಶುಕ್ರ :

ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ||
ದೈತ್ಯ ಮಂತ್ರೀ ಗುರುಸ್ತೇಷಾಂ ಪ್ರಾಣದಸ್ಯ ಮಹಾಮತಿಃ |
ಪ್ರಭುಸ್ತಾರಾ ಗ್ರಹಾಣಾಂಚ ಪೀಡಾಂ ಹರತು ಮೇ ಭೃಗು ||

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿಸಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಮತ್ತು ಪತಿ ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಿ ಸಾಮರಸ್ಯ ಏರ್ಪಡುತ್ತದೆ. ಶುದ್ಧ ತುಪ್ಪವನ್ನು ಬಳಸಿ ದೀಪ ಬೆಳಗುವುದರಿಂದ ಪಿತ್ರಾರ್ಜಿತ ಆಸ್ತಿಯು ದೊರಕುತ್ತದೆ.

ಶನಿ :

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||
ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ |
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ ||

ಶನಿ ದೇವರಿಗೆ ಪ್ರಿಯವಾದ ಧಾನ್ಯ ಎಳ್ಳು ಹಾಗಾಗಿ ಎಳ್ಳೆಣ್ಣೆಯಿಂದ ಬೆಳ್ಳಿದೀಪ ಬೆಳಗಿದರೆ ಶುಭಫಲ ಮತ್ತು ಗುಪ್ತರೋಗಗಳು ಪರಿಹಾರವಾಗುವುದು. 19 ಶನಿವಾರ ಈ ರೀತಿ ದೀಪ ಬೆಳಗಿಸಿದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಪರಿಹಾರ ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ.

ರಾಹು :

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ |
ಸಿಂಹಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಪೂರ್ವಜರಿಂದ ಬಂದ ಪಾಪಗಳ ನಿವಾರಣೆಯಾಗುತ್ತದೆ, ಸರ್ಪದೋಷ ನಿವಾರಣೆ, ಬಡತನ ನಿವಾರಣೆ ಆಗುತ್ತದೆ. ತುಪ್ಪ ಬಳಸಿ ದೀಪ ಹಚ್ಚಿದಲ್ಲಿ ನಾಗಹತ್ಯಾ ದೋಷ ನಿವಾರಣೆ ಆಗುತ್ತದೆ, ಪುರಾತನ ರೋಗ ನಿವಾರಣೆ, ಅನಾರೋಗ್ಯ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.

ಕೇತು :

ಪಾಲಾಶ ಪುಷ್ಪ ಸಂಕಾಶಂ ತಾರಾಗ್ರಹ ಮಸ್ತಕಂ |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ||

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಅಪಘಾತ ಭೀತಿ ದೂರವಾಗುತ್ತದೆ, ಕೆಲಸ ಕಾರ್ಯಗಳಲ್ಲಿನ ವಿಘ್ನ ದೂರವಾಗುತ್ತದೆ, ಪುತ್ರ ಸಂತಾನದ ಅಪೇಕ್ಷೆ ಇದ್ದವರು 21 ದಿನಗಳ ಕಾಲ ತುಪ್ಪದಿಂದ ಬೆಳ್ಳಿ ದೀಪ ಬೆಳಗಿಸಿದರೆ ಮನೋಭಿಲಾಷೆ ಪೂರ್ಣವಾಗುತ್ತದೆ. ಕೇತುವಿನ ಎದುರು ಬೆಳ್ಳಿ ದೀಪ ಬೆಳಗಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಹಾಗೆಯೇ ಗಂಗಾಸ್ನಾನದ ಫಲದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಗ್ರಂಥ : ದೀಪ ಸಂಪುಟ
ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ಪಿತೃಪಕ್ಷದ ವೈಶಿಷ್ಟ್ಯ



                                                                  ಪಿತೃಪಕ್ಷದ ವೈಶಿಷ್ಟ್ಯ

ಹಿಂದೂ ಪಂಚಾಂಗದಲ್ಲಿ ಪ್ರತಿ ಮಾಸದಲ್ಲೂ ಎರಡು ಪಕ್ಷಗಳಿವೆ. ಒಂದು ಶುಕ್ಲ ಪಕ್ಷ ಇನ್ನೊಂದು ಕೃಷ್ಣ ಪಕ್ಷ. ಶುಕ್ಲಪಕ್ಷವು ಅಮಾವಾಸ್ಯೆಯ ನಂತರ ಬಂದರೆ, ಹುಣ್ಣಿಮೆಯ ನಂತರ ಕೃಷ್ಣಪಕ್ಷ ಬರುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದೂ

ಕರೆಯುತ್ತೇವೆ. ಅಂದರೆ, ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗೆ. ಈ 15 ದಿನಗಳಲ್ಲಿ ಮದುವೆ, ಉಪನಯನ, ಚೂಡಾಕರ್ಮ ಮುಂತಾದ ದೇವತಾ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿಡಲಾಗಿದೆ.

ಮಾನವನ ಹುಟ್ಟಿನಿಂದ ಸಾವಿನವರೆಗೆ ಅವನಿಗೆ ಒಟ್ಟು 16 ಕರ್ಮಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು ಜಾತಕ ಕರ್ಮ, ನಾಮಕರಣ, ಚೂಡಾ ಕರ್ಮ, ಉಪನಯನ, ಮದುವೆ ಮತ್ತು ಶ್ರಾದ್ಧ ಕರ್ಮ. ಈ ಶ್ರಾದ್ಧ ಕರ್ಮವನ್ನು ಹಿಂದೂಗಳಲ್ಲದೆ ದೇಶದ ಎಲ್ಲ ಧರ್ಮ, ಜಾತಿ, ಮತದವರೂ ಸಹ ಅವರವರ ಧರ್ಮಕ್ಕೆ ಅನುಗುಣವಾಗಿ ಆಚರಿಸುತ್ತಾರೆ.

ಶ್ರದ್ಧೆಯಿಂದ ಮಾಡುವ ಮಾತಾ ಪಿತೃಗಳ ಆರಾಧನೆಯನ್ನು ಶ್ರಾದ್ಧ ಎನ್ನುವರು. ಈ ಶ್ರಾದ್ಧ ಸಾಧು, ಸನ್ಯಾಸಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಸನ್ಯಾಸ ಸ್ವೀಕರಿಸಿದಾಗ ತಾವೇ ಆತ್ಮ ಶ್ರಾದ್ಧ ಮಾಡಿಕೊಂಡಿರುತ್ತಾರೆ. ಬ್ರಹ್ಮಪುರಾಣದಲ್ಲಿ ಯೂ ಶ್ರಾದ್ಧದ ಬಗ್ಗೆ ಉಲ್ಲೇಖವಿದೆ.

ಅರ್ಥ: ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ದೇಶ, ಕಾಲ ಪಾತ್ರಗಳನ್ನು ಗಮನದಲ್ಲಿರಿಸಿಕೊಂಡು ಸದ್ಬ್ರಾಹ್ಮಣರಿಗೆ ಶ್ರದ್ಧೆಯಿಂದಲೂ ಶಾಸ್ತ್ರವಿಧಿಗೆ ಅನುಸಾರವಾಗಿಯೂ ಏನನ್ನು ದಾನವಾಗಿ ಕೊಡುತ್ತಾನೆಯೊ ಅದು ಶ್ರಾದ್ಧವಾಗುತ್ತದೆ.

ಋಣಗಳಲ್ಲಿ 3 ವಿಧಗಳಿವೆ. 1. ದೇವಋನ, 2. ಋಶಿ ಋಣ ಮತ್ತು 3. ಪಿತೃಋಣ.

ದೇವ ಋಣ ಮತ್ತು ಋಶಿ ಋಣವನ್ನು ತೀರಿಸಬಹುದು. ಆದರೆ, ಮಾತಾ ಪಿತೃಋಣ ತಿರಿಸಲಾಗದು ಎನ್ನುತ್ತದೆ ಶಾಸ್ತ್ರ .

ಏಕೆಂದರೆ ತಾಯಿಗೆ ಸಮನಾದ ವಸ್ತು ಬೇರೊಂದಿಲ್ಲ. ಆಕೆ ನಮ್ಮನ್ನು ನವಮಾಸಗಳು ಗರ್ಭದಲ್ಲಿ ಹೊತ್ತು ಸಾಕಿ ಹೆತ್ತವಳು. ತನ್ನ ರಕ್ತಮಾಂಸಗಳನ್ನೇ ಹಾಲಾಗಿಸಿ ಉಣಿಸಿರುವಳು. ಬೇಸರ ಮತ್ತು ಹೇಸಿಗೆ ಇಲ್ಲದೆ ನಮ್ಮನ್ನು ಸಾಕುತ್ತಾಳೆ. ತಂದೆಯು ಇಡಿ ಸಂಸಾರದ ಭಾರವನ್ನು ಜೀವಮಾನ ಹೊತ್ತು ಮಕ್ಕಳ ಹಿತ ಮತ್ತು ಅವರ ಭವಿಷ್ಯಕ್ಕಾಗಿ ತನ್ನ ಕಷ್ಟಗಳನ್ನೆಲ್ಲಾ ಮರೆತು ದುಡಿಯುತ್ತಾನೆ. ಇಂಥಹ ತಾಯಿ ತಂದೆಯ ಋಣವನ್ನು ತೀರಿಸಲು ನಾವು ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಬೇಕು. ಮಾತಾಪಿತೃಗಳ ನಿಧನದ ನಂತರ ಅವರು ಪಿತೃದೇವತೆಗಳೆನಿಸುವ ಕಾರಣ ಶ್ರಾದ್ಧವನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯ ರೀತಿಯಲ್ಲಿ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಈ ಕುರಿತ ಉಲ್ಲೇಖ ಶಂಕರಾಚಾರ್ಯರು ಭಜಗೋವಿಂದಂನಲ್ಲಿ ಇದೆ.

ಈ ಹುಟ್ಟು ಸಾವುಗಳು ನಮಗೆ ಮುಕ್ತಿ ಸಿಗುವವರೆಗೂ ನಿರಂತರ ನಡೆಯುತ್ತಿರುತ್ತವೆ. ಆದ್ದರಿಂದ ಮಾತಾಪಿತೃಗಳ ಆತ್ಮಕ್ಕೆ ಶಾಂತಿಸಿಗಲಿ ಎಂದು ಈ ಪಿತೃಪಕ್ಷವನ್ನು ಮಾಡಬೇಕು.

ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಪ್ರಾಯಶ್ಚಿತ್ತವಿರುವುದು. ಆದರೆ, ಪಿತೃದ್ರೋಹಿಗಳಿಗೆ ಮಾತ್ರ ಪ್ರಾಯಶಿತ್ತ ಇಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಪಿತೃಪಕ್ಷದಲ್ಲಿ ಮಾಡುವ ಕಾರ್ಯವು ಮಾತಾಪಿತೃಗಳಿಗಲ್ಲದೆ ಅಜ್ಜ , ಅಜ್ಜಿ, ಮುತ್ತಜ್ಜ-ಮುತ್ತಜ್ಜಿ ಇವರಿಗೂ ಸಲ್ಲುತ್ತದೆ. ಹಾಗೂ ರಕ್ತಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಅವರುಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃಪಕ್ಷ ಮಾಡುವುದರಿಂದ ಅವರ ಆಶಿರ್ವಾದವು ನಮ್ಮ ಸಂತಾನಕ್ಕೆ ಮತತು ಕುಟುಂಬಕ್ಕೆ ಶ್ರೇಯಸ್ಸು ತರುತ್ತದೆ. ಈ ಪಿತೃಪಕ್ಷದಲ್ಲಿ ಭಕ್ತಿ, ಶ್ರದ್ಧೆಯಿಂದ ಮಾತಾಪಿತೃಗಳ ಕಾರ್ಯವನ್ನು ಆಚರಿಸಿ ಋಣಮುಕ್ತರಾಗೋಣ. ಅಕ್ಟೋಬರ್ 1 ರಿಂದ 15ರ ಪಿತೃಪಕ್ಷ ಇರಲಿದೆ.

ಮಂಡಗದ್ದೆ ಪ್ರಕಾಶ್‌ಬಾಬು. ಕೆ ಆರ್.